ಜೂನ್ 30ರಂದು ಹಿರಿಯೂರಿನಲ್ಲಿ ಗಣೆ ಟ್ರಸ್ಟ್ (ರಿ), ಮತ್ತು ಗ್ರಂಥಾಲಯದ ಉದ್ಘಾಟನೆ

1 Min Read

 

ಸುದ್ದಿಒನ್, ಹಿರಿಯೂರು, ಜೂನ್. 26 : ನಗರದ ವಾಣಿ ಕಾಲೇಜು ಹಿಂಭಾಗದ ದೇವಗಿರಿ ನಗರದಲ್ಲಿ ಗಣೆ ಟ್ರಸ್ಟ್ (ರಿ), ನೂತನ ಕಛೇರಿ, ಗ್ರಂಥಾಲಯ ಉದ್ಘಾಟನೆ ಹಾಗೂ ಕಾಡುಗೊಲ್ಲ ಬುಡಕಟ್ಟು ಮಹಿಳಾ ಜಾಗೃತಿ ಕಾರ್ಯಕ್ರಮ ಜೂನ್ 30ರಂದು ಸೋಮವಾರ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಗಣೆ ಟ್ರಸ್ಟ್ (ರಿ) ಅಧ್ಯಕ್ಷರು, ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯೆ ಹಾಗೂ ಉಪನ್ಯಾಸಕಿ ಡಾ. ಜಿಕೆ. ಪ್ರೇಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಸಂಸದ ಪಿ. ಕೋದಂಡರಾಮಯ್ಯ ಅಧ್ಯಕ್ಷತೆ ವಹಿಸುವರು. ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರು ಕಛೇರಿ ಉದ್ಘಾಟಿಸಲಿದ್ದಾರೆ. ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಹಾಗೂ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಮತ್ತು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ವೆಂಕಟೇಶಯ್ಯ ನೆಲ್ಲುಕುಂಟೆ ಅವರು ಗ್ರಂಥಾಲಯ ಲೋಕಾರ್ಪಣೆ ಮಾಡಲಿದ್ದು, ಕೃತಿಕಾ, ಡಾ. ವಿ. ಭಾಗ್ಯಲಕ್ಷ್ಮಿ, ಡಾ. ಆರ್.ವಿ. ಚಂದ್ರಶೇಖರ್, ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ. ಎಸ್ಎಂ. ಮುತ್ತಯ್ಯ, ವಾಣಿ ಕಾಲೇಜು ಪ್ರಾಂಶುಪಾಲ ಪ್ರೋ. ಆರ್. ಮಹೇಶ್, ಗಣೆ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಗಣ್ಯರು ಭಾಗವಹಿಸಲಿದ್ದಾರೆ.

ಗಣೆ ಟ್ರಸ್ಟ್ ಬುಡಕಟ್ಟು ಮಹಿಳೆಯರ ಸಬಲೀಕರಣಕ್ಕಾಗಿ ಸ್ಥಾಪಿಸಲಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಮಹಿಳೆಯರಿಗೆ ನೆರವಾಗುವ ಉದ್ದೇಶವನ್ನು ಈ ಟ್ರಸ್ಟ್ ಹೊಂದಿದೆ. ಅಂದಿನ ಕಾರ್ಯಕ್ರಮದಲ್ಲಿ “ಕಾಡುಗೊಲ್ಲ ಬುಡಕಟ್ಟು ಮಹಿಳೆಯರ ಸ್ಥಿತಿಗತಿ” ಕುರಿತು ಗಣ್ಯರು ಮಾತನಾಡಲಿದ್ದಾರೆ ಎಂದು ಪ್ರೇಮಾ ತಿಳಿಸಿದ್ದಾರೆ. ತಾಲೂಕಿನ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಮಹಿಳೆಯರು, ವಿದ್ಯಾರ್ಥಿಗಳು, ಹೋರಾಟಗಾರು, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವವರು, ಪ್ರಗತಿಪರ ಚಿಂತಕರು, ಸಾಮಾಜಿಕ ಬದಲಾವಣೆ ಬಯಸುವವರು, ಸಮುದಾಯದ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಡಾ. ಜಿಕೆ ಪ್ರೇಮಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks