Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತೀಯರೇ ಎಚ್ಚರ ; ಪಾಪಿ ಪಾಕಿಸ್ತಾನದಿಂದ ಪಿತೂರಿ ಶುರು.. ನಿಮ್ಮ ಫೋನ್ ಗೆ ಈ ವೈರಸ್ ಬರುವ ಸಾಧ್ಯತೆ..!

---Advertisement---

ಬೆಂಗಳೂರು; ಪಾಪಿ ಪಾಕಿಸ್ತಾನಕ್ಕೆ ಈಗಾಗಲೇ ಸರಿಯಾದ ರೀತಿಯಲ್ಲಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ. ಭಾರತವನ್ನು ಕೆಣಕಿದ್ರೆ ಗತಿಗೆಟ್ಟ ಪಾಕಿಸ್ತಾ‌ನಕ್ಕೆ ಏನೆಲ್ಲಾ ಆಗಲಿದೆ ಅನ್ನೋದು ಅರ್ಥವಾಗಿದೆ. ಆದರೂ ಪಾಕಿಸ್ತಾನ ತನ್ನ ಕೊಳಕು ಬುದ್ದಿಯನ್ನ ಬಿಡ್ತಾ ಇಲ್ಲ. ಕೈಲಾಗದವನು ಮೈ ಪರಚಿಕೊಂಡ ಅಂತಾರಲ್ಲ ಹಂಗಾಗಿದೆ ಪಾಕಿಸ್ತಾನದ ಪರಿಸ್ಥಿತಿ. ಇದೀಗ ಜನರ ಮೊಬೈಲ್ ಮೂಲಕ ಸೇಡು ತೀರಿಸಿಕೊಳ್ಳಲು ಹೊರಟಿದೆ. ಹೀಗಾಗಿ ಸ್ಮಾರ್ಟ್ ಫೋನ್ ಬಳಕೆ‌ ಮಾಡುವವರು ಸ್ವಲ್ಪ ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ. ಹಾಗಾದ್ರೆ ಪಾಕಿಗಳು ಏನು ಮಾಡಬಹುದು..? ಮುಂದಿದೆ ಮಾಹಿತಿ.

ವರದಿಗಳ ಪ್ರಕಾರ ಪಾಕಿಸ್ತಾಮವೂ ಸೈಬರ್ ದಾಳಿ ಮಾಡಲು ಹೊರಟಿದೆ. ಅಂದ್ರೆ, ಡ್ಯಾನ್ಸ್ ಆಫ್ ದಿ ಹಿಲರಿ ಎಂಬ ವೈರಸ್ ಮೊಬೈಲ್ ಗಳಿಗೆ ಬಿಡಲು ಹೊರಟಿದೆ. ಈ ವೈರಸ್ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್ ಅಪ್ಲಿಕೇಶನ್ ಗಳ ಮೂಲಕ ಹರಡುತ್ತಿದೆ. ಡ್ಯಾನ್ಸ್ ಆಫ್ ದಿ ಹಿಲರಿ ವೈರಸ್ ಫೋಟೋ ಅಥವಾ ವಿಡಿಯೋ ರೂಪದಲ್ಲಿ ನಿಮ್ಮ ಫೋನ್ ಗೆ ಬರಬಹುದು. ಆ ವಿಡಿಯೋ ತೆರೆದ ಕೂಡಲೇ ಬಳಕೆದಾರರ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳು ಪಾಕಿಗಳ ಕೈ ಸೇರಲಿದೆ‌.

ನಿಮ್ಮ ಫೋನ್ ನಲ್ಲಿ ಡ್ಯಾನ್ಸ್ ಆಫ್ ದಿ ಹಿಲರಿ ರನ್ ಆದರೆ ನಿಮ್ಮೆಲ್ಲ ಮಾಹಿತಿ ಹ್ಯಾಕರ್ ಗಳಿಗೆ ಸುಲಭವಾಗಿ ಸಿಗಲಿದೆ. ಇದೊಂದು ಅಪಾಯಕಾರಿ ವೈರಸ್ ಅಂತಾನೆ ಹೇಳಬಹುದು. ಹೀಗಾಗಿ ಯಾರದ್ದೇ ಮೊಬೈಲ್ ಗೆ ವೈರಸ್ ಬಂದರೂ ಬಹಳ ಎಚ್ಚರಿಕೆಯಿಂದ ಇರಿ. ಗೊತ್ತಿಲ್ಲದೆ ಇರುವ ನಂಬರ್ ನಿಂದ ಫೋಟೋ, ವಿಡಿಯೋ ಏನೇ ಬಂದರೂ ಡೌನ್ ಲೋಡ್ ಮಾಡಲು ಹೋಗಬೇಡಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...