Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂತ್ರಾಲಯದಲ್ಲಿ ಹುಂಡಿ ಎಣಿಕೆ : 22 ದಿನದಲ್ಲಿ ಬಂದದ್ದು ಎಷ್ಟು ಕೋಟಿ ಕಾಣಿಕೆ..?

---Advertisement---

ರಾಯಚೂರು: ಮಂತ್ರಾಲಯದ ರಾಯರಿಗೆ ಕೋಟಿ ಕೋಟಿ ಭಕ್ತರು. ನೆನಪಾದಾಗೆಲ್ಲ ರಾಯರ ಸನ್ನಿಧಿಗೆ ಜನ ಹೋಗ್ತಾರೆ. ಸಮಸ್ಯೆಗಳಿಗೆ ರಾಯರಿದ್ದಾರೆ ಅಂತ ಹೇಳಿದ್ರೆ ಸಾಕು ಆ ಸಮಸ್ಯೆಗಳು ನಮ್ಮ ಬಳಿ ಸುಳಿಯುವುದೇ ಇಲ್ಲ ಎಂಬ ನಂಬಿಕೆ ಅಪಾರವಾದದ್ದಾಗಿದೆ. ಹೀಗಾಗಿ ಬಂದ ಭಕ್ತರು ಹರಕೆ ರೂಪದಲ್ಲಿ ಕಾಣಿಕೆಯನ್ನು ಅರ್ಪಿಸುತ್ತಾರೆ. ಕಾಣಿಕೆ ಹುಂಡಿಯಲ್ಲಿ ರಾಯರಿಗೆ ಅರ್ಪಿಸಿದ ಭಕ್ತರ ಕಾಣಿಕೆಯನ್ನು ಇಂದು ಏಣಿಕೆ ಮಾಡಿದ್ದಾರೆ.

ಕಳೆದ 22 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದೆ. ಈ 22 ದಿನದಲ್ಲಿ ಸುಮಾರು 3.35 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಹಣ, ಚಿನ್ನ, ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ನೀಡಿಲಾಗಿದೆ. ಈ ಮೂಲಕ ಕೋಟ್ಯಾಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಆಗಸ್ಟ್ ತಿಂಗಳಲ್ಲಿಯೇ ಆರಾಧನಾ ಮಹೋತ್ಸವ ಕೂಡ ನಡೆದಿದೆ. ಮಾಮೂಲಿ ಹೋಗುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದಾರೆ. ಕಳೆದ 22 ದಿನಗಳಲ್ಲಿ ಸಂಗ್ರಹವಾದ ಕಾಣಿಕೆಯಲ್ಲಿ 3,24,52,256 ರೂಪಾಯಿ ನೋಟುಗಳು ಇದೆ.

10,79,,500 ರೂಒಅಯಿ ನಾಣ್ಯಗಳು ಸಂಗ್ರಹವಾಗಿದೆ. ಕಳೆದ 22 ದಿನದಲ್ಲಿ ಒಟ್ಟು 3,35,31,756 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ‌. ಇನ್ನೂ 74 ಗ್ರಾಂ ಚಿನ್ನ, 1440 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಮಂತ್ರಾಲಯ ಮಠದಲ್ಲಿ ಪ್ರಾರಂಭವಾ್ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರಸೇವಕರು ಭಾಗಿಯಾಗುವ ಮೂಲಕ ಭಕ್ತರು ಕಾಣಿಕೆ ರೂಪದಲ್ಲಿ ನೀಡಿರುವ ಹುಂಡಿ ಏಣಿಕೆ ಮಾಡಿದರು. ರಾಯರ ಮಠಕ್ಕೆ ಇಂದಿಗೂ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment