Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು : ನಾಳೆ ಪಿಲಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಳವೆ ಬಾವಿ ಜಲ ಮರುಪೂರಣ ಪ್ರಾತ್ಯಕ್ಷಿತೆ

---Advertisement---

 

 

ಸುದ್ದಿಒನ್, ಹಿರಿಯೂರು,ಮಾರ್ಚ್. 02 : ತಾಲೂಕಿನ ಪಿಲಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಾಳೆ (ಮಾರ್ಚ್ 03 , ಸೋಮವಾರ) ಬೆಳಿಗ್ಗೆ 8.30 ಕ್ಕೆ ಚಿತ್ರದುರ್ಗದ ಜಿಯೋ ರೈನ್ ವಾಟರ್ ಬೋರ್ಡ್‌ ಅಧ್ಯಕ್ಷರು, ಕರ್ನಾಟಕ ಸರ್ಕಾರದ ಯೋಜನಾ ಮಂಡಳಿಯ ಸದಸ್ಯ, ಅಂತರ್ಜಲ ತಜ್ಞ ಡಾ. ಎನ್. ಜೆ. ದೇವರಾಜ ರೆಡ್ಡಿ ಯವರು ಕೊಳವೆ ಬಾವಿಗೆ (ಮಳೆನೀರು ಕೊಯ್ದು) ಜಲ ಮರುಪೂರಣ ಮಾಡುವ ವಿಧಾನದ ಪ್ರಾತ್ಯಕ್ಷಿತೆಯನ್ನು ಏರ್ಪಡಿಸಲಾಗಿದೆ.

2024ರ ಫೆಬ್ರವರಿಯಲ್ಲಿ ಬತ್ತಿದ ಪ್ರೌಢಶಾಲಾ ಆವರಣದಲ್ಲಿರುವ ಕೊಳವೆ ಬಾವಿಗೆ ಜಲ ಮರುಪೂರಣ ಮಾಡುವ ಪ್ರಾತ್ಯಕ್ಷತೆಯನ್ನು ದಾನಿಗಳ ಸಹಾಯದಿಂದ ಹಮ್ಮಿಕೊಳ್ಳಲಾಗಿತ್ತು. ಕಳೆದ ವರ್ಷ ಶಾಲೆಯ ಬೋರ್ ವೆಲ್ ಬತ್ತಿ ಹೋಗಿ ನೀರಿನ ಕೊರತೆ ಉಂಟಾಗಿದ್ದು, ಬಿಸಿಯೂಟ ತಯಾರಿಕೆಗೆ, ಶೌಚಾಲಯ ಬಳಕೆಗೆ ನೀರಿನ ಕೊರತೆ ಅನುಭವಿಸಲಾಗುತ್ತಿದೆ. ಗ್ರಾಮದ ಕುಡಿಯುವ ನೀರಿನ ಟ್ಯಾಂಕ್‌ ನಿಂದ ತಾತ್ಕಾಲಿಕವಾಗಿ ನೀರು ಸರಬರಾಜಾಗುತ್ತಿದ್ದು ನೀರಿನ ಕೊರತೆಯಿಂದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಅಂತರ್ಜಲ ತಜ್ಞ ಡಾ. ಎನ್ ಜೆ ದೇವರಾಜ ರೆಡ್ಡಿ ಇವರ ಮಾರ್ಗದರ್ಶನದಲ್ಲಿ ಪ್ರೌಢಶಾಲಾ ಆವರಣದಲ್ಲಿರುವ ಕೊಳವೆ ಬಾವಿಗೆ ಜಲ ಮರು ಪೂರಣ ಮಾಡುವ ಕಾರ್ಯಕ್ಕೆ ದಾನಿಗಳ ಸಹಾಯದಿಂದ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ.

ಸುತ್ತ ಮುತ್ತಲಿನ ರೈತರು, ಆಸಕ್ತ ಕೃಷಿಕರು ಭಾಗವಹಿಸಿ ಕೊಳವಿ ಬಾವಿಗೆ ಜಲ ಮರುಪೂರಣ ಮಾಡುವ ತಂತ್ರಜ್ಞಾನವನ್ನು ಉಚಿತವಾಗಿ ತಿಳಿದುಕೊಂಡು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಬಹುದು. ತಮ್ಮ ಸಂದೇಹಗಳಿಗೆ ಸಂವಾದದ ಮೂಲಕ ಪರಿಹಾರವನ್ನು ಪಡೆಯಬಹುದಾಗಿದೆ. ಇದರ ಸದುಪಯೋಗವನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಬೇಕೆಂದು ಮುಖ್ಯಶಿಕ್ಷಕ ಆರ್. ಟಿ. ಎಸ್. ಶ್ರೀನಿವಾಸ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...