Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉಪೇಂದ್ರ ಅವರ ಗಾದೆ ಮಾತಿಗೆ ಗೃಹ ಸಚಿವ ಪರಮೇಶ್ವರ್ ಗರಂ..!

ಸಚಿವ ಪರಮೇಶ್ವರ್
---Advertisement---

 

ತುಮಕೂರು: ಫೇಸ್ ಬುಕ್ ಲೈವ್ ಬಂದಾಗ ನಟ ಉಪೇಂದ್ರ ಅವರು ಗಾದೆ ಮಾತೊಂದನ್ನು ಹೇಳುವ ಮೂಲಕ ಒಂದು ಸಮುದಾಯಕ್ಕೆ ಅವಹೇಳನವಾಗುವಂತೆ ಮಾತನಾಡಿದ್ದರು. ಬಳಿಕ ಇದರ ವಿರುದ್ಧ ಹಲವು ಸಂಘಟನೆಗಳು ರೊಚ್ಚಿಗೆದ್ದು ಪ್ರತಿಭಟನೆ ಕೂಡ ನಡೆಸಿದ್ದರು. ಹೈಕೋರ್ಟ್ ನಿಂದ ಉಪೇಂದ್ರ ಅವರಿಗೆ ರಿಲೀಫ್ ಸಿಕ್ಕ ಮೇಲೆ, ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ವಿಚಾರವಾಗಿ‌ ಇಂದು ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿ,‌ ಆಕ್ರೋಶ ಹೊರ ಹಾಕಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಯಾರು ಕೂಡ ಒಂದು ಸಮುದಾಯದ ಬಗ್ಗೆ ಮಾತನಾಡಬಾರದು. ಗಾದೆ ಮಾತು ಇದೆ ಅಂತ ಯಾರೂ ಮಾತನಾಡಬಾರದು. ಸಚಿವರೇ ಆಗಲಿ, ಯಾರೇ ಆಗಲಿ ಈ ರೀತಿ ಮಾತನಾಡುವುದು ಸರಿ ಅಲ್ಲ. ಒಂದು ಸಮುದಾಯದ ಬಗ್ಗೆ ಇಷ್ಟು ಕೀಳಾಗಿ ಮಾತಾಡುವ ಸಂಸ್ಕೃತಿ‌ ನಿಲ್ಲಿಸಬೇಕು.

ಈಗಿನ ಆಧುನಿಕ ಜಗತ್ತಿನಲ್ಲಿ ಆ ನಾಣ್ನೂಡಿ ಸರಿಯಾಗಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಯಾಕೆ ಆ ರೀತಿ ಮಾತನಾಡಬೇಕು. ಆ ಸಮುದಾಯದವರ ನೋವಾಗುವ ರೀತಿ ಮಾತನಾಡಬಾರದು. ಸಿಎಂ ಜೊತೆಗೆ ಮಾತನಾಡ್ತೀನಿ. ಉಪೇಂದ್ರ, ಎಸ್ ಎಸ್ ಮಲ್ಲಿಕಾರ್ಜುನ ಅವರ ಬಗ್ಗೆ ಚರ್ಚೆ ಮಾಡ್ತೇನೆ. ಇಬ್ಬರ ಹೇಳಿಕೆ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸುತ್ತೇನೆ. ಇದೊಂದು ನಾನ್ಸೆನ್ಸ್ ಹೇಳಿಕೆ. ಸಾಮಾಜಿಕ ಜೀವನದಲ್ಲಿ ಇದ್ದು ಇಷ್ಟು ಕೀಳಾಗಿ ಮಾತನಾಡಬಾರದು. ಎರಡು ಪ್ರಕರಣದಲ್ಲೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...