Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವೀರೇಂದ್ರ ಹೆಗ್ಡೆ ಬಳಿ ಕ್ಷಮೆ ಕೇಳ್ತೇನೆ : ಸುಜಾತ ಭಟ್ ಬೇಸರ

---Advertisement---

ದಕ್ಷಿಣ ಕನ್ನಡ: ಧರ್ಮಸ್ಥಳದ ಕೇಸಲ್ಲಿ ಈ ಸುಜಾತ ಭಟ್ ಸಾಕಷ್ಟು ಸುದ್ದಿಯಾದರು. ಇಲ್ಲದೆ ಇರುವ ಮಗಳನ್ನ ಇದ್ದಾಳೆ ಎಂದು, ಹುಡುಕಿ ಕೊಡಿ ಎಂದು, ಇನ್ಯಾರದ್ದೋ ಫೋಟೋ ತೋರಿಸಿ ಪೇಚಿಗೆ ಸಿಲುಕಿದ್ದರು. ಇದೀಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರ ಬಳಿ ಕ್ಷಮೆ ಕೇಳ್ತೇನೆ ಎಂದಿದ್ದಾರೆ.

ಖಾಸಗಿ ಚಾನೆಲ್ ಮಾತನಾಡಿರುವ ಸುಹಾತ ಭಟ್, ಪ್ರತಿಯೊಂದು ಹಂತದಲ್ಲೂ ನಾನು ಮೋಸ ಹೋದೆ. ಅಂದು ದೆಹಲಿಗೆ ಹೋದಾಗ ಮಾಸ್ಕ್ ಮ್ಯಾನ್ ಜೊತೆಗೆ ಇದ್ದ. ಆದ್ರೆ ಈತನೇ ಮಾಸ್ಕ್ ಮ್ಯಾನ್ ಅನ್ನೋದು ಗೊತ್ತಿರಲಿಲ್ಲ. ಈ ಗ್ಯಾಂಗ್ ನಲ್ಲಿದ್ದ ಒಬ್ಬರು ಮಾಸ್ಕ್ ಮ್ಯಾನ್ ನನ್ನು ತೋರಿಸಿ, ನಿಮ್ಮ ಬಾಡಿಗಾರ್ಡ್ ಎಂದು ಪರಿಚಯಿಸಿದ್ದರು. ನಾನು ಕೂಡ ಹಾಗೇ ಎಂದುಕೊಂಡಿದ್ದೆ. ಮಾಸ್ಕ್ ಮ್ಯಾನ್ ಒಂದು ದಿನ ನನ್ನ ಮನೆಯಲ್ಲೂ ಇದ್ದ. ಕೋರ್ಟ್ ನಲ್ಲಿ ಮುಖ ರಿವೀಲ್ ಆದಾಗಲೇ ನನಗೂ ಈತ ಮಾಸ್ಕ್ ಮ್ಯಾನ್ ಅನ್ನೋದು ಗೊತ್ತಾಗಿದ್ದು ಎಂದಿದ್ದಾರೆ.

ಅನನ್ಯ ಭಟ್ ಕೇಸಲ್ಲಿ ನಾನು ಪಾತ್ರಧಾರಿಯಷ್ಟೆ. ಸೂತ್ರಧಾರಿಗಳು ಬೇರೆನೆ ಇದ್ದಾರೆ. ಈಗ ಅವರ ಹೆಸರನ್ನ ಹೇಳುವುದಕ್ಕೆ ಹೋಗುವುದಿಲ್ಲ. ಅವರವರು ಮಾಡಿದ ಕರ್ಮ, ಅವರವರೇ ಅನುಭವಿಸುತ್ತಾರೆ. ನಾನು ಮಾಡಿದ ಕರ್ಮ ನಾನು ಅನುಭವಿಸುತ್ತೇನೆ. ನಾನು ಮಾಡಿದ ತಪ್ಪಿಗೆ ಧರ್ಮಸ್ಥಳಕ್ಕೆ ಹೋಗಿ ಕ್ಷಮೆ ಕೇಳುತ್ತೇನೆ. ವೀರೇಂದ್ರ ಹೆಗ್ಗಡೆಯವರ ಹತ್ತಿರ ಹೋಗಿ ಕ್ಷಮೆ ಕೇಳುತ್ತೇನೆ. ಆ ವಿಚಾರದಲ್ಲಿ ಕ್ಷಮೆ ಕೂಡ ಚಿಕ್ಕದು. ಅವರ ಬಳಿ ಹೋಗಿ ಕ್ಷಮೆ ಕೇಳುತ್ತೇನೆ. ಅವರು ಕ್ಷಮಿಸಿದರೆ ನನಗೆ ಅಷ್ಟೇ ಸಾಕು. ಯಾವಾಗ ಹೋಗಬೇಕು ಅನ್ನೋದನ್ನ ಇನ್ನು ನಿರ್ಧಾರ ಮಾಡಿಲ್ಲ ಎಂದು ಸುಜಾತ ಭಟ್ ಹೇಳಿಕೊಂಡಿದ್ದಾರೆ.

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now