Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯಲ್ಲಿ ಇಂದಿನ ಅಡಿಕೆಧಾರಣೆ ಹೇಗಿದೆ..?

---Advertisement---

ದಾವಣಗೆರೆ; ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ ಪ್ರಮುಖ ಬೆಳೆಯಾಗಿದ್ದರು ಸಹ ಅಡಿಕೆ ಬೆಳೆಗಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ದಾವಣಗೆರೆಯ ಸುತ್ತಮುತ್ತಲಿನ ಚನ್ನಗಿರಿ, ಹೊನ್ನಾಳಿಯಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಇದೀಗ ಒಂದು ಕ್ವಿಂಟಾಲ್ ಅಡಿಕೆ ಬೆಳೆಯ ಗರಿಷ್ಠ ದರ 52,299 ರೂಪಾಯಿ ಇದೆ.

ಚನ್ನಗಿರಿ ರಾಶು ಅಡಿಕೆ ಧಾರಣೆ ಗರಿಷ್ಠ ದರ 52,299 ರೂಪಾಯಿ ಇದೆ. ಗರಿಷ್ಠ ದರ 35,012 ರೂಪಾಯಿ ಇದ್ದು ಸರಾಸರಿ ಬೆಲೆ 48,087 ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 24,229 ರೂಪಾಯಿ ಇದೆ. ಕನಿಷ್ಠ ದರ 23,387 ರೂಪಾಯಿ ಇದೆ. ಸರಾಸರಿ ದರ 24,308 ರೂಪಾಯಿ ಇದೆ. ಜನವರಿಯಲ್ಲಿ 52 ಸಾವಿರಕ್ಕಿಂತ ಕಡಿಮೆ ಇದ್ದ ಬೆಲೆ ಫೆಬ್ರವರಿಯಲ್ಲಿ 53 ಸಾವಿರಕ್ಕೆ ಏರಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದ ಬೆಲೆ ಮತ್ತೆ 52 ಸಾವಿರದ ಗಡಿ ದಾಟಿದೆ. ಆದರೆ ಕಳೆದ ವರ್ಷವೆಲ್ಲಾ 55 ಸಾವಿರದ ತನಕ ರೀಚ್ ಆಗಿತ್ತು. ಈ ವರ್ಷವೂ 55 ಸಾವಿರ ದಾಟುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನು ಬೇಸಿಗೆ ಕಾಲ ಆಗಿರೋದ್ರಿಂದ ಬಿಸಿಲ ಬೇಗೆ ಜಾಸ್ತಿ ಇದೆ. ಹೀಗಾಗಿ ಅಡಿಕೆ ಗಿಡಗಳನ್ನ ಕಾಪಾಡಿಕೊಳ್ಳುವುದೇ ರೈತರಿಗೆ ಹರಸಾಹಸದ ಕೆಲಸವಾಗಿರುತ್ತದೆ. ಇನ್ನು ಚನ್ನಗಿರಿಗೆ ಅಡಿಕೆ ನಾಡು ಅಂತಾನೇ ಪ್ರಸಿದ್ಧಿಯಾಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದ ಕಾರಣ ಉತ್ತಮ ಫಸಲು ಕೂಡ ಬಂದಿತ್ತು. ಈ ಬಾರಿಯೂ ಮಳೆ ಚೆನ್ನಾಗಿ ಬರುವ ನಿರೀಕ್ಷೆ ಇದೆ. ಮಳೆ ಚೆನ್ನಾಗಿದ್ದರೆ ಫಸಲು ಕೂಡ ಉತ್ತಮವಾಗಿಯೇ ಬರಲಿದೆ. ಇದೇ‌ ನಿರೀಕ್ಷೆಯಲ್ಲಿ ರೈತರು ಕೂಡ ಇದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment