ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಿದೆ. ಅದರಲ್ಲೂ ಹಲವು ಅಲ್ಪಸಂಖ್ಯಾತರ ತಲೆದಂಡವಾಗಿದೆ. ಇದೀಗ ಸಚಿವ ಜಮೀರ್ ತಲೆದಂಡದ ಬಗ್ಗೆಯೂ ರೇಣುಕಾಚಾರ್ಯ ಮಾತನ್ನಾಡಿದ್ದಾರೆ.
ದಾವಣಗೆರೆಯಲ್ಲಿ ಮಾತನ್ನಾಡಿದ ರೇಣುಕಾಚಾರ್ಯ, ಮೊನ್ನೆ ಅಬ್ದುಲ್ ಜಬ್ಬರ್ ರಾಜೀನಾಮೆ ಆಯ್ತು. ಇಂದು ರಾಜಕೀಯ ಕಾರ್ಯದರ್ಶಿ ರಾಜೀನಾಮೆ ಕೊಟ್ಟಿರಲಿಲ್ಲ. ಆದರೆ ದೆಹಲಿಯಿಂದ, ಕೆ ಎನ್ ರಾಜಣ್ಣನನ್ನ ಯಾವ ರೀತಿ ಕಿತ್ತಾಕಿದರೋ ಆ ರೀತಿನೆ ಮಾಡಿದ್ರು. ರಾಜೀನಾಮೆ ಕೊಡೋದಕ್ಕೂ ಅವಕಾಶ ಕೊಡಲಿಲ್ಲ, ವಿವರಣೆ ಕೊಡೋದಕ್ಕೂ ಅವಕಾಶ ನೀಡಲಿಲ್ಲ. ನಜೀರ್ ರಾಜೀನಾಮೆ ಕೊಡ್ತಾರೆ ಅಂತ ಕಾಯ್ತಾ ಇದ್ದರು. ಕೊಡದೆ ಇದ್ದಕ್ಕೆ ಸುರ್ಜೆವಾಲ ಅವರು ಹೇಳಿದ ಮೇಲೆ ಕಿತ್ತಾಕುದ್ರು. ಈಗ ಜಮೀರ್ ಅಹ್ಮದ್ ಸರದಿ.

ಬೆಳಗ್ಗೆನೆ ಭೇಟಿ ಮಾಡೋದಕ್ಕೆ ಹೇಳಿದ್ರಂತೆ ಜಮೀರ್ ಅವರಿಗೆ. ಆದರೆ ಬೆಳಗ್ಗೆ ಭೇಟಿಗೆ ಸಾಧ್ಯ ಆಗಿಲ್ಲ. ಇಂದು ರಾತ್ರಿ ಮತ್ತೆ ಭೇಟಿ ಮಾಡಲೇಬೇಕೆಂದು ಹೇಳಿದ್ದಾರಂತೆ. ನಂಗೆ ಇರುವ ಮಾಹಿತಿ ಪ್ರಕಾರ, ಜಮೀರ್ ಅಹ್ಮದ್ ಅವರನ್ನು ಸಹ ಸಚಿವ ಸಂಪುಟದಿಂದ ಕಿತ್ತಾಕೋ ಸಾಧ್ಯತೆ ಇದೆ. ಹಾಗಾಗಿ ಈ ಸರ್ಕಾರಕ್ಕೆ ದಿಕ್ಕು ದೆಸೆ ಇಲ್ಲದಂತಾಗಿದೆ. ಇವರಿಗೆ ಅವರದ್ದೇ ಆದ ಸ್ವಾರ್ಥ ಇದೆ. ರಾಜ್ಯದ ಮತದಾರರು ಮತಗಳನ್ನ ನೀಡಿ, ಅಧಿಕಾರ ಕೊಟ್ಟಿದ್ದಾರೆ. ಜನರ ಋಣವನ್ನ ತೀರಿಸಬೇಕು ಅಂತ ಹೇಳ್ತೇನೆ. ಆದರೆ ಇಲ್ಲಿ ಮುಖ್ಯಮಂತ್ರಿಗಳಿಗೂ ಕಾಳಜಿ ಇಲ್ಲ, ಉಪ ಮುಖ್ಯಮಂತ್ರಿಗೂ ಕಾಳಜಿ ಇಲ್ಲ, ಸಚಿವರಿಗೂ ಕಾಳಜಿ ಇಲ್ಲ. ಮುಖ್ಯಮಂತ್ರಿ ನಾನೇ ಇರ್ಬೇಕಾ, ಇಲ್ಲ ನಾನಾಗ್ ಬೇಕಾ ಎಂಬ ಕಿತ್ತಾಟ ಅವರಲ್ಲಿದೆ. ಈ ಸ್ಪರ್ಧೆಯಲ್ಲಿ ರಾಜ್ಯದ ಅಭಿವೃದ್ಧಿಯನ್ನೇ ಮರೆತಿದ್ದಾರೆ ಎಂದಿದ್ದಾರೆ.













