Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು : ವಾಣಿವಿಲಾಸ ಸಾಗರ ಡ್ಯಾಂಗೆ 1220 ಕ್ಯೂಸೆಕ್ ಒಳಹರಿವು

---Advertisement---

ಸುದ್ದಿಒನ್, ಹಿರಿಯೂರು, ಆಗಸ್ಟ್. 05 : ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 1220 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದ್ದು, ಇದರಿಂದ ಪ್ರಸ್ತುತ ಜಲಾಶಯ 123.30 ಅಡಿ ತಲುಪಿದೆ.

ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರ ಮಳೆ ನೀರಿನ ಜೊತೆಗೆ ಭದ್ರಾ ಯೋಜನೆ ನೀರು ಡ್ಯಾಂಗೆ ಹರಿದು ಬರುತ್ತಿದೆ. ಇದರಿಂದ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಜಲಾಶಯಕ್ಕೆ ಮೊದಲ ಬಾರಿಗೆ ಒಳಹರಿವು ನೀರು ಹರಿದು ಬಂದಂತಾಗಿದೆ.

ಜನವರಿಯಲ್ಲಿ ಕೋಡಿ : ಭದ್ರಾ ನೀರು ಹರಿಸಿದ ಪರಿಣಾಮವಾಗಿ ಕಳೆದ ಜನವರಿಯಲ್ಲಿ ಜಲಾಶಯ ಮೂರನೇ ಬಾರಿಗೆ ಕೋಡಿ ಬಿದ್ದಿತ್ತು. ಇದೀಗ ಜಲಾಶಯಕ್ಕೆ ಹೆಚ್ಚು ಮಳೆಯಾಗಿ 6.30 ಅಡಿ ನೀರು ಬಂದರೆ ಡ್ಯಾಂ ನಾಲ್ಕನೇ ಬಾರಿಗೆ ಕೋಡಿ ಬಿಳಲಿದ್ದು, ಒಂದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದ ಡ್ಯಾಂ
ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಮಳೆ ವರದಿ : ತಾಲ್ಲೂಕಿನಲ್ಲಿ ಸೋಮವಾರ ತಡರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, ಈಶ್ವರಗೆರೆಯಲ್ಲಿ 96.04 ಮಿಲಿ ಮೀಟರ್ ಅತಿ ಹೆಚ್ಚು ಮಳೆಯಾಗಿದೆ.

ಹದವಾದ ಮಳೆಯಾಗಿದ್ದು, ಹೂವಿನಹೊಳೆ ಹಳ್ಳ ತುಂಬಿ ಹರಿದಿದೆ. ಕಸವನಹಳ್ಳಿ ಬ್ಯಾರೇಜ್ ಕೂಡ ತುಂಬಿ ತುಳುಕುತ್ತಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈಶ್ವರಗೆರೆಯಲ್ಲಿ 96.04 ಎಂಎಂ, ಬಬ್ಬೂರು 78.8ಎಂಎಂ, ಇಕ್ಕನೂರು 66.4ಎಂಎಂ, ಹಿರಿಯೂರು 54.6 ಎಂಎಂ, ಹಾಗೂ ಸೂಗೂರಿನಲ್ಲಿ 54.2 ಮಿಲಿ ಮೀಟರ್ ಮಳೆಯಾಗಿರುವುದು ವರದಿಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...