ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಖುರ್ಚಿ ಕದನ ಜೋರಾಗಿದೆ. ಒಂದು ಕಡೆ ಡಿಕೆಶಿ ಬಣ ದೆಹಲಿಗೆ ಹಾರಿದ್ರೆ ಮತ್ತೊಂದು ಕಡೆ ಸಿದ್ದರಾಮಯ್ಯ ಅವರ ಬಣ ರಹಸ್ಯ ಸಭೆಯನ್ನ ನಡೆಸಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನೋಡಿ ನನ್ನತ್ರ ಯಾವ ಬಣವೂ ಇಲ್ಲ, ನಾನು ಯಾವ ಬಣದ ನಾಯಕನು ಅಲ್ಲ. ನಾನು 140 ಎಂಎಲ್ಎಗಳಿಗೂ ಅಧ್ಯಕ್ಷ. ನನಗೆ 140 ಮಂದಿಯೂ ಮುಖ್ಯ. ನನಗೆ ಈ ಗುಂಪನ್ನೆಲ್ಲ ಮಾಡುವುದಕ್ಕೂ ಇಷ್ಟವಿಲ್ಲ ಎಂದಿದ್ದಾರೆ.
ಆಡಿದ ಮಾತು ಮುಖ್ಯ ಅಲ್ವಾ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಚೀಫ್ ಮಿನಿಸ್ಟರ್ ಯಾವಾಗಲೂ ಕೂಡ ಅವರ ವಿಚಾರಧಾರೆಯನ್ನು ಹೇಳಿದ್ದಾರೆ. ಹೈಕಮಾಂಡ್ ಉಂಟು ನಾನುಂಟು ಅಂತ ಅವರು ಹೇಳಿದ್ದಾರೆ, ನಾನು ಹೇಳಿದ್ದೇನೆ. ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ ಎಂದಿದ್ದಾರೆ.
ಸದ್ಯ ರಾಜಕಾರಣದ ಪಡಸಾಲೆಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಬಿಹಾರ ಎಲೆಕ್ಷನ್ ಸೋತಿರುವ ಹಿನ್ನೆಲೆ ರಾಜ್ಯ ರಾಜಕಾರಣವೂ ಸೈಲೆಂಟ್ ಆಗಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಬೂದಿ ಮುಚ್ಚಿದ ಕೆಂಡದಂತಿದ್ದ ವಿಚಾರ ಈಗ ಬುಸ್ ಅಂತ ಎದ್ದಿದೆ. ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಹಿನ್ನಲೆ ಅಧಿಕಾರ ಹಂಚಿಕೆಗೆ ಒಳಗಿರುವ ಸಚಿವರು, ಶಾಸಕರಿಂದಾನೇ ಒತ್ತಡಗಳು ಕೇಳಿ ಬರ್ತಿವೆ. ಅದರಲ್ಲೂ ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಲೇಬೇಕೆಂಬ ಹಠವನ್ನ ನಾಯಕರು ತೊಟ್ಟಂತೆ ಇದೆ. ಅದಕ್ಕೆ ದೆಹಲುಗೆ ಹಾರಿ, ಹೈಕಮಾಂಡ್ ನಾಯಕರ ಭೇಟಿಗೆ ಯತ್ನಿಸಿದ್ದಾರೆ. ದೆಹಲಿಯಿಂದ ಬಂದ ಮೇಲೆ ಅಲ್ಲಿನ ಬೆಳವಣಿಗೆ ಏನೆಲ್ಲಾ ಆಯ್ತು ಎಂಬುದು ತಿಳಿಯಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











