ಸುದ್ದಿಒನ್, ಚಿತ್ರದುರ್ಗ, ಜೂನ್. 26 : ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ(ರಿ.) ಮಲ್ಲಾಪುರ, ಚಿತ್ರದುರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಅಂತರರಾಷ್ಟ್ರೀಯ ಸಂಗೀತ ದಿನಾಚರಣೆ ಕಾರ್ಯಕ್ರಮವನ್ನು ಇಂಗಳದಾಳು ಗ್ರಾಮದ ತಳವಾರ ಸಂಚಲಪ್ಪ ಪ್ರೌಢಶಾಲೆಯಲ್ಲಿ ಜೂನ್.28 ರಂದು ಶನಿವಾರ ಬೆಳಗ್ಗೆ 8.30 ಕ್ಕೆ ಏರ್ಪಡಿಸಲಾಗಿದೆ.
ಮುಖ್ಯ ಶಿಕ್ಷಕ ಜಿ.ಪಿ. ಆನಂದಕುಮಾರ್ ಅಧ್ಯಕ್ಷತೆ ವಹಿಸುವರು, ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕ ಆರ್.ಎಸ್. ಉಮೇಶ್ ಇವರು ಯೋಗ ಮತ್ತು ಸಂಗೀತ ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡುವರು. ಕನ್ನಡ ಪಂಡಿತ ಜಿ.ವಿ.ತೇಜಸ್ವಿ, ಸಹ ಶಿಕ್ಷಕರಾದ ಆರ್.ರುದ್ರಸ್ವಾಮಿ, ಹೆಚ್. ಧನಂಜಯ. ಎಂ.ರಂಗನಾಥ್, ಬಾದರದಿನ್ನಿ ಆಟ್ಸ್೯ ಅಕಾಡೆಮಿಯ ಪ್ರಕಾಶ್ ಬಾದರದಿನ್ನಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಂಗ ನಿರ್ದೇಶಕ ಕೆಪಿಎಂ. ಗಣೇಶಯ್ಯ ಸಂಗೀತ ತರಬೇತಿ ಹಾಗೂ ಯೋಗ ಚಿಕಿತ್ಸಕ ಎಂ.ಬಿ ಮುರುಳಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರ್ಕಾರ ನಿಗಧಿಪಡಿಸಿದ ಕುವೆಂಪು ವಿರಚಿತ ನಾಡಗೀತೆ, ರೈತಗೀತೆ ಹಾಗೂ ರಾಷ್ಟ್ರಕವಿ ರವೀಂದ್ರನಾಥ್ ಠಾಗೋರರ ವಿರಚಿತ ರಾಷ್ಟ್ರಗೀತೆ, ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆಗಳನ್ನು ಯೋಗ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದು ಚಿನ್ಮಯ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕಿ ಎಸ್. ಉಷಾಉಮೇಶ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















