Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೋಬಿಗೆ ಈ ಕೆಮಿಕಲ್ ಹಾಕಿದ್ರೆ ಬೀಳುತ್ತೆ 10 ಲಕ್ಷ ದಂಡ.. 7 ವರ್ಷ ಜೈಲು..!

---Advertisement---

ಬೆಂಗಳೂರು: ಈಗಂತೂ ಜಗತ್ತೇ ಉದ್ಯಮಮಯವಾಗಿದೆ. ತಿನ್ನುವ ಆಹಾರವೆಲ್ಲಾ ಕೆಮಿಕಲ್ ಮಯವಾಗಿದೆ. ಏನನ್ನೇ ತಿಂದರು ಅದು ಮುಂದಿನ ದಿನಗಳಲ್ಲಿ ಅನಾರೋಗ್ಯಕ್ಕೇನೆ ಕಾರಣವಾಗುತ್ತದೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗುವಂತ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ಕೆಲವೆಡೆ ಈಗಾಗಲೇ ಗೋಬಿಯನ್ನು ನಿಷೇಧ ಮಾಡಲಾಗಿದೆ. ರಾಜ್ಯದಲ್ಲೂ ಗೋಬಿ ನಿಷೇಧ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಇದೀಗ ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ರಾಜ್ಯ ಸರ್ಕಾರ ನಿಷೇಧ ಮಾಡದೆ ಬಣ್ಣ ಬಳಕೆಯನ್ನ ಬ್ಯಾನ್‌ ಮಾಡೋಕೆ ಮುಂದಾಗಿದೆ. ಗೋಬಿ, ಕಾಟನ್​ ಕ್ಯಾಂಡಿ ಮಾರಾಟಗಾರರಿಗೆ ಖಡಕ್​ ಆಗಿ ಆ ಎರಡು ಪದಾರ್ಥಗಳನ್ನ ಬಳಸದಂತೆ ವಾರ್ನಿಂಗ್​ ಕೊಟ್ಟಿದೆ. ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​, ಕೃತಕ ಬಣ್ಣ ಬಳಕೆ ಮಾಡಿದ ಕಾಟನ್ ಕ್ಯಾಂಡಿ, ಗೋಬಿಯನ್ನ ಮಾತ್ರ ನಿಷೇಧ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಗೋಬಿ ಮಂಚೂರಿಯ ಒಟ್ಟು 171 ಮಾದರಿಗಳನ್ನ ಸಂಗ್ರಹ ಮಾಡಲಾಗಿದ್ದು, ಅದ್ರಲ್ಲಿ 107 ಮಾದರಿಯಲ್ಲಿ ಕೃತಕ ಬಣ್ಣದ ಅಂಶ ಪತ್ತೆಯಾಗಿದೆ. ಕೃತಕ ಬಣ್ಣ ಮಾದರಿ ಪುಡ್ ಸೇಫ್ಟಿ ಆ್ಯಕ್ಟ್ ಪ್ರಕಾರ ಅಸುರಕ್ಷಿತ. 2011ರ ನಿಯಮದ ಪ್ರಕಾರ ಗೋಬಿಗೆ ಬಣ್ಣ ಬಳಸುವಂತಿಲ್ಲ. ಕಲರ್ ಹಾಕಿರುವ ಕಾಟನ್ ಕ್ಯಾಂಡಿ ಮಾರಾಟಕ್ಕೆ ನಿಷೇಧವಿದೆ. ರೋಡಮೈನ್-ಬಿ ಬಳಕೆ ಮಾಡ್ತಿರೋದು ವರದಿಯಲ್ಲಿ ಬೆಳಕಿಗೆ ಬಂದಿದ್ದು, ಕೃತಕ ಬಣ್ಣ ಹಾಕಿರೋ ಗೋಬಿ ಮಂಚೂರಿ ಮಾರಾಟವನ್ನ ನಿರ್ಬಂಧಿಸಲಾಗಿದ್ದು, ನಿಯಮ ಮೀರಿದ್ರೆ 10 ಲಕ್ಷ ದಂಡ, 7 ವರ್ಷ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment