ಹಿರಿಯೂರು ಬಸ್ ದುರಂತ : ಐದು ವರ್ಷದ ಬಾಲಕಿ ಸೇರಿದಂತೆ ಆರು ಮಂದಿ ಸಾವು : ಮೃತರ ಮತ್ತು ಗಾಯಗೊಂಡವರ ಸಂಪೂರ್ಣ ಮಾಹಿತಿ ಇಲ್ಲಿದೆ..!

4 Min Read

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 25 : ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುರುವಾರ (ಡಿಸೆಂಬರ್ 25, 2025) ಬೆಳಗಿನ ಜಾವ ಕಂಟೇನರ್ ಟ್ರಕ್, ಐಷಾರಾಮಿ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐದು ವರ್ಷದ ಬಾಲಕಿ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 06 ಮಂದಿ ಸಾವನ್ನಪ್ಪಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸ್ಪಷ್ಟಪಡಿಸಿದ್ದಾರೆ.

ಮೃತರನ್ನು ಬಿಂದು ವಿ, ಅವರ ಪುತ್ರಿ ಗ್ರೇಮಾ, ಮಾನಸ, ನವ್ಯಾ ಮತ್ತು ರಶ್ಮಿ ಮಹಾಲೆ ಮೃತರು. ಅವರೆಲ್ಲರೂ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದರು. ಅವರಲ್ಲದೆ, ಉತ್ತರ ಪ್ರದೇಶ ಮೂಲದವರು ಎಂದು ಹೇಳಲಾದ ಟ್ರಕ್ ಚಾಲಕ ಕೂಡ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಇಂದು ಬೆಳಗಿನ ಜಾವ 2.00 ಗಂಟೆ ವೇಳೆಯಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ ಹೆಚ್ 48 ರಸ್ತೆಯಲ್ಲಿ ಹಿರಿಯೂರು ನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಕಂಟೈನರ್ ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಎದುರುಗಡೆ ಬೆಂಗಳೂರಿನಿಂದ ಹಿರಿಯೂರು ಮಾರ್ಗವಾಗಿ ಗೋಕರ್ಣಕ್ಕೆ ಸಂಚರಿಸುತ್ತಿದ್ದ ಸ್ಲಿಪರ್ ಕೋಚ್ ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಸುಟ್ಟು ಹೋಗಿರುತ್ತದೆ. ಹಾಗೂ ಲಾರಿಗೂ ಸಹ ಬೆಂಕಿ ಹತ್ತಿ ಲಾರಿಯ ಚಾಲಕನು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಅಪಘಾತಕ್ಕೆ ಟ್ರಕ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ವರದಿಗಳು ತಿಳಿಸಿವೆ.

ಅಪಘಾತಕ್ಕೆ ಒಳಗಾದ ಬಸ್ ಸೀಬರ್ಡ್ ಟೂರಿಸ್ಟ್ ಗೆ ಸಂಬಂಧಿಸಿದ ಬಸ್ಸಿನಲ್ಲಿ ಓರ್ವ ಡ್ರೈವರ್, ಓರ್ವ ಕ್ಲೀನರ್ ಸೇರಿದಂತೆ ಒಟ 33 ಜನರು ಪ್ರಯಾಣಿಸುತ್ತಿದ್ದು, ಈ ಅಪಘಾತದಿಂದಾಗಿ ಐವರು ಪ್ರಯಾಣಿಕರು ಮೃತಪಟ್ಟಿದ್ದು, 28 ಜನ ಗಾಯಗೊಂಡಿರುತ್ತಾರೆ.

ಗಾಯಾಳುಗಳು ಹಿರಿಯೂರು ಸರ್ಕಾರಿ ಆಸ್ಪತ್ರೆ, ಶಿರಾ ಸರ್ಕಾರಿ ಆಸ್ಪತ್ರೆ, ಶಿರಾ ಖಾಸಗಿ ಆಸ್ಪತ್ರೆ ಮತ್ತು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿರುತ್ತದೆ. ಉಳಿದ 25 ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿರುತ್ತವೆ ಎಂಬುದಾಗಿ ವೈದ್ಯರು ತಿಳಿಸಿರುತ್ತಾರೆ.

