Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದ ವಿಶ್ವಮಾನವ ಶಾಲೆಯಲ್ಲಿ ಹೀರೆಹಾಳ್ ಇಬ್ರಾಹಿಂಸಾಬ್‍ರವರ ಜನ್ಮದಿನಾಚರಣೆ

---Advertisement---

ಚಿತ್ರದುರ್ಗ, (ಮೇ.12) : ಪಿಂಜಾರ ಸಂಘದ ಸಂಸ್ಥಾಪಕ ಅಧ್ಯಕ್ಷ ದಿವಂಗತ ಹೆಚ್. ಹೀರೆಹಾಳ್ ಇಬ್ರಾಹಿಂಸಾಬ್‍ರವರ 92 ನೇ ಜನ್ಮದಿನಾಚರಣೆಯನ್ನು ಸೀಬಾರದಲ್ಲಿರುವ ವಿಶ್ವಮಾನವ ಶಾಲೆಯಲ್ಲಿ ಶುಕ್ರವಾರ ಆಚರಿಸಲಾಯಿತು.

ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಲೀಲ್‍ಸಾಬ್ ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಪಿಂಜಾರ/ನದಾಫ್ ಸಮಾಜ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕೆಂಬ ಸಂದೇಶವನ್ನು ಹೆಚ್.ಹೀರೆಹಾಳ್ ಇಬ್ರಾಹಿಂಸಾಬ್ ನೀಡಿದ್ದರು. ಅವರ ಆಸೆಯಂತೆ ಪಿಂಜಾರ ಜನಾಂಗ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.

ಪಿಂಜಾರ ನದಾಫ್ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಶಫಿವುಲ್ಲಾ ಮಾತನಾಡುತ್ತ ಹೆಚ್.ಹೀರೆಹಾಳ್ ಇಬ್ರಾಹಿಂಸಾಬ್‍ರವರು ಪಿಂಜಾರ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಆಶಯದಂತೆ ಪಿಂಜಾರ ಜನಾಂಗ ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಹೇಳಿದರು.

ಜೆ.ಕೆ.ಅಕ್ಬರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರ್.ಎಂ.ಡಿ. ಇಂಡಸ್ಟ್ರಿಸ್‍ನ್ ಹಾಜಿ ಆರ್.ದಾದಾಪೀರ್, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಇಮಾಂಸಾಬ್, ಉಪಾಧ್ಯಕ್ಷ ಇ.ಮಹಮದ್ ಆಲಿ, ಷರೀಫಾಬಿ, ವೈ.ಹೆಚ್.ಹುಸೇನ್‍ಪೀರ್, ಸಹ ಕಾರ್ಯದರ್ಶಿ ಸಕೀನಾಬಿ, ಮುಜಾಹಿದ್ ಪಿ.ಬಿ. ಹುಸೇನ್‍ಪೀರ್, ಗೌಸ್‍ಪೀರ್, ಸಂಜುಭಾನು, ನಿವೃತ್ತ ಆರಕ್ಷಕ ಉಪ ನಿರೀಕ್ಷಕ ಟಿ.ಹುಸೇನ್‍ಪೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...