ಚಿತ್ರದುರ್ಗ. ಜುಲೈ10: ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತಂತೆ ಚಳ್ಳಕರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಅವರು ತುರುವನೂರು ಹೋಬಳಿ ವ್ಯಾಪ್ತಿಯ ವಿವಿಧೆಡೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ಎಸ್.ಐ.ಆರ್ ಕಾರ್ಯವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ ಬೆಳಗಟ್ಟ ಗ್ರಾಮದ ಬಿ.ಎಲ್.ಒ ಓಬಯ್ಯ ರವರ ಕಾರ್ಯಕ್ಷಮತೆ ಶ್ಲಾಘಿಸಿದ ಅಧಿಕಾರಿಗಳು, ಓಬಯ್ಯ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತುರುವನೂರು ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ನವೀನ್ ಕುಮಾರ್ ಹಾಗೂ ಬಿ.ಎಲ್.ಒ ಮೇಲ್ವಿಚಾರಕ ಹೊಸಮನಿ ಚಂದ್ರಪ್ಪ ಇದ್ದರು.








