ಬೆಂಗಳೂರು: ಜೆಡುಎಸ್ ಕಚೇರಿಯಲ್ಲಿ ಇಂದು ದೇವೇಗೌಡ್ರು ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಅವರ ಬಗ್ಗೆಯೂ ಮಾತನ್ನಾಡಿದ್ದಾರೆ. ಎರಡನೇ ಮಗನನ್ನ ರಾಜಕೀಯಕ್ಕೆ ತನ್ನಿ ಎಂದದ್ದು ನಾನೇ ಎಂಬ ವಿಚಾರವನ್ನು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಗುರುತಿಸಿದ್ದು ನಾನು ಅಂತ ಹೇಳಲ್ಲ. ಅವರೇ ಹೇಳಲಿ. ನನ್ನ ಬಗ್ಗೆ ಕಠಿಣವಾಗಿ ಏನು ಬೇಕಾದರೂ ಅವರು ಮಾತನಾಡಲಿ. ಅವರ ಮಗ ಸಾವನ್ನಪ್ಪಿದಾಗ ಅವರ ಮನೆಗೆ ಹೋಗಿದ್ದೆ. ಎರಡನೇ ಮಗನ ರಾಜಕೀಯಕ್ಕೆ ತನ್ನಿ ಅಂತ ಹೇಳಿದ್ದೆ. ಅವರು ಬಾದಾಮಿಯಲ್ಲಿ ನಿಂತರು. ಕೋಲಾರ, ಮೈಸೂರು, ಬಾದಾಮಿ ಅಂತ ಚರ್ಚೆ ಕೂಡ ಆಯಿತು. ನೀವೂ ಅಹಿಂದ ನಾಯಕರು. ಆದರೂ ಒಂದು ಕ್ಷೇತ್ರಕ್ಕೆ ಹುಡುಕಾಟ ಮಾಡಿದ್ದೀರಿ. ಎಷ್ಟು ಚರ್ಚೆ ಆಯ್ತು. ನೀವು ಅಹಿಂದ ಲೀಡರ್ ಆಗಿದ್ದರೆ ಎಲ್ಲಿ ಬೇಕಾದರೂ ನಿಲ್ಲಬಹುದಿತ್ತು. ನಿಮ್ಮ ಮಗ ಬಿಟ್ಟ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರಿ. ಇದು ಅಹಿಂದಾ ಎಂದು ಹೆಚ್‌ಡಿಡಿ ವ್ಯಂಗ್ಯವಾಡಿದ್ರು. ನೀವು ಅಹಿಂದ ಲೀಡರ್ ಅಗಿದ್ರೆ ಎಲ್ಲಿ ಬೇಕಾದ್ರೂ ನಿಲ್ಲಬಹುದಿತ್ತು. ಯಾಕೆ ನೀವು ನಿಮ್ಮ ಮಗನನ್ನ ಖಾಲಿ ಮಾಡಿಸಿದ್ರಿ? ದೇವೇಗೌಡ್ರು ಮೂಲೆ ಕೂತ ಅಂತ ಲೆಕ್ಕಾ ಹಾಕಿದ್ರಿ. ಗಟ್ಟಿ ಮನಸ್ಸು ಮಾಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಜನವರಿಯಲ್ಲಿ ಅಹಿಂದ ಸಮಾವೇಶ ಮಾಡಲು ಎಲ್ಲಾ ತಯಾರಿ ನಡೆಸಿದ್ದಾರೆ. ಮೈಸೂರಿನಲ್ಲಿ ನಡೆಯುವ ಅಹಿಂದ ಸಮಾವೇಶದ ಬಗ್ಗೆಯೂ ದೇವೇಗೌಡರು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಈ ಮೊದಲು ಜೆಡಿಎಸ್ ನಲ್ಲಿಯೇ ಇದ್ದವರು ಆ ಬಳಿಕ ಕಾಂಗ್ರೆಸ್ ಗೆ ಬಂದರು.


















