Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಂಗ್ರೆಸ್ ಮಹಿಳಾ ಮಣಿಗಳೇ ವಿರೋಧಿಸ್ತಿದ್ದಾರೆ : ಛಲವಾದಿ ನಾರಾಯಣಸ್ವಾಮಿ

---Advertisement---

ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಫೇಲ್ ಆಗಿದ್ದು, ಈ ಬಗ್ಗೆ ಕಾಂಗ್ರೆಸ್ ಮಹಿಳೆಯರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಮಹಿಳಾ ಮೀಸಲು ಜಾರಿಗೆ ವಿಳಂಬ ಆಗಿರೋದನ್ನ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಎಂಬ ಹೆಡ್ಲೈನ್ ತೋರಿಸಿ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಯಾವ ಪಕ್ಷದವರು ಬೀದಿಗಿಳಿದು ಹೋರಾಟ ಮಾಡ್ತಾ ಇರೋದು, ಕಾಂಗ್ರೆಸ್ ಪಕ್ಷದವರು. ತಾಯಂದಿರ ನಾನು ಬಹಳ ಗೌರವದಿಂದ ಹೇಳುತ್ತೇನೆ, ನಿಮ್ಮ ಪಕ್ಷದಲ್ಲಿಯೇ ನಿಮಗೆ ಗೌರವ ಇಲ್ಲ ಅಂದ್ರೆ ಏನ್ ಮಾಡ್ತೀರಿ. ನಿಮಗೆ ಅಪಮಾನ ಮಾಡಿದ ಆ ಕಾಂಗ್ರೆಸ್ ಅನ್ನ ನೀವಿನ್ನು ಹತ್ಕೊಂಡೆ ಇರಬೇಕಾ. ನೀವೇ ಕೇಳ್ತಾ ಇದ್ದೀರಲ್ಲ. ಆಯ್ತು ಈಗ ಬಿಲ್ ತಂದ್ವಿ ಅಂದ್ಕೊಳ್ಳಿ. ನಿಮ್ಮ ಕಾಂಗ್ರೆಸ್ ಪಕ್ಷ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೇರಿ, ನಿಮಗೆ ಮುಖಭಂಗ ಮಾಡಿದ್ದಾವಲ್ಲ, ಹೆಣ್ಣು ಮಕ್ಕಳಿಗೆ ಯಾವ ರೀತ ಸಹಿಸ್ಕೊಳ್ತೀರಿ. ಈಗಲಾದರೂ ಛೀಮಾರಿ ಹಾಕಬೇಕಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

 

ಯಾವ ಮುಖ ಇಟ್ಕೊಂಡು ಆ ಪಕ್ಷದಲ್ಲಿ ಮುಂದುವರೆಯುತ್ತೀರಿ. ನಿಮಗೇನಾದ್ರೂ ಆತ್ಮಭಿಮಾನ, ಸ್ವಾಭಿಮಾನ, ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ದರೆ, ಇವತ್ತೆ ಛೀಮಾರಿ ಹಾಕಿ ಕಾಂಗ್ರೆಸ್ ನಿಂದ ಹೊರ ನಡೆಯಬೇಕು. ಒಂದು‌ಸಮಯ‌ನೀವೂ ಮುಂದುವರೆದಿದ್ದೆ ಆದ್ರೆ ನೀವೂ ಕೂಡ ಅಧಿಕಾರಕ್ಕೆ ಅಂಟಿಕೊಂಡ ಜನ. ಕಾಂಗ್ರೆಸ್ ಅಂದ್ರೆ ನಿಮ್ಮ ಪಾಲಿಗೆ ಕ್ಯಾನ್ಸರ್ ಇದ್ದಂತೆ. ನೀವೂ ಅಲ್ಲಿಯೇ ಇದ್ದರೆ ಕ್ಯಾನ್ಸರ್ ನಿಂದ ಸಾಯ್ತಿರಿ. ಕ್ಯಾನ್ಸರ್ ತಗಲಬಾರದು ಅಂದ್ರೆ ದಯವಿಟ್ಟು ಕಾಂಗ್ರೆಸ್ ಬಿಟ್ಟು ಬನ್ನಿ. ಇನ್ಮೇಲೆ ದೇಶದಲ್ಲಿ ಕಾಂಗ್ರೆಸ್ ಉಳಿಯಲ್ಲ. ನಿರ್ನಾಮವಾಗುತ್ತೆ. ನೀವೂ ನಿರ್ನಾಮ ಆಗೋದು ನಮಗೆ ಇಷ್ಟ ಇಲ್ಲ ಎಂಬ ಮಾತನ್ನ ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now