ಹಲವು ವರ್ಷಗಳ ಕಾಲ ಜೈಲುವಾಸ ಅನುಭವಿಸಿ, ಬಳ್ಳಾರಿಗೆ ಬರಲು ಸಾಧ್ಯವಾಗದೆ, ಗಂಗಾವತಿಯಿಂದ ಸ್ಪರ್ಧೆ ಮಾಡಿ, ಗೆದ್ದಿದ್ದ ಜನಾರ್ದನ ರೆಡ್ಡಿ ಇಂದು ಮತ್ತೆ ಜೈಲು ಸೇರಿದ್ದಾರೆ. ಬರೋಬ್ಬರಿ ಏಳು ವರ್ಷಗಳ ಕಾಲ ಸೆರೆವಾಸದ ಶಿಕ್ಷೆ ಸಿಕ್ಕಿದೆ. ಜನಾರ್ದನ ರೆಡ್ಡಿ ಅವರನ್ನು ಅರೆಸ್ಟ್ ಮಾಡಿದ ಪೊಲೀಸರು, ಕೋರ್ಟ್ ಗೆ ಹಾಜರು ಪಡಿಸಿದ್ದರು. ಈ ವೇಳೆ ಜಡ್ಜ್ ಮುಂದೆ ಮನವಿ ಮಾಡಿಕೊಂಡು, ನ್ಯಾಯಾಧೀಶರ ಕೋಪಕ್ಕೆ ತುತ್ತಾಗಿದ್ದಾರೆ ಜನಾರ್ದನ ರೆಡ್ಡಿ ಅವರು.
ಇಂದು ಕೋರ್ಟ್ ಮುಂದೆ ಜನಾರ್ದನ ರೆಡ್ಡಿ ಅವರನ್ನ ಹಾಜರು ಪಡಿಸಲಾಗಿತ್ತು. ಸಿಬಿಐ ಕೋರ್ಟ್ ಜನಾರ್ದನ ರೆಡ್ಡಿ ಅವರಿಗೆ 7 ವರ್ಷಗಳ ಕಾಲ ಶಿಕ್ಷೆಯನ್ನ ವಿಧಿಸಿತ್ತು. ಶಿಕ್ಷೆ ಪ್ರಕಟವಾಗುತ್ತಿದ್ದಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ನಾನೀಗ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇನೆ. ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು.

ಇದನ್ನು ಕೇಳಿಸಿಕೊಂಡ ನ್ಯಾಯಾಧೀಶರು, ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮ ತಪ್ಪಿಗೆ ಜೀವಾವಧಿ ಶಿಕ್ಷೆ ನೀಡಬೇಕು. ನಿಮ್ಮ ಅಪರಾಧಕ್ಕೆ ಹತ್ತು ವರ್ಷ ಶಿಕ್ಷೆ ಕೊಟ್ಟರು ಕಡಿಮೆಯೇ ಎಂದು ಗರಂ ಆಗಿದ್ದಾರೆ. ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆಯಲ್ಲಿ ಮತ್ತೆ ಗಾಲಿ ಜನಾರ್ದನ ರೆಡ್ಡಿ ಲಾಕ್ ಆಗಿದ್ದಾರೆ. ಮೈನಿಂಗ್ ಕೇಸ್ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪನ್ನ ನೀಡಿದೆ. ಸಿಬಿಐ ಕೇಸಲ್ಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆಯಾಗಿದೆ. ಮತ್ತೊಮ್ಮೆ ಚಂಚಲಗೂಡು ಜೈಲಿಗೆ ಹೋಗೋದು ಫಿಕ್ಸ್ ಆಗಿದೆ.


















