ಬೆಂಗಳೂರು; ಪಾಪಿ ಪಾಕಿಸ್ತಾನಕ್ಕೆ ಈಗಾಗಲೇ ಸರಿಯಾದ ರೀತಿಯಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ. ಭಾರತವನ್ನು ಕೆಣಕಿದ್ರೆ ಗತಿಗೆಟ್ಟ ಪಾಕಿಸ್ತಾನಕ್ಕೆ ಏನೆಲ್ಲಾ ಆಗಲಿದೆ ಅನ್ನೋದು ಅರ್ಥವಾಗಿದೆ. ಆದರೂ ಪಾಕಿಸ್ತಾನ ತನ್ನ ಕೊಳಕು ಬುದ್ದಿಯನ್ನ ಬಿಡ್ತಾ ಇಲ್ಲ. ಕೈಲಾಗದವನು ಮೈ ಪರಚಿಕೊಂಡ ಅಂತಾರಲ್ಲ ಹಂಗಾಗಿದೆ ಪಾಕಿಸ್ತಾನದ ಪರಿಸ್ಥಿತಿ. ಇದೀಗ ಜನರ ಮೊಬೈಲ್ ಮೂಲಕ ಸೇಡು ತೀರಿಸಿಕೊಳ್ಳಲು ಹೊರಟಿದೆ. ಹೀಗಾಗಿ ಸ್ಮಾರ್ಟ್ ಫೋನ್ ಬಳಕೆ ಮಾಡುವವರು ಸ್ವಲ್ಪ ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ. ಹಾಗಾದ್ರೆ ಪಾಕಿಗಳು ಏನು ಮಾಡಬಹುದು..? ಮುಂದಿದೆ ಮಾಹಿತಿ.
ವರದಿಗಳ ಪ್ರಕಾರ ಪಾಕಿಸ್ತಾಮವೂ ಸೈಬರ್ ದಾಳಿ ಮಾಡಲು ಹೊರಟಿದೆ. ಅಂದ್ರೆ, ಡ್ಯಾನ್ಸ್ ಆಫ್ ದಿ ಹಿಲರಿ ಎಂಬ ವೈರಸ್ ಮೊಬೈಲ್ ಗಳಿಗೆ ಬಿಡಲು ಹೊರಟಿದೆ. ಈ ವೈರಸ್ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್ ಅಪ್ಲಿಕೇಶನ್ ಗಳ ಮೂಲಕ ಹರಡುತ್ತಿದೆ. ಡ್ಯಾನ್ಸ್ ಆಫ್ ದಿ ಹಿಲರಿ ವೈರಸ್ ಫೋಟೋ ಅಥವಾ ವಿಡಿಯೋ ರೂಪದಲ್ಲಿ ನಿಮ್ಮ ಫೋನ್ ಗೆ ಬರಬಹುದು. ಆ ವಿಡಿಯೋ ತೆರೆದ ಕೂಡಲೇ ಬಳಕೆದಾರರ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳು ಪಾಕಿಗಳ ಕೈ ಸೇರಲಿದೆ.
ನಿಮ್ಮ ಫೋನ್ ನಲ್ಲಿ ಡ್ಯಾನ್ಸ್ ಆಫ್ ದಿ ಹಿಲರಿ ರನ್ ಆದರೆ ನಿಮ್ಮೆಲ್ಲ ಮಾಹಿತಿ ಹ್ಯಾಕರ್ ಗಳಿಗೆ ಸುಲಭವಾಗಿ ಸಿಗಲಿದೆ. ಇದೊಂದು ಅಪಾಯಕಾರಿ ವೈರಸ್ ಅಂತಾನೆ ಹೇಳಬಹುದು. ಹೀಗಾಗಿ ಯಾರದ್ದೇ ಮೊಬೈಲ್ ಗೆ ವೈರಸ್ ಬಂದರೂ ಬಹಳ ಎಚ್ಚರಿಕೆಯಿಂದ ಇರಿ. ಗೊತ್ತಿಲ್ಲದೆ ಇರುವ ನಂಬರ್ ನಿಂದ ಫೋಟೋ, ವಿಡಿಯೋ ಏನೇ ಬಂದರೂ ಡೌನ್ ಲೋಡ್ ಮಾಡಲು ಹೋಗಬೇಡಿ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






