ಸುದ್ದಿಒನ್, ಬಳ್ಳಾರಿ,ಏಪ್ರಿಲ್. 21 : ಕಳೆದ ಹಲವಾರು ದಶಕಗಳಿಂದ ಬ್ರಾಹ್ಮಣರಿಗೆ ಅವಹೇಳನ ಮಾಡುವುದನ್ನು ಕೆಲವರು ಫ್ಯಾಶನ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ಸಿನೇಮಾದಲ್ಲೂ ಬ್ರಾಹ್ಮಣರ ತೇಜೋವಧೆ ಮಾಡುವ ಕ್ಷÄಲ್ಲಕ ವಿಚಾರಗಳನ್ನು ತೋರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಹಾಕಿ ಮಾನಸಿಕ ಹಿಂಸೆ ನೀಡಲಾಗಿದೆ. ಇದನ್ನು ಬ್ರಾಹ್ಮಣ ಸಮುದಾಯ ಉಗ್ರವಾಗಿ ಖಂಡಿಸುತ್ತದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ ಪರೀಕ್ಷಾ ಕೇಂದ್ರದ ಅಧಿಕಾರಿ, ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಬಳ್ಳಾರಿ ಬ್ರಾಹ್ಮಣ ಒಕ್ಕೂಟವು ಎಚ್ಚರಿಸಿದೆ.
ಇಲ್ಲಿನ ಸಂಗನಕಲ್ಲ ರಸ್ತೆಯ ಶಂಕರ ಮಠದ ಆವರಣದಲ್ಲಿ ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಕಾರ್ಯದರ್ಶಿ ಬಿ.ಕೆ.ಬಿ.ಎನ್.ಮೂರ್ತಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬ್ರಾಹ್ಮಣರು ಬಹುಜನ ಪ್ರಿಯರು ಎನ್ನುವುದನ್ನು ಮರೆಯಬಾರದು. ಎಲ್ಲರನ್ನೂ ಸಹಮತದಿಂದ ಗೌರವಿಸುವ ಸಮುದಾಯ ನಮ್ಮದು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಿಇಟಿ ಪರೀಕ್ಷೆ ಯ ವೇಳೆ ಜನಿವಾರ ಕಿತ್ತು ಹಾಕಿ ತೊಂದರೆ ನೀಡಲಾಗಿದೆ. ಬೀದರ್ ನಲ್ಲೂ ಇದೇ ಕೃತ್ಯ ಎಸಗಲಾಗಿದೆ. ಬ್ರಾಹ್ಮಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರೇ ದುರ್ನಡತೆ ತೋರಿದ್ದಾರೆ. ಜನಿವಾರ ಕಿತ್ತೆಸೆದ ಪರೀಕ್ಷಾ ಕೇಂದ್ರದ ಅಧಿಕಾರಿ, ಶಿಕ್ಷಕರನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಶಿಕ್ಷೆ ವಿಧಿಸಬೇಕು. ಶೋಷಣೆಗೆ ಒಳಗಾದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಭವಿಷ್ಯ ರೂಪಿಸಬೇಕು. ಇಲ್ಲದೇ ಹೋದರೆ ಸರ್ಕಾರದ ವಿರುದ್ಧ ಬ್ರಾಹ್ಮಣರು ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಗಣತಿಯಲ್ಲಿ ಬ್ರಾಹ್ಮಣ ಸಮುದಾಯವನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಲಾಗಿದೆ. ಎಷ್ಟೋ ಬ್ರಾಹ್ಮಣರ ಮನೆಗೆ ಸರ್ವೇ ನಡೆಸುವವರು ಭೇಟಿ ನೀಡಿರುವುದಿಲ್ಲ. ಜಾತಿ ಗಣತಿಯನ್ನು ಜಾರಿಗೊಳಿಸಲು ಬ್ರಾಹ್ಮಣ ಒಕ್ಕೂಟವು ಸಹಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಚಲನಚಿತ್ರ ನಿರ್ದೇಶಕರೊಬ್ಬರು ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುವ ಹುಚ್ಚಾಟದ ಹೇಳಿಕೆ ನೀಡಿದ್ದಾರೆ. ಅಂಥವರಿAದ ಸಮಾಜದ ಸ್ವಾಸ್ಥö್ಯ ಹಾಳಾಗುವುದಲ್ಲದೇ, ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತದೆ. ಇಂತಹ ಕೀಳು ಮಟ್ಟದ ಭಾಷೆ ಬಳಸಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು. ಕಾನೂನು ಅಡಿ ಶಿಕ್ಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಬಳ್ಳಾರಿ ಬ್ರಾಹ್ಮಣರ ಒಕ್ಕೂಟ ಅಧ್ಯಕ್ಷ ಪ್ರಕಾಶ್ ರಾವ್ ಮಾತನಾಡಿ, ರಾಜ್ಯದಲ್ಲಿ ವಿವಾದವೆಬ್ಬಿಸಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ೧೭ ಲಕ್ಷ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ವಾಸ್ತವದಲ್ಲಿ ನಮ್ಮ ಜನಸಂಖ್ಯೆ ಹೆಚ್ಚಾಗಿದೆ. ಈ ಗಣತಿಗಾಗಿ ಯಾರ ಮನೆಗೆ ಬಂದಿದ್ದಾರೆ? ಎಂಬುದು ತಿಳಿದಿಲ್ಲ. ಎಲ್ಲರನ್ನೂ ಸಮೀಕ್ಷೆ ಮಾಡದೇ ಹೊರತಂದಿರುವ ಈ ವರದಿ ಅವೈಜ್ಞಾನಿಕವಾಗಿದೆ. ಬ್ರಾಹ್ಮಣರ ಮೇಲೆ ಪದೇ ಪದೇ ನಿಂದೆ, ಅಪಮಾನ, ಅವಮಾನಗಳು ಸೃಷ್ಟಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಯಾವ ಬ್ರಾಹ್ಮಣರೂ ಸುಮ್ಮನಿರಬಾರದು. ಸಮಾಜಕ್ಕೆ ಮತ್ತು ಬ್ರಾಹ್ಮಣತ್ವಕ್ಕೆ ಧಕ್ಕೆ ಉಂಟಾದಾಗ ಪ್ರತಿಯೊಬ್ಬ ಬ್ರಾಹ್ಮಣನೂ ಭಾರ್ಗವರಾಮನಾಗಲು ಸಿದ್ಧರಿರಬೇಕೆಂದು ಕರೆ ನೀಡಿದರು.
ಕೆಸೆಟ್ ಪರೀಕ್ಷೆ ಬರೆಯಲು ಹೋದ ಬ್ಯಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರ ತೆಗೆಯಲು ಒತ್ತಾಯಿಸಿದ್ದಾರೆ. ಪರೀಕ್ಷೆ ಬರೆಯಬೇಕಾದರೆ ಜನಿವಾರ ತೆಗೆಯಬೇಕು ಎಂದು ಹೇಳಿರುವುದು ಖಂಡನಾರ್ಹ. ಕೆಲವು ವಿದ್ಯಾರ್ಥಿಗಳು ಜನಿವಾರ ತೆಗೆಯಲು ನಿರಾಕರಿಸಿದ್ದಾರೆ. ಅಂತವರಿಗೆ ಪರೀಕ್ಷೆಗೆ ಅವಕಾಶ ನೀಡಿಲ್ಲ. ಬ್ರಾಹ್ಮಣ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ನೀಡಬೇಕು. ಜನಿವಾರ ತೆಗೆಸಿದ ಅಧಿಕಾರಿಗಳನ್ನು ಅಮಾನತು ಮಾಡಿದರಷ್ಟೇ ಸಾಲದು ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲದಿದ್ದರೆ ಬ್ರಾಹ್ಮಣ ಸಮುದಾಯ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜದ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು