Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನಾನು ಪಾತ್ರಧಾರಿ ಮಾತ್ರ : ಮಾಸ್ಕ್ ಮ್ಯಾನ್ ಚಿನ್ನಯ್ಯನ ಹಿನ್ನೆಲೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ

---Advertisement---

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತು ಹಾಕಿದ್ದೇನೆ ಎಂದು ಬಂದಿದ್ದ ವ್ಯಕ್ತಿ ಚಿನ್ನಯ್ಯನ ಬಂಧನವಾಗಿದೆ. ಎಸ್ಐಟಿ ಅಧಿಕಾರಿಗಳ ತನಿಖೆಯ ನಂತರ ಸಾಕಷ್ಟು ವಿಚಾರಗಳನ್ನ ಆ ವ್ಯಕ್ತಿ ಬಾಯ್ಬಿಟ್ಟಿದ್ದಾರೆ. ಈತನ ಹಿನ್ನೆಲೆಯೂ ಬಯಲಾಗಿದೆ. ಈತನ ನಿಜವಾದ ಹೆಸರು ಚಿನ್ನಯ್ಯ ಅಲಿಯಾಸ್ ಚೆನ್ನ. ಈತ ಮೂಲತಃ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದವರು. ಈತನಿಗೆ ಒಬ್ಬರಲ್ಲ ಮೂವರು ಹೆಂಡತಿಯರು. ಈ ಹಿಂದೆ ಈತ ಧರ್ಮಸ್ಥಳದಲ್ಲಿ ಸಫಾಯಿ ಕರ್ಮಚಾರಿ ಕೆಲಸವನ್ನ ಮಾಡುತ್ತಿದ್ದರಂತೆ. ಇಲ್ಲಿ ಬಿಟ್ಟ ಮೇಲೆ ತಮಿಳುನಾಡಿನ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಇದ್ದಕ್ಕಿದ್ದ ಹಾಗೇ ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ ಎಂದು ಬಂದ.

ಎಸ್ಐಟಿ ಅಧಿಕಾರಿಗಳ ವಿಚಾರಣೆಯಲ್ಲಿ ನಾನು ಪಾತ್ರಧಾರಿ ಅಷ್ಟೆ ಸೂತ್ರಧಾರಿಗಳು ಬೇರೆನೆ ಇದ್ದಾರೆ ಎಂಬ ಮಾತನ್ನ ಈತ ಹೇಳಿದ್ದಾನೆ. ನನಗೆ ಈ ರೀತಿ ಹೇಳುವುದಕ್ಕೆ ಹೇಳಿದರು. ಹಾಗಾಗಿ ನಾನು ಈ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್ ಗೆ ಒಪ್ಪಿಸು ಎಂದರು ನಾನು ಒಪ್ಪಿಸಿದೆ. ಕೋರ್ಟ್ ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾನೆ.

ಇದೇ ವೇಳೆ ಚಿನ್ನಯ್ಯ ಹಣಕ್ಕಾಗಿ ಈ ಕೆಲಸವನ್ನೆಲ್ಲ ಮಾಡಿರುವುದು ಎಂಬುದಾಗಿಯೂ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಒಟ್ಟಾರೆ ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದ ವಿಚಾರದಲ್ಲಿ ಮಾಸ್ಕ್ ಮ್ಯಾನ್ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ. ತಾಳ್ಮೆಯಿಂದಾನೇ ಎಲ್ಲವನ್ನು ಅಗೆದಿದ್ದ ಎಸ್ಐಟಿ ಇದೀಗ ಆತನನ್ನ ಕೋರ್ಟ್ ಗೆ ಒಪ್ಪಿಸಿ, ವಿಚಾರಣೆಯನ್ನ ನಡೆಸುತ್ತಿದೆ. ಮೇಲ್ನೋಟಕ್ಕೆ ಎಲ್ಲವೂ ಷಡ್ಯಂತ್ರದಂತೆ‌ ಕಂಡಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲಾ ಸತ್ಯ ಬಯಲಾಗಲಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment