Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಗಸ್ಟ್ 16 ರಂದು ಒಳ ಮೀಸಲಾತಿ ಕಡ್ಡಾಯವಾಗಿ ಜಾರಿ ಆಗಲೇಬೇಕು : ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಒತ್ತಾಯ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 14 : ಆ.16 ರಂದು ಒಳ ಮೀಸಲಾತಿ ಜಾರಿಗಾಗಿ ಕರ್ನಾಟಕ ಸರ್ಕಾರವು ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕಡ್ಡಾಯವಾಗಿ ಜಾರಿ ಆಗಲೇಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯ ಸಮಿತಿವತಿಯಿಂದ ಒತ್ತಾಯಿಸಲಾಗಿದೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ  ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ರಾಮಚಂದ್ರಪ್ಪ ಕರ್ನಾಟಕದ ವಂಚಿತ ದಲಿತ ಸಮುದಾಯಗಳು ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ನಡೆಸುತ್ತಾ ಬಂದಿರುವ ಹೋರಾಟ ಇದೀಗ ಸಫಲ ತಾರ್ಕಿಕ ಅಂತ್ಯ ಕಾಣುವ ಹೊಸ್ತಿಲಲ್ಲಿದೆ. 2024ರ ಆಗಸ್ಟ್ 1 ರಂದು ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ 6:1 ಬಹುಮತದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಒಳವರ್ಗೀಕರಣ ಮಾಡುವುದು ಸಂವಿಧಾನ ಬದ್ಧವೆಂದು ತೀರ್ಪು ನೀಡಿತ್ತು. ಆ ಮೂಲಕ ಒಳಮೀಸಲಾತಿಯನ್ನು ಜಾರಿ ಮಾಡದಿರಲು ಯಾವ ನೆಪಗಳೂ ಸರ್ಕಾರದ ಮುಂದಿಲ್ಲವಾಗಿತ್ತು. ಆದರೂ ಕರ್ನಾಟಕದ ಸಿದ್ದು ಸರ್ಕಾರ ಅನಗತ್ಯ ವಿಳಂಬವನ್ನು ಮಾಡಿತು. ಸರ್ಕಾರದೊಳಗಿನ ಹಲವಾರು ಪಟ್ಟಭದ್ರರ ಅಸಹಕಾರದ ನಡುವೆಯೂ ನ್ಯಾ. ದಾಸ್ ಅಯೋಗ ತನ್ನ ಸಮಗ್ರ ವರದಿ ಮತ್ತು ಶಿ¥sóÁರಸ್ಸುಗಳನ್ನು ಕಳೆದ ಆಗಸ್ತ್ 4 ರಂದು ಸರ್ಕಾರಕ್ಕೆ ಸಲ್ಲಿಸಿದೆ. ಇದರ ಬಗ್ಗೆ ಚರ್ಚಿಸಲೆಂದೇ ಮುಖ್ಯಮಂತ್ರಿಗಳು ಆಗಸ್ತ್ 16 ರಂದು ಸಚಿವ ಸಂಪುಟದ ವಿಶೇಷ ಸಭೆಯನ್ನು ಕರೆದಿದ್ದಾರೆ.

ಆಗಸ್ಟ್ 4 ರಂದು ಸಂಪುಟದಲ್ಲಿ ವರದಿಯ ಮಂಡನೆಯಾದ ನಂತರ ದಾಸ್ ವರದಿಯ ಪ್ರತಿಗಳು ಎಲ್ಲೆಡೆ ಅನಧಿಕೃತವಾಗಿ ಲಭ್ಯವಾಗುತ್ತಿವೆ. ಸರ್ಕಾರ ಈವರೆಗೆ ಪತ್ರಿಕಾ ವರದಿಗಳನ್ನಾಗಲೀ, ಜಾಲತಾಣದ ವಿಶ್ಲೇಷಣೆಗಳನ್ನಾಗಲೀ ತಪ್ಪೆಂದು ನಿರಾಕರಿಸಿಲ್ಲ. ಹೀಗಾಗಿ ಲಭ್ಯವಿರುವುದು ಅನಧಿಕೃತವಾಗಿ ಹಂಚಿಕೆಯಾಗಿರುವ ಅಧಿಕೃತ ವರದಿಯೇ ಎಂಬುದರಲ್ಲಿ ಸಂಶಯವಿಲ್ಲ.  ಕಳೆದ 35  ವರ್ಷಗಳಿಂದ ಒಳಮೀಸಲಾತಿಗೆ ಹೋರಾಡುತ್ತಾ ಬಂದಿರುವ ವಂಚಿತ ಪರಿಶಿಷ್ಟರಲ್ಲೇ ಸಾಪೇಕ್ಷವಾಗಿ  ಇನ್ನೂ ಹೆಚ್ಚು ವಂಚಿತರಾಗಿರುವ ಮಾದಿಗ ಸಮುದಾಯಗಳು ಆಗಸ್ತ್ 16 ರ ಸಂಪುಟ ಸಭೆಯಲ್ಲೇ ವರದಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಕೂಡಲೇ ದಾಸ್ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದೆ.