ಅಪಘಾತವಾದ ಬಸ್ಸಿನಿಂದ ಎಸ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ದಳ ಸಹಾಯದಿಂದ ಮೃತ ದೇಹಗಳನ್ನು ಹೊರತಗೆಯಲಾಗಿದ್ದು 05 ಮೃತ ದೇಹಗಳು ದೊರೆತಿದ್ದು, ಸುಟ್ಟು ಕರಕಲಾಗಿರುವುದರಿಂದ ಸಂಬಂಧಿಕರನ್ನು ಪತ್ತೆ ಹಚ್ಚಿ DNA ಸಹಾಯದಿಂದ ಮೃತ ದೇಹಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಬಸ್ ನಲ್ಲಿ ಒಟ್ಟು 33 ಜನ ಪ್ರಯಾಣಿಕರಲ್ಲಿ 28 ಜನರ ಮಾಹಿತಿ ದೊರೆತಿದೆ. ದೊರೆತಿರುವ 05ಮೃತ ದೇಹಗಳ ಮಾಹಿತಿ ಈ ಕೆಳಗಿನಂತಿದೆ.

ಮೃತಪಟ್ಟವರ ಮಾಹಿತಿ :
1. ಬಿಂದು
2. ಗ್ರೇಯ, (05 ವರ್ಷ) ಬಿಂದು ರವರ ಮಗಳು
3.ಮಾನಸ
4.ನವ್ಯ
5. ರಶ್ಮಿ ಮಹಲೆ ಎಂದು ಗುರುತಿಸಲಾಗಿದೆ.

ಘಟನೆಯ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಅಪಘಾತದಲ್ಲಿ ಗಾಯಗೊಂಡವರ ಮಾಹಿತಿ ಈ ಕೆಳಕಂಡಂತಿದೆ :
1. ಮಂಜುನಾಥ.ಎಂ, 24 ವರ್ಷ, ಬೆಂಗಳೂರು, ಮೊ. ಸಂಖ್ಯೆ : 9972862272

2. ಸಂಧ್ಯಾ ಹೆಚ್. 28 ವರ್ಷ, ಬೆಂಗಳೂರು. ಮೊ. ಸಂಖ್ಯೆ :
9741184080

3. ಶಶಾಂಕ್.ಹೆಚ್.ವಿ, 23 ವರ್ಷ, ಬೆಂಗಳೂರು.
ಮೊ. ಸಂಖ್ಯೆ : 7406623554

4. ದಿಲೀಪ್, 26 ವರ್ಷ, ಬೆಂಗಳೂರು. ಮೊ. ಸಂಖ್ಯೆ :
9945300601

5. ಪ್ರತೀಶ್ವರನ್, 25 ವರ್ಷ, ಬೆಂಗಳೂರು, ಮೊ. ಸಂಖ್ಯೆ :
8940092001

6. ಕವಿತ. 24 ವರ್ಷ, ಬೆಂಗಳೂರು, ಮೊ. ಸಂಖ್ಯೆ : 9741203103

7. ಅನಿರುದ್, 21 ವರ್ಷ, ಬೆಂಗಳೂರು, ಮೊ. ಸಂಖ್ಯೆ :
9591898996

8. ಅಮೃತ, 21 ವರ್ಷ, ಬೆಂಗಳೂರು, ಮೊ. ಸಂಖ್ಯೆ :
8309383043

9.ಇಷಾ, 21 ವರ್ಷ, ಬೆಂಗಳೂರು, ಮೊ. ಸಂಖ್ಯೆ : 9353144929

10. ಸೂರಜ್, 31 ವರ್ಷ, ಬೆಂಗಳೂರು, ಮೊ. ಸಂಖ್ಯೆ :
8888433011

11. ಮಿಲನ, 26 ವರ್ಷ, ಚಿಕ್ಕಮಗಳೂರು, ಮೊ. ಸಂಖ್ಯೆ :
9591083806

12. ವಿಜಯ್, 28 ವರ್ಷ, ಈಜಿಪುರ, ಕೋರಮಂಗಲ, ಬೆಂಗಳೂರು, 8884789262

13. ಅಭಿಷೇಕ್, 25 ವರ್ಷ, ಬೆಂಗಳೂರು, ಮೊ. ಸಂಖ್ಯೆ :
9980096036

14. ಕಿರಣ್ ಪಾಲ್, 23 ವರ್ಷ, ಬೆಂಗಳೂರು, ಮೊ. ಸಂಖ್ಯೆ :
6362356901

15. ಕೀರ್ತನ, 21 ವರ್ಷ, ಬೆಂಗಳೂರು, ಮೊ. ಸಂಖ್ಯೆ :
7978628486

16. ನಂದಿತ, 21 ವರ್ಷ, ಚಿತ್ರದುರ್ಗ, ಮೊ. ಸಂಖ್ಯೆ :
6363735487

17. ದೇವಿಕ,, 21 ವರ್ಷ, ಬೆಂಗಳೂರು, ಮೊ. ಸಂಖ್ಯೆ :
7019141107

18. ಮೇಘರಾಜ್, 23 | ವರ್ಷ, ಕುಮಟಾ, ಮೊ. ಸಂಖ್ಯೆ :
8147789202

19. ಹೇಮರಾಜ್ ಕುಮಾರ್, ಮೊ. ಸಂಖ್ಯೆ : 9620064562

20. ಕಲ್ಪನ ಪ್ರಜಾಪತಿ, ಮೊ. ಸಂಖ್ಯೆ : 9620064562

21. ರಕ್ಷಿತ.ಆರ್, ಮೊ. ಸಂಖ್ಯೆ : 9380514377

22. ಗಗನಶ್ರೀ, ಮೊ. ಸಂಖ್ಯೆ : 9380514377

23. ಮೊಹಮ್ಮದ್ ರಫೀಕ್, 38 ವರ್ಷ, ಹುಲಗೂರು ಗ್ರಾಮ, ಶಿಗ್ಗಾಂ ತಾಲ್ಲೂಕು ಹಾವೇರಿ ಜಿಲ್ಲೆ, ಬಸ್ ಚಾಲಕ, ಮೊ. ಸಂಖ್ಯೆ : 8073654953

24. ಮೊಹಮ್ಮದ್ ಸಾದಿಕ್, 20 ವರ್ಷ, ಹುಬ್ಬಳ್ಳಿ ಟೌನ್
ಬಸ್ ಕ್ಲೀನರ್, ಮೊ. ಸಂಖ್ಯೆ : 9035217270

25. ಆದಿತ್ಯ.ಎನ್, 23 ವರ್ಷ, ಶಿವಮೊಗ್ಗ, ಮೊ. ಸಂಖ್ಯೆ :
9380753818

26. ವರುಣ್, ತಂದೆ ತಿಮ್ಮಾರೆಡ್ಡಿ, 25ವರ್ಷ ರೆಡ್ಡಿ ಜನಾಂಗ, ಸಾಫ್ಟ್ ವೇರ್ ಇಂಜಿನಿಯರ್, ಶ್ರೀ ರಾಮ ಲೇ ಔಟ್ ಜಿವಿಪಿ ಕಾಲೇಜ್ ಹಿಂಭಾಗ ಚಿತ್ರದುರ್ಗ, ಮೊ. ಸಂಖ್ಯೆ : 6362299465

27. ಮಸ್ರತ್ ಉನ್ನಿಸಾ, ಮೊ. ಸಂಖ್ಯೆ : 9663277553

28. ಸೈಯದ್ ಝಮೀರ್ ಗೌಸ್, ಮೊ. ಸಂಖ್ಯೆ :
9663277553.
ಇವರೆಲ್ಲರೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಎಂದು ಪೊಲೀಸರು ದೃಡಪಡಿಸಿದ್ದಾರೆ.

Share This Article