Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿ ಎಣಿಕೆ : 20 ದಿನದಲ್ಲಿ ಕಲೆಕ್ಟ್ ಆಗಿದ್ದೆಷ್ಟು ಕೋಟಿ..?

---Advertisement---

 

ರಾಯಚೂರು; ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯಕ್ಕೆ ಹೋಗುವ ಭಕ್ತರ ಸಂಖ್ಯೆ ಕಡಿಮೆ ಇಲ್ಲ. ರಾಯರನ್ನ ನಂಬುವ ಸಂಖ್ಯೆ ಅಸಂಖ್ಯಾತ. ರಾಜ್ಯ, ಹೊರ ರಾಜ್ಯದಿಂದ ಭಕ್ತರು ಬರ್ತಾರೆ. ಅಷ್ಟೇ ಅಲ್ಲ ಬೇರೆ ದೇಶಗಳಲ್ಲೂ ರಾಯರಿಗೆ ಭಕ್ತರಿದ್ದಾರೆ. ರಾಯರ ಭಕ್ತರು ಎಂದವರನ್ನೆಲ್ಲಾ ಕೇಳಿ ಎಲ್ಲಿಯೂ ಅವರಿಗೆ ನಿರಾಸೆ ಆಗಿಲ್ಲ. ನಮ್ಮ ಜೀವನದಲ್ಲಿ ರಾಯರ ಕೃಪೆ ಇದೆ ಅಂತಾನೇ ಹೇಳಿದ್ದಾರೆ. ಅಷ್ಟು ನಂಬಿಕೆ ರಾಯರೆಂದರೆ. ರಾಯರೆಂದರೆ ನಂಬಿಕೆ.. ನಂಬಿಕೆ ಎಂದರೆ ರಾಯರು ಎಂಬುದೇ ಎಲ್ಲರೂ ನಂಬುವ ಮಾತು.

ಇದೀಗ ಮಂತ್ರಾಲಯದ ಮಠದಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ. ಕೇವಲ 20 ದಿನದಲ್ಲಿ ಕಲೆಕ್ಟ್ ಆಗಿರುವ ಹಣ, ಚಿನ್ನಾಭರಣ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಶ್ರೀಮಠದ ಹುಂಡಿ ಎಣಿಕೆ ಕಾರ್ಯದಲ್ಲಿ ನೂರಾರು ಜನ ಭಾಗಿಯಾಗಿದ್ದರು‌. ಸಾಲಾಗಿ ಕುಳಿತು ಎಲ್ಲರೂ ಹುಂಡಿಗೆ ಬಂದಿದ್ದ ಹಣ, ಚಿನ್ನ ಹಾಗೂ ಬೆಳ್ಳಿಯನ್ನ ಎಣಿಕೆ ಮಾಡಲಾಗಿದೆ.

 

ಮಂತ್ರಾಲಯದ ಮಠದಲ್ಲಿ ಮೇ ತಿಂಗಳಲ್ಲಿ ಸಂಗ್ರಹಣೆಯಾದ ಅಂದ್ರೆ ಮೇ ತಿಂಗಳ 20 ದಿನಗಳಲ್ಲಿ ಸಂಗ್ರಹವಾಗಿರುವ ಹಣ, ಚಿನ್ನದ ಬಗ್ಗೆ ಮಾಹಿತಿ ನೀಡಲಾಗಿದೆ. ಬರೀ 20 ದಿನದಲ್ಲಿ ಬರೋಬ್ಬರಿ 3 ಕೋಟಿ 79 ಲಕ್ಷದ 10 ಸಾವಿರದ 455 ರೂಪಾಯಿ ಸಂಗ್ರಹವಾಗಿದೆ. ಹಾಗೇ 74 ಗ್ರಾಮ್ ಚಿನ್ನ ಹಾಗೂ 1,830 ಗ್ರಾಂ ಬೆಳ್ಳಿ ಕಾಣಿಕೆ ಸಹ ಬಂದಿದೆ. ಮೊದಲಿನಿಂದಲೂ ರಾಯರ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ದಿನಕ್ಕೆ ಸಾವಿರಾರು ಭಕ್ತರು ಗುರುರಾಯರು ದರ್ಶನ ಪಡೆಯುತ್ತಿರುತ್ತಾರೆ. ಓದಾಗ ಹಿತ್ತ ಹರಕೆ ತೀರಿಸುತ್ತಾರೆ, ಹುಂಡಿಗೆ ಪ್ರೀತಿಯಿಂದ ಹರಕೆ ಹಾಕಿ ಬರುತ್ತಾರೆ. ಇಂದು ಹರಕೆಯ ಹುಂಡಿಯನ್ನ ಏಣಿಕೆ ಮಾಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment