ದಾವಣಗೆರೆ : ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಗೆ ಅಕ್ಟೋಬರ್ 23ರಂದು 43 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ನಡೆದ ಮಸ್ಟರಿಂಗ್ ಕಾರ್ಯದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಪರಿಶೀಲಿಸಿದರು.
ಮತದಾನಕ್ಕೆ 10 ಪರ್ಯಾಯ ಗುರುತಿನ ಚೀಟಿಗಳ ಬಳಕೆಗ ಅವಕಾಶ:
ಮತದಾನದ ದಿನದಂದು ಮತದಾರರು ತಮ್ಮ ಗುರುತಿಗಾಗಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯ ಬದಲಾಗಿ 10 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
ಮತದಾನಕ್ಕೆ ಮಾನ್ಯ ಮಾಡಲಾಗುವ 10 ಪರ್ಯಾಯ ದಾಖಲೆಗಳು
ಆಧಾರ್ ಕಾರ್ಡ್ , ಚಾಲನಾ ಪರವಾನಗಿ , ಪ್ಯಾನ್ ಕಾರ್ಡ್, ಭಾರತೀಯ ಪಾಸ್ಪೋರ್ಟ್ , ಸೇವಾ ಗುರುತಿನ ಚೀಟಿ: ರಾಜ್ಯ/ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು, ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಔದ್ಯೋಗಿಕ ಸಂಸ್ಥೆಗಳು ತಮ್ಮ ನೌಕರರಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ., ಸಂಸದರು / ಶಾಸಕರು / ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ., ಶಿಕ್ಷಣ ಸಂಸ್ಥೆಗಳ ಗುರುತಿನ ಚೀಟಿ: ಸಂಬಂಧಿಸಿದ ಶಿಕ್ಷಕರ/ಪದವೀಧರರ ಕ್ಷೇತ್ರದ ಮತದಾರರು ಉದ್ಯೋಗದಲ್ಲಿರುವ ಶಿಕ್ಷಣ ಸಂಸ್ಥೆಗಳು ನೀಡಿದ ಸೇವಾ ಗುರುತಿನ ಚೀಟಿ. ವಿಶ್ವವಿದ್ಯಾಲಯ ನೀಡಿದ ಮೂಲ ಪದವಿ / ಡಿಪ್ಲೊಮಾ ಪ್ರಮಾಣಪತ್ರ., ಸಕ್ಷಮ ಪ್ರಾಧಿಕಾರ ನೀಡಿದ ಮೂಲ ಅಂಗವಿಕಲತೆ ಪ್ರಮಾಣಪತ್ರ., ಯುಡಿಐಡಿ ಕಾರ್ಡ್ : ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿದ ವಿಶಿಷ್ಟ ಅಂಗವಿಕಲತೆಯ ಗುರುತಿನ ಚೀಟಿ.
43-ಮತಗಟ್ಟೆಗಳ ವಿವರ : ಹರಿಹರ-6 : ಮರಿಯಾ ನಿವಾಸ್ ಹೈಯರ್ ಪ್ರೈಮರಿ ಶಾಲೆ ಕೊಠಡಿ ಸಂಖ್ಯೆ 1 ಮತ್ತು 2 , ಎಸ್.ಜಿ.ಆರ್.ಕೆ.ಎಸ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಠಡಿ ಸಂಖ್ಯೆ 1 ಮತ್ತು 2 , ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಗಾಂಧಿ ಮೈದಾನ ಕೊಠಡಿ ಸಂಖ್ಯೆ 1 ಮತ್ತು 2.ಮಲೆಬೆನ್ನೂರು-4 : ಸರ್ಕಾರಿ ಪದವಿ ಪೂರ್ವ ಕಾಲೇಜು ಜಿಗಳಿ ರಸ್ತೆ ಕೊಠಡಿ ಸಂಖ್ಯೆ 1,2,3 ಮತ್ತು 4. ದಾವಣಗೆರೆ-33: ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು 1,2,3,4 , ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಪಿ.ಜೆ ಬಡಾವಣೆ ಕೊಠಡಿ ಸಂಖ್ಯೆ 1,2,3 4 ಮತ್ತು 5, ಅಶೋಕ ರಸ್ತೆ ಮಹಿಳಾ ಸೇವಾ ಸಮಾಜ ಶ್ರೀಮತಿ ಟಿ ಎಂ ಚಿನ್ನಮ್ಮ ಮಹೇಶ್ವರಯ್ಯ ಮೆಮೆರಿಯಲ್ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ 1,2,3,4,5,6 ಮತ್ತು7, ಡಯಟ್ ಕೊಠಡಿ ಸಂಖ್ಯೆ 1,2 ಮತ್ತು 3, ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ 1,2,3 ಮತ್ತು 4. ಆನಗೋಡು -2: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 1 ಮತ್ತು 2, ಅಣಜಿ ಸರ್ಕಾರಿ ಮಾಡೆಲ್ ಹೈಯರ್ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 1 , ಮಾಯಕೊಂಡ ಸರ್ಕಾರಿ ಕೆ.ಪಿ.ಎಸ್ ಶಾಲೆ ಕೊಠಡಿ ಸಂಖ್ಯೆ 1 , ಲೋಕಿಕೆರೆ ಮಾರುತಿ ಸರ್ಕಾರಿ ಪ್ರೌಢಶಾಲೆ ಕೊಠಡಿ ಸಂಖ್ಯೆ 1 ಮತ್ತು 2 , ಜಗಳೂರು ಡಾ.ಬಿ.ಆರ್ . ಅಂಬೇಡ್ಕರ್ ವೃತ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ 1 ಮತ್ತು 2, 1-ಹೊಸಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ,1- ಜಗಳೂರು ಬಿಳಿಚೋಡು ಸರ್ಕಾರಿ ಕೆ.ಪಿ.ಎಸ್ ಮತ್ತು ಕಾಲೇಜು ವಿಭಾಗ ಇಲ್ಲಿನ ಮತಗಟ್ಟೆಗಳಲ್ಲಿ ಅಕ್ಟೋಬರ್ 23 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಪ್ರತಿಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸೇರಿದಂತೆ ಪ್ರತಿ ತಂಡದಲ್ಲಿ 4 ಸಿಬ್ಬಂದಿ ಸೇರಿ ಒಟ್ಟು 55 ತಂಡಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಒಟ್ಟು 43 ಮತಗಟ್ಟೆಗಳಲ್ಲಿ ಹರಿಹರ 10, ಜಗಳೂರು 4 ಸೂಕ್ಷ್ಮ ಮತ್ತು 29 ಸಾಮಾನ್ಯ ಮತಗಟ್ಟೆಗಳಿವೆ.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಚುನಾವಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.












