Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2013ರ ಸಿದ್ದರಾಮಯ್ಯ ಬದಲಾಗಿದ್ದಾರಾ..? ಏನ್ ಉತ್ತರ ಕೊಟ್ಟರು ಸಿಎಂ..?

---Advertisement---

ಬೆಂಗಳೂರು: ವಿಶೇಷ ಅಧಿವೇಶನದಲ್ಲಿ ಸುನೀಲ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಬಗ್ಗೆ ಮಾತನ್ನಾಡಿದ್ದಾರೆ. 2013ರಲ್ಲಿ ಇದ್ದಂತ ಸಿದ್ದರಾಮಯ್ಯ ಅವರು ಈಗ ಇಲ್ಲ ಎಂದಿದ್ದಾರೆ. ಅದಕ್ಕೆ ಉತ್ತರಿಸಿದಂತ ಸಿದ್ದರಾಮಯ್ಯ ಅವರು, ಸುನೀಲ್ ಅವರು ಹದಗೆಟ್ಟಿದೆ, ಹಳಿ ತಪ್ಪಿದೆ,‌ ಸಂವೇದನೆ ಇಲ್ಲ. ಅಸಹಾಯಕ ಮುಖ್ಯಮಂತ್ರಿ. ಈ ಅಸಹಾಯಕತೆ ಅಂದ್ರೆ, ಇನ್ನೊಂದು ಮುಂದೆ ಹೋಗಿ ಹೇಳಿದ್ದಾರೆ 2013-18ರವರೆಗೆ ಇದ್ದಂತ ಸಿದ್ದರಾಮಯ್ಯ ಅಲ್ಲ ಎಂದಿದ್ದಾರೆ.

ಇವರೆಲ್ಲಾ ಹಾಗೇನು ಸುಮ್ಮನೆ ಇದ್ರಾ 2013 ರಿಂದ 18ರವರೆಗೆ ಹೊಗಳ್ತಾ ಇದ್ರಾ..? ಆಗಲೂ ಟೀಕೆ ಮಾಡ್ತಾ ಇದ್ರಿ. 2013 ರಲ್ಲಿ ಇದ್ದಂತ ಸಿದ್ದರಾಮಯ್ಯ, 2018ರಲ್ಲಿ ಇದ್ದಂತ ಸಿದ್ದರಾಮಯ್ಯ, ಮುಂದೆಯೂ ಇರುವಂತ ಸಿದ್ದರಾಮಯ್ಯ ಒಂದೇ. ಏನು ಬದಲಾವಣೆ ಇಲ್ಲ. ಬದಲಾಗೋದಕ್ಕೆ ಸಾಧ್ಯನಾ. ಈಗ ಸಾಫ್ಟ್ ಆಗಿಬಿಟ್ಟಿದ್ದಾರೆ ಅಂತ ಹೇಳ್ತೀರಾ. ರಾಜ್ಯ ಸರ್ಕಾರ ಹಳಿ ತಪ್ಪಿ ಬಿಟ್ಟಿದೆ. ಸಂವೇದನೆ ಇಲ್ಲ. ನಿಮಗೆ ಸಂವೇದನೆ ಇತ್ತಾ‌.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕೋವಿಡ್ 19 ಬಗ್ಗೆ ಮೀಟಿಂಗ್ ಕರೆದಿದ್ದರು. ಬಡವರು, ಮಧ್ಯಮವರ್ಗದವರಿಗೆ ಕೆಲಸ ಇಲ್ಲ. ಒಂದು ಕುಟುಂಬಕ್ಕೆ 10 ಸಾವಿರ ಕೊಡಿ ಎಂದೇ. ಕೊಡಲಿಲ್ಲ. ಕಷ್ಟದಲ್ಲಿದ್ದವರಿಗೆ ಏನು ಕೊಡಲಿಲ್ಲ. ಆಗ ಸಂವೇದನೆ ಇತ್ತ ನಿಮ್ಮ ಸರ್ಕಾರಕ್ಕೆ. ಅಕ್ಕಿಯನ್ನ ಕಡಿಮೆ ಮಾಡುದ್ರು. 7 ಕೆಜಿ ಇದ್ದ ಅಕ್ಕಿಯನ್ನ 5 kg ಮಾಡುದ್ರು. ಆಗ ಸಂವೇದನೆ ಇತ್ತಾ ಎಂದು ಪ್ರಶ್ನೆಗಳನ್ನ ಕೇಳಿದ್ದಾರೆ. ಸುನಿಲ್ ಕುಮಾರ್ ಅವರು ಸಿದ್ದರಾಮಯ್ಯ ಅವರು ಉತ್ತರವನ್ನ ನೀಡಿದ್ದಾರೆ. ಸದನದಲ್ಲಿ ಇದೇ ವಿಚಾರ ಜೋರಾಗಿತ್ತು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಉತ್ತರವನ್ನು ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