Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂಜೆಯೇ ರಾಜೀನಾಮೆ ಕೊಡ್ತೇನೆ : ಜಮೀರ್ ಒಪನ್ ಚಾಲೆಂಜ್

---Advertisement---

ಮಂಡ್ಯ: ಬಿಜೆಪಿಗೆ ಬೇರೆ ಕೆಲಸ ಏನಿದೆ. ಅವರು ಯಾವತ್ತಾದ್ರು ಇಂಥ ಅಭಿವೃದ್ಧಿ ಕೆಲಸ ಮಾಡಿದರೂ ಅಂತ ಹೇಳಿಕೊಳ್ತಾರಾ..? ನಾವೂ ಗಂಟಾಘೋಷವಾಗಿ ಹೇಳ್ತೇವೆ ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ ಸಿಎಂ ಆಗಿದ್ರು, ಇಂಥ ಭಾಗ್ಯಗಳನ್ನ ಕೊಟ್ರು. ಈಗ ನಮ್ಮದೆ ಸರ್ಕಾರವಿದೆ. ನಾವಿಂಥ ಕಾರ್ಯಕ್ರಮಗಳನ್ನು ಕೊಡ್ತೇವೆ ಅಂತೀವಿ. ಬಿಜೆಪಿಯವರು, ನಮ್ಮ ರಾಜ್ಯದ ಬಗ್ಗೆ ಅಷ್ಟೇ ಮಾತನಾಡ್ತಿಲ್ಲ, ಇಡೀ ದೇಶದಲ್ಲಿ ಅವರು, ಕಾರ್ಯಕ್ರಮವನ್ನ ತೋರಿಸಿ ಮಾತನಾಡಿದ್ದಾರಾ..? ಅದು ಸೊನ್ನೆ. ಬರೀ ಅವರಿಗೆ ಏನು ಹಿಂದೂ – ಮುಸಲ್ಮಾನ್ ಅಷ್ಟೇ.

 

ಈಗ ನವೆಂಬರ್ ನಲ್ಲಿ ಸಿಎಂ ಡೇಟ್ ಕೊಟ್ಟಿದ್ದಾರೆ. 42,345 ಮನೆಗಳನ್ನ ಕೊಡ್ತಾ ಇದ್ದೇವೆ. ಯಾಕೆ ಇದನ್ನ ಬಿಜೆಒಇಯವರು ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಏನಾದ್ರೂ ಬಿಜೆಪಿಯವರು ಸ್ಲಂ ಬೋರ್ಡ್ ನಲ್ಲಿ, ರಾಜೀವ್ ಗಾಂಧಿಯಲ್ಲಿ ಏನಾದ್ರು ಒಂದು ಮನೆ ಬಿಜೆಪಿಯವರು ಕೊಟ್ಟಿದ್ರೆ ದೇವ್ರಾಣೆ ಹೇಳ್ತೀನಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಅಶೋಕ್ ಇಷ್ಟೆಲ್ಲ ಮಾತಾಡ್ತಾರಲ್ಲ ನಾನು ಚಾಲೆಂಜ್ ಮಾಡ್ತೀನಿ. ನಾಳೆನೆ ರಾಜಕೀಯ ತೆಗೆದುಕೊಳ್ತೀನಿ.

ಅಶೋಕ್ ಅವರಿಗೂ ಹೇಳ್ತಾ ಇದ್ದೀನಿ, ವಿಜಯೇಂದ್ರ ಅವರಿಗೂ ಹೇಳ್ತಾ ಇದ್ದೀನಿ. 19-23 ವರೆಗೂ ಅವರೇ ಇದ್ರಲ್ಲ, ಏನಾದ್ರೂ ಒಂದೇ ಒಂದು ಮನೆ ಕೊಟ್ಟಿದ್ರೆ ಸಾಬೀತು ಮಾಡಲಿ. ಇವತ್ತು ಸಾಬೀತು ಮಾಡಿದ್ರೆ ನಾಳೆಯೇ ರಾಜೀನಾಮೆ ಕೊಡ್ತೀನಿ. ಇಲ್ಲ ಇವತ್ತು ಸಾಬೀತು ಮಾಡಿದ್ರೆ ಇವತ್ತು ಸಂಜೆಯೇ ರಾಜೀನಾಮೆ ನೀಡುತ್ತೀನಿ. ಬೇರೆಯವರ ರೀತಿ ನಾನಲ್ಲ. ಡಂಗ್ ಹೊಡೀತಾರಲ್ಲ ಆ ಥರದ ವ್ಯಕ್ತಿ ನಾನಲ್ಲ. ಸಾಬೀತು ಮಾಡಿದ ತಕ್ಷಣ ಇವತ್ತು ಸಂಜೆಯೇ ರಾಜ್ಯಪಾಲರ ಮನೆಗೆ ಹೋಗಿ ರಾಜೀನಾಮೆ ಕೊಟ್ಟು ಬರ್ತೀನಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now