ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಬೆಳ್ಳಂಬೆಳಗ್ಗೆಯೇ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಈಗ ಹೋಟೆಲ್ ಮಾಲೀಕರು ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ. ರಾಜಧಾನಿಯ ಬಹುತೇಕ ಹೋಟೆಲ್ ಗಳಲ್ಲಿ ಇನ್ನು ಮುಂದೆ ಕಾಫಿ, ಟೀ, ತಿಂಡಿ ಮತ್ತು ಊಟದ ದರಗಳು ಗಣನೀಯವಾಗಿ ಹೆಚ್ಚಾಗಲಿವೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಯುದ್ಧದ ಭೀತಿಯು ನೇರವಾಗಿ ಹೋಟೆಲ್ ಉದ್ಯಮದ ಮೇಲೆ ಪ್ರಭಾವ ಬೀರಿದೆ. ವಾಣಿಜ್ಯ ಬಳಕೆಯ (Commercial) ಎಲ್‌ಪಿಜಿ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಕಳೆದ ಮೂರೇ ತಿಂಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಬರೋಬ್ಬರಿ 1,240 ರೂಪಾಯಿಗಳಷ್ಟು ಹೆಚ್ಚಾಗಿದೆ. ಕಳೆದ ತಿಂಗಳು 991 ರೂಪಾಯಿ ಏರಿಕೆಯಾಗಿದ್ದರೆ, ಇತ್ತೀಚೆಗಷ್ಟೇ ಜೂನ್ 1 ರಂದು ಮತ್ತೆ 46 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ 3,198 ರೂಪಾಯಿ ಇರುವ ಸಿಲಿಂಡರ್ ಬೆಲೆ ಮುಂದಿನ ದಿನಗಳಲ್ಲಿ 4,000 ರೂಪಾಯಿಗೆ ತಲುಪುವ ಭೀತಿ ಎದುರಾಗಿದೆ.
ಸಿಲಿಂಡರ್ ಬೆಲೆ ಕೈಗೆಟುಕದ ಮಟ್ಟಿಗೆ ಏರುತ್ತಿರುವುದರಿಂದ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಗ್ರಾಹಕರ ಮೇಲೆ ಈ ಆರ್ಥಿಕ ಹೊರೆಯನ್ನು ಹಾಕುತ್ತಿದ್ದಾರೆ. ಕೆಲವು ಹೋಟೆಲ್‌ಗಳು ಈಗಾಗಲೇ ರೇಟ್ ಹೆಚ್ಚಿಸಿದ್ದರೆ, ಉಳಿದ ಹೋಟೆಲ್‌ಗಳು ಈ ವಾರದಿಂದಲೇ ಹೊಸ ದರಪಟ್ಟಿಯನ್ನು ಜಾರಿಗೆ ತರಲಿವೆ.

ಹೊಸ ಅಂದಾಜು ದರಗಳ ಪ್ರಕಾರ, ಇಡ್ಲಿ, ವಡೆ, ದೋಸೆಯಂತಹ ಪ್ರತಿಯೊಂದು ತಿಂಡಿಯ ಬೆಲೆಯೂ 5 ರೂಪಾಯಿಯಿಂದ 10 ರೂಪಾಯಿವರೆಗೆ ಹೆಚ್ಚಾಗಲಿದೆ. ಇನ್ನು ಊಟದ ಬೆಲೆಯಲ್ಲಿ 10 ರೂಪಾಯಿಯಿಂದ 20 ರೂಪಾಯಿವರೆಗೆ ಏರಿಕೆಯಾಗಲಿದ್ದು, ದಿನನಿತ್ಯದ ಕಾಫಿ ಮತ್ತು ಟೀ ಬೆಲೆಯೂ ಸಹ 2 ರೂಪಾಯಿಯಿಂದ 3 ರೂಪಾಯಿಯಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















