ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜು. 10 : ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ, ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಚಿತ್ರದುರ್ಗ, ಪತಂಜಲಿ ಯೋಗ ಸಂಸ್ಥೆ ಚಿತ್ರದುರ್ಗ, ಪತಂಜಲಿ ಮಹಿಳಾ ಯೋಗ ಸಂಸ್ಥೆ ಚಿತ್ರದುರ್ಗ, ಸಂಗಮ ಯೋಗ ಬಳಗ ಚಿತ್ರದುರ್ಗ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಹಾಗೂ ನುರಿತ ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನಾ ಶಿಬಿರವೂ ಜು. 10ರ ಶುಕ್ರವಾರ ಬೆಳಗ್ಗೆ 7ರಿಂದ 9ರ ವರೆಗೆ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಶಿಬಿರದಲ್ಲಿ ಉಚಿತವಾಗಿ ಬ್ಲಡ್ ಪ್ರೆಷರ್, ಬ್ಲಡ್ ಶುಗರ್, ತೂಕ ತಪಾಸಣೆ ಹಾಗೂ ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆ ಲಭ್ಯವಿತ್ತು. ದಿನನಿತ್ಯ ಕ್ರೀಡಾಂಗಣದಲ್ಲಿ ಯೋಗಾಭ್ಯಾಸ ಮಾಡುವ ಸುಮಾರು 135ಕ್ಕೂ ಹೆಚ್ಚು ಜನ ಇದರ ಸದುಪಯೋಗವನ್ನು ಪಡೆದುಕೊಂಡರು.
ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರು ರೋ. ಶಶಿಧರ್ ರಾವ್, ಕಾರ್ಯದರ್ಶಿಗಳು ರೋ. ಮಂಜುನಾಥ್ ಭಾಗವತ್, ಖಜಾಂಚಿ ರೋ. ಪಿ.ಬಿ. ಶಿವರಾಮ್, ಮಾಜಿ ಅಧ್ಯಕ್ಷರುಗಳಾದ ರೋ. ಶಂಕರಪ್ಪ, ರೋ. ನಾಗರಾಜ್ ಸಂಗಂ ಹಾಗೂ ಸಹಯೋಗ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಸದಸ್ಯರುಗಳಾದ ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ರೋ. ಮಧುಪ್ರಸಾದ್, ರೋ. ಮಾಧುರಿ ಮಧುಪ್ರಸಾದ್, ರೋ. ಗಿರೀಶ್, ರೋ. ಅರುಣ್ ಕುಮಾರ್ ಹಾಗೂ ಇನ್ನಿತರ ರೋಟರಿ ಸದಸ್ಯರು, ಪ್ರಾಧ್ಯಾಪಕರಾದ ಗುರುಸ್ವಾಮಿ, ಸುನಿಲ್ ಕುಮಾರ್, ವೇಮಣ್ಣ, ಬಸವೇಶ್ವರ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವತಿಯಿಂದ ತಜ್ಞ ವೈದ್ಯರ ತಂಡ, ಯೋಗಾಭ್ಯಾಸಿಗಳು ಮತ್ತಿತರರು ಉಪಸ್ಥಿತರಿದ್ದರು.










