Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೃಹಲಕ್ಷ್ಮಿ ಯೋಜನೆ : ಅರ್ಹ ಫಲಾನುಭವಿಗಳಿಗೆ ಬಯೋಮೆಟ್ರಿಕ್, ಮುಖಚಹರೆ ದೃಢೀಕರಣ ಕಡ್ಡಾಯ!

---Advertisement---

ಬೆಂಗಳೂರು.ಜುಲೈ.20: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ಗೆ ಈಗ ಬಿಗಿ ನಿಯಮಗಳ ಬೇಲಿ ಹಾಕಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಇತ್ತೀಚೆಗಷ್ಟೇ ಗೃಹಜ್ಯೋತಿ ಯೋಜನೆಗೆ ಹೊಸ ಟ್ವಿಸ್ಟ್ ನೀಡಿದ್ದ ಸರ್ಕಾರ, ಈಗ ಪ್ರತಿ ತಿಂಗಳು 2,000 ರೂಪಾಯಿ ಪಡೆಯುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಶಾಕ್ ನೀಡಿದೆ.

ಇನ್ಮುಂದೆ ಮಾಸಿಕ ನೆರವು ಮುಂದುವರಿಯಬೇಕಾದರೆ ಬಯೋಮೆಟ್ರಿಕ್ ಅಥವಾ ಮುಖಚಹರೆ ದೃಢೀಕರಣ (ಫೇಷಿಯಲ್ ಅಥೆಂಟಿಕೇಷನ್) ಮಾಡಿಸುವುದು ಕಡ್ಡಾಯವಾಗಿದೆ. ಭಾನುವಾರ ನಡೆದ ಸಂಪುಟ ಸಭೆಯಲ್ಲಿ ಈ ತಾಂತ್ರಿಕ ಪರಿಶೀಲನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸಂಪುಟ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತಂತ್ರಜ್ಞಾನ ಆಧಾರಿತ ಪರಿಶೀಲನೆಯ ಹಿಂದಿನ ಅಸಲಿ ಉದ್ದೇಶವನ್ನು ಬಿಚ್ಚಿಟ್ಟಿದ್ದಾರೆ. ಮಹಿಳಾ ಯಜಮಾನಿಯರ ಬಯೋಮೆಟ್ರಿಕ್, ಬ್ಯಾಂಕ್ ಖಾತೆ ಹಾಗೂ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳು ನೂರಕ್ಕೆ ನೂರರಷ್ಟು ನಿಖರವಾಗಿರಬೇಕು. ಇನ್ಮುಂದೆ ಬೇರೆಯವರ ಫೋನ್ ನಂಬರ್ ನೀಡಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ಗಂಡ ಅಥವಾ ಮಕ್ಕಳ ಬ್ಯಾಂಕ್ ಖಾತೆಗಳನ್ನು ನೀಡಿದ್ದರೂ ಅದನ್ನು ಅಸಿಂಧುಗೊಳಿಸಲಾಗುವುದು. ಕೇವಲ ಮನೆಯ ಮಹಿಳಾ ಮುಖ್ಯಸ್ಥೆಯ ಸ್ವಂತ ಖಾತೆಗೆ ಮಾತ್ರ ನೇರವಾಗಿ ಹಣ ಜಮೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಪ್ರಸ್ತುತ ಫಲಾನುಭವಿಗಳ ಅರ್ಹತೆಯನ್ನು ಕೂಲಂಕಷವಾಗಿ ಮರುಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ. ಈ ಇಡೀ ಡಿಜಿಟಲ್ ತಪಾಸಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಬರೋಬ್ಬರಿ 20 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಸಿಸ್ಟಂನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ನಕಲಿ ಫಲಾನುಭವಿಗಳಿಗೆ ಬ್ರೇಕ್ ಹಾಕಿ, ನೈಜ ಅರ್ಹರಿಗೆ ಮಾತ್ರ ಯೋಜನೆಯ ಲಾಭ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಈ ಆಡಳಿತಾತ್ಮಕ ಹೆಜ್ಜೆ ಇರಿಸಿದೆ.

Join WhatsApp

Join Now

Join Telegram

Join Now