ಈ ಹಿಂದೆ ಒಳಮೀಸಲಾತಿಗೆ ಮೌನ ಸಮ್ಮತಿಯನ್ನು ವ್ಯಕ್ತ ಪಡಿಸುತ್ತಿದ್ದ ಹೊಲೆಯ ಸಮುದಾಯದ ಕೆಲವು ಮುಖಂಡರು ನ್ಯಾ. ದಾಸ್ ವರದಿಯನ್ನು ಸುಟ್ಟು ತೀವ್ರ ತಿರಸ್ಕಾರ ತೋರಿದ್ದಾರೆ. ನ್ಯಾ. ದಾಸ್ ವರದಿಯನ್ನು ವಿರೋಧಿಸುತ್ತಿರುವರ ಕೆಲವು ಹೊಲೆಯ ಸಂಬಂಧಿತ ಜಾತಿ ಮುಖಂಡರ ಪ್ರಧಾನ ಆರೋಪ ಮಾದಿಗ ಸಂಬಂಧಿ ಜಾತಿಗಳಷ್ಜೆ ಜನಸಂಖ್ಯೆ ತಮ್ಮದೂ ಇರುವುದರಿಂದ ತಮ್ಮ ವೃಂದಕ್ಕೆ ಮಾದಿಗರಷ್ಜ್ಟೇ ಮೀಸಲಾತಿಯನ್ನು ಕೊಡಬೇಕೆಂಬುದಾಗಿದೆ . ಹಾಗೊ ಈ ಹಿಂದೆ ಹೊಲೆಯ ಸಂಬಂಧಿತ ಜಾತಿಗಳಲ್ಲಿ ಸೇರಿಸಲ್ಪಟ್ಟಿದ್ದ ಜಾತಿಗಳನ್ನು ಮಾದಿಗ ವೃಂದಕ್ಕೆ ಸೇರಿಸಿರುವುದು ಅನ್ಯಾಯವೆನ್ನುವುದು ಅವರ ಆಕ್ಷೇಪ.

ಚಾಂಡಾಲ, ಗರೋಡಿ, ಸಿಂಧೋಳು-ಚಿಂಧೋಳ್ಳು ಎಂಬ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ.ಅಂದರೆ ಸರ್ಕಾರಿ ನೌಕರಿಗಳಲ್ಲಿ ಒಟ್ಟಾರೆ ಪರಿಶಿಷ್ಟ ಜಾತಿಗಳ ಸರಾಸರಿ ಪ್ರಾತಿನಿಧ್ಯಕ್ಕಿಂತ ಬಹುಪಾಲು ಜಾತಿಗಳ ಪ್ರಾತಿನಿಧ್ಯ  ಅತ್ಯಂತ ಕಡಿಮೆ ಇದ್ದರೆ ಕೆಲವು ಜಾತಿಗಳ ಪ್ರಾತಿನಿಧ್ಯ ಸರಾಸರಿಗಿಂತ ಅತಿ ಹೆಚ್ಚಿದೆ.. ಇದೂ ಕೂಡ ಪರಿಶಿಷ್ಟ ಜಾತಿಗಳ ಮರುವರ್ಗೀಕರಣದ ಅಗತ್ಯವನ್ನು ರುಜುವಾತು ಪಡಿಸುತ್ತದೆ. ಇನ್ನು ಸಮುದಾಯದ ಶೇ. 99 ಜನರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ದೇಶದ ಸಂಪತ್ತಿನಲ್ಲಿ ಸಮಾನ ಪಾಲಿಗೆ ದುಡಿಯುವರ ರಾಜ್ಯಕ್ಕೆ ಎಲ್ಲಾ ದಮನಿತ ಜಾತಿ ವರ್ಗಗಳೂ ಒಗ್ಗೂಡಿ ಹೋರಾಡುವ ಅಗತ್ಯವಿದೆ. ಆದ್ದರಿಂದ ದಮನಿತ ಸಮುದಾಯ ಮತ್ತು ನಾಡಿನ ಪ್ರಜ್ಞಾವಂತರು ನ್ಯಾ . ನಾಗಮೋಹನ್ ದಾಸ್ ಅಯೋಗದ ವರದಿಯ ಜಾರಿಗೆ ಹೋರಾಡುತ್ತಲೇ ಸಾಮಾಜಿಕ ನ್ಯಾಯದ ಮುಂದಿನ ಹೋರಾಟಗಳಿಗೆ ಅಣಿಯಾಗಬೇಕಿದೆ. ಎಂದು ಆಗ್ರಹಿಸಿದ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದೆ ಒಂದು ವೇಳೆ ನಮ್ಮ ಮನವಿಯನ್ನು ಅಂಗೀಕರಿಸದೆ ತಿರಸ್ಕರಿಸಿದಲ್ಲಿ ರಾಜ್ಯದ್ಯಂತ ಉಗ್ರವಾದ ಹೋರಾಟವನ್ನು ಇನ್ನೂ ಹೆಚ್ಚಿನದಾಗಿ ಮಾಡಲಾಗುತ್ತದೆ ಎಂದು ಎಚ್ಚರಿಸಲಾಯಿತು.

ಗೋಷ್ಟಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆರ್, ರಾಜ್ಯ ಕಾನೂನು ಸಲಹೆಗಾರ ಗೋಣೆಪ್ಪ ಸಂಗೊಳ್ಳಿ, ಜಿಲ್ಲಾಧ್ಯಕ್ಷ ಶರ್.ಶಿವರಾಜ್ ಕುಮಾರ್, ಉಪಾಧ್ಯಕ್ಷಬ ಲಕ್ಷ್ಮಣ್ ರಾವ್ ಹಿರಿಯುರು ತಾ.ಅಧ್ಯಕ್ಷ ಓಂಕಾರ ಮೂರ್ತಿ ಭಾಗವಹಿಸಿದ್ದರು, ತದ ನಂತರ ಆಪರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...