ಚಾಮರಾಜನಗರ; ಮಲೆ ಮಹದೇಶ್ವರ ಸ್ವಾಮಿ ದೇವರಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಭಕ್ತರಿಂದ ಮಲೆ ಮಹದೇಶ್ವರ ಸ್ವಾಮಿಗೆ ಕೋಟಿ ಕೋಟಿ ರೂಪಾಯಿ ಕಾಣಿಕೆ ಹರಿದು ಬರುತ್ತಿದೆ. ಪ್ರಪಂಚದಲ್ಲಿ ಕೋಟ್ಯಾಧಿಪತಿ ದೇವರು ಎಂಬುದು ಮತ್ತೆ ಪ್ರೂವ್ ಆಗಿದೆ. ಮಾದಪ್ಪನ ಹುಂಡಿಯಲ್ಲಿ ಹರಕೆಯ ರೂಪದಲ್ಲೊ ಕೋಟ್ಯಾಂತರ ರೂಪಾಯಿ ಸಂಗ್ರಹವಾಗಿದೆ.
ಮಾದಪ್ಪನ ಹುಂಡಿಯಲ್ಲಿ ಕಾಣಿಕೆ ಸಂಗ್ರಹವಾಗಿರುವುದು ಕೇವಲ 28 ದಿನದಲ್ಲಿ. ಕಳೆದ 28 ದಿನದಿಂದ ಮಾದಪ್ಪನ ಸನ್ನಿಧಿಗೆ ಭೇಟಿ ನೀಡಿದ ಭಕ್ತರು, ಕಾಣಿಕೆ ರೂಪದಲ್ಲಿ ಹುಂಡಿಗೆ ಹಣ ಹಾಕಿದ್ದಾರೆ. ಮಾದಪ್ಪನನ್ನು ನಂಬುವ ಭಕ್ತರು ದರ್ಶನಕ್ಕೆಂದು ಬಂದಾಗ ಹುಂಡಿಗೆ ಹಣ ಹಾಕುವ ಪದ್ಧತಿ ಇದೆ. ಇನ್ನೊಮ್ಮೆ ದೇವರ ಬಳಿ ಇಟ್ಟ ಡಿಮ್ಯಾಂಡ್ ಈಡೇರಿದಾಗಲು ಅದಕ್ಕೆಂದು ಬೇಡಿಕೊಂಡಿದ್ದ ಹಣವನ್ನು ಹುಂಡಿಗೆ ಅರ್ಪಿಸಲಾಗುತ್ತದೆ. ಹೀಗೆ ನಾನಾ ರೀತಿಯಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಇಂದು ಏಣಿಕೆ ಮಾಡಲಾಗಿದೆ.
ಇಂದು ಮಲೆಮಹದೇಶ್ವರನ ಬೆಟ್ಟದಲ್ಲಿ ಪ್ರಾಧಿಕಾರದಿಂದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಇನ್ನು ಹುಂಡಿಯಲ್ಲಿ 1.94 ಕೋಟಿ ರೂಪಾಯಿ ಸಂಗ್ರಹವಾಗಿದೆ. ಜೊತೆಗೆ ಚಿನ್ನ, ಬೆಳ್ಳಿಯನ್ನು ಅರ್ಪಿಸಲಾಗಿದೆ. 63 ಗ್ರಾಂ ಚಿನ್ನ ಹಾಗೂ ಅರ್ಧ ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಈ ಮೂಲಕ ಮಾದಪ್ಪನ ಆಶೀರ್ವಾದ ಪಡೆದ ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ತಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ಮಾದಪ್ಪನಿಗೆ ರಾಜ್ಯದ ಮೂಲೆ ಮೂಲೆಯಿಂದಾನೂ ಭಕ್ತರಿದ್ದಾರೆ. ಇದೀಗ ಶಿವರಾತ್ರಿ ಬೇರೆ ಹತ್ತಿರವಿದ್ದು, ಆ ಸಮಯದಲ್ಲಿ ಭಕ್ತರ ಸಂಖ್ಯೆ ಇನ್ನು ಹೆಚ್ಚಾಗಲಿದೆ.