ಇದು ನಿಲ್ಲಬೇಕು. ಹಿಂದಿ ಚಿತ್ರರಂಗದ ಚಿತ್ರ ನಿರ್ದೇಶಕ ಅನುರಾಗ ಕಶ್ಯಪ್ ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೇನೆಂದು ಹೇಳಿದ್ದಾನೆ. ಇದನ್ನು ನಮ್ಮ ಒಕ್ಕೂಟ ಖಂಡಿಸುತ್ತದೆ. ಅನುರಾಗ ಕಶ್ಯಪ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಒಕ್ಕೂಟದ ಗೌರವ ಅಧ್ಯಕ್ಷ ಡಾ.ಬಿ.ಕೆ.ಸುಂದರ್ ಮಾತನಾಡಿ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ (ಇಡಬ್ಲೂಎಸ್) ಮೀಸಲಾತಿಯ ಪ್ರಯೋಜನ ಕೂಡಾ ಬ್ರಾಹ್ಮಣ ಸಮುದಾಯಕ್ಕೆ ಸರಿಯಾಗಿ ಲಭಿಸುತ್ತಿಲ್ಲ. ನಮ್ಮ ಸಮುದಾಯದಲ್ಲಿರುವ ಅಡುಗೆ, ಪೌರೋಹಿತ್ಯದಂತೆ ವಿವಿಧ ವೃತ್ತಿಗಳಲ್ಲಿ ಇರುವವರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲು ಇಡಬ್ಲ್ಯುಎಸ್ ಜಾರಿಗೆ ಬಂದಿದ್ದರೂ ಉಪಯೋಗವಾಗುತ್ತಿಲ್ಲ. ಉದ್ದೇಶಪೂರ್ವಕವಾಗಿ ನಮ್ಮು ಸಮುದಾಯಕ್ಕೆ ಇಡಬ್ಲ್ಯುಎಸ್ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಸುಮಾರು ೨೫ ಸಾವಿರ ಬ್ರಾಹ್ಮರಲ್ಲಿ ಕೇವಲ ೩೦ ಜನರಿಗೆ ಮಾತ್ರ ಇಡಬ್ಲೂöಎಸ್ ಪ್ರಮಾಣ ಪತ್ರ ದೊರೆತಿದೆ. ಈ ಪ್ರಮಾಣ ಪತ್ರ ಕೂಡಾ ಕೇವಲ ಶಿಕ್ಷಣಕ್ಕೆ ಮಾತ್ರ. ಈ ಮೀಸಲಾತಿಯಲ್ಲಿ ಒಂದೇ ಒಂದು ಉದ್ಯೋಗ ದೊರೆತಿಲ್ಲ. ಇಡಬ್ಲೂöಎಸ್ ಪ್ರಮಾಣ ಪತ್ರದ ಅವಧಿ ಕೇವಲ ಒಂದು ವರ್ಷಕ್ಕೆ ಮಾತ್ರ. ಬೇರೆಯವರಿಗೆ ಐದು ವರ್ಷಕ್ಕೆ ನೀಡಲಾಗುತ್ತದೆ. ನಮ್ಮ ಆರ್ಥಿಕ ಸ್ಥಿತಿ ಒಂದು ವರ್ಷದಲ್ಲಿ ಬದಲಾಗುತ್ತಾ, ವಿನಾಕಾರಣ ನಮಗೆ ಈ ವಿಷಯದಲ್ಲಿ ಸಮಸ್ಯೆ ಮಾಡಲಾಗುತ್ತಿದೆ. ಜೊತೆಗೆ ಭ್ರಷ್ಠಾಚಾರದ ಕಾರಣ ಲಂಚವಿಲ್ಲದೇ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಸುದ್ಧಿಗೋಷ್ಟಿಯಲ್ಲಿ ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಡಾ.ಶ್ರೀನಾಥ್, ಎಬಿಎಬಿಕೆಎಫ್ ರಾಜ್ಯ ಕಚೇರಿ ಕಾರ್ಯದರ್ಶಿ ಮಂಜುನಾಥ ಭಟ್, ಜಿಲ್ಲಾಧ್ಯಕ್ಷ ಗೋಪಿನಾಥ್ ಶರ್ಮ, ಉಪಾಧ್ಯಕ್ಷ ಶ್ರೀನಿವಾಸರಾವ್, ಬ್ರಾಹ್ಮಣ ಒಕ್ಕೂಟದ ಪದಾಧಿಕಾರಿಗಳಾದ ನೇಮಕಲ್ ರಾವ್, ನಟರಾಜ್, ಡಿ.ಆರ್.ಗಿರಿ ಪ್ರಕಾಶ್, ಗಿರೀಶ್ ಡಿ., ವೇಣುಗೋಪಾಲ್, ಮುರಳಿಧರ್, ಹನುಮಂತಾಚಾರ್ ಇನ್ನಿತರರು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















