Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಶೌರ್ಯ ಜಾಗರಣ ರಥಯಾತ್ರೆಗೆ ಅದ್ದೂರಿ ಚಾಲನೆ : ಪೂರ್ವಜರ ತ್ಯಾಗ,ಪರಂಪರೆ,  ಪರಾಕ್ರಮದಿಂದ ಹಿಂದೂ ಸಮಾಜ ಉಳಿದಿದೆ : ಸೂರ್ಯನಾರಾಯಣ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್25  : ಹಿಂದುತ್ವಕ್ಕೆ ಅಪಮಾನವಾದಾಗ ನಾವೆಲ್ಲಾ ಒಂದು ಎನ್ನುವ ಭಾವನೆ ಹಿಂದೂಗಳಲ್ಲಿ ಮೂಡಿಸುವುದಕ್ಕಾಗಿ ವಿಶ್ವಹಿಂದೂ ಪರಿಷತ್ ಕಳೆದ ಅವರತ್ತು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಹೇಳಿದರು.

ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಹಿಂದೂ ಮಹಾ ಗಣಪತಿ ಪೆಂಡಾಲ್ ಬಳಿ ಸೋಮವಾರ ಶೌರ್ಯ ಜಾಗರಣ ರಥಯಾತ್ರೆ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಹಿಂದೂ ಪರಿಷತ್‍ನ ಇತಿಹಾಸದಲ್ಲಿ ಇದು ಪ್ರಮುಖ ಯಾತ್ರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಉದ್ದೇಶವಿಟ್ಟುಕೊಂಡು ಬಜರಂಗದಳ ಆರಂಭವಾಯಿತು. 1984 ರಲ್ಲಿ ರಥಯಾತ್ರೆ ನಡೆಸಿ ದೇಶದ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ಕೆಲಸ ನಡೆಯಿತು. ಇದರಿಂದ ಯುವಕರಲ್ಲಿ ಕಿಚ್ಚು ನಿರ್ಮಾಣವಾಯಿತು. ದೇಶದ ಯುವಕರನ್ನು ಸಂಘಟಿಸಿ ಧರ್ಮಾಭಿಮಾನ, ದೇಶಭಕ್ತಿ, ತುಂಬಲಾಗುತ್ತಿದೆ.

55 ಸಾವಿರ ಬಜರಂಗದಳದ ಘಟಕ ದೇಶದಲ್ಲಿ ಕೆಲಸ ಮಾಡುತ್ತಿದೆ. ಪೂರ್ವಜರ ತ್ಯಾಗ. ಪರಂಪರೆ. ಪರಾಕ್ರಮದಿಂದ ಹಿಂದೂ ಸಮಾಜ ಉಳಿದಿದೆ ಎನ್ನುವುದನ್ನು ಇಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವುದು ಶೌರ್ಯ ಜಾಗರಣ ರಥ ಯಾತ್ರೆಯ ಉದ್ದೇಶ ಎಂದು ತಿಳಿಸಿದರು.

ದೇಶವನ್ನು ಲೂಟಿ ಹೊಡೆದು, ದರೋಡೆ ಮಾಡಿ ಅತ್ಯಾಚಾರ ನಡೆಸಿದವರ ಇತಿಹಾಸವನ್ನು ಮಕ್ಕಳು ಪಠ್ಯದಲ್ಲಿ ಓದುವಂತ ದುರ್ಗತಿ ಬಂದಿರುವುದನ್ನು ಸಹಿಸಿಕೊಂಡು ಹಿಂದೂ ಸಮಾಜ ಸುಮ್ಮನೆ ಕೂರುವುದಿಲ್ಲ. ಇದು ಬದಲಾಗಬೇಕು. ದೇಶದಲ್ಲಿ ಆಗುತ್ತಿರುವ ಅಪಮಾನ, ಆಕ್ರಮಣ ಮೆಟ್ಟಿನಿಲ್ಲಬೇಕಾಗಿರುವುದರಿಂದ ಯುವಕರಲ್ಲಿ ಸ್ವಾಭಿಮಾನ, ಜಾಗೃತಿ ಮೂಡಿಸುವುದು ನಮ್ಮ ಕೆಲಸ. ಯುವ ಸಮೂಹ ನಾಶ ಮಾಡಲು ಡ್ರಗ್ ಜಿಹಾದ್ ಹುಟ್ಟಿಕೊಂಡಿದೆ. ಧರ್ಮ ವಿರೋಧಿ, ರಾಷ್ಟ್ರ ವಿರೋಧಿಗಳ ಕೈವಾಡ ಇದರಲ್ಲಿ ಕಾಣುತ್ತಿದೆ. ದೇಶಾದ್ಯಂತ ಡ್ರಗ್ ಜಾಲ ವ್ಯಾಪಿಸಿದೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶೌರ್ಯ ಜಾಗರಣ ರಥಯಾತ್ರೆ ಸಂಚರಿಸಿ ಅ.14 ರಂದು ಉಡುಪಿಯಲ್ಲಿ ಸಮಾಪ್ತಿಯಾಗಲಿದೆ ಎಂದು ಹೇಳಿದರು.

ತುಕಡೆ ಗ್ಯಾಂಗ್‍ಗಳ ಮೂಲಕ ಹಿಂದೂ ಯುವಕರನ್ನು ದಿಕ್ಕುತಪ್ಪಿಸುವ ಕೆಲಸ ಹತ್ತಾರು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿದೆ. ಹಿಂದೂ ಸಮಾಜ ಜಾಗೃತವಾಗಬೇಕು. ಲಕ್ಷಾಂತರ ಹಿಂದೂಗಳು ಧರ್ಮ ಬಿಟ್ಟು ಹೋಗುತ್ತಿರುವುದನ್ನು ತಡೆಯಬೇಕಿದೆ ಎಂದು ಹಿಂದೂ ಯುವಕರನ್ನು ಎಚ್ಚರಿಸಿದರು.

ಕರ್ನಾಟಕ ದಕ್ಷಿಣ ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರಿ ಮಾತನಾಡಿ 59 ವರ್ಷಗಳನ್ನು ಪೂರೈಸಿ ವಿಶ್ವಹಿಂದೂ ಪರಿಷತ್ 60 ನೇ ವರ್ಷಕ್ಕೆ ಕಾಲಿಟ್ಟಿದೆ. ಶತಶತಮಾನಗಳಿಂದ ಹಿಂದೂ ಸಮಾಜ ಅನುಭವಿಸಿಕೊಂಡು ಬರುತ್ತಿರುವ ಸಮಸ್ಯೆಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಯಶಸ್ವಿಯೂ ಆಗಿದೆ.

ಭಾರತದ ಮೇಲೆ ಆಕ್ರಮಣ ದಾಳಿಯಾದರೂ ಸನಾತನ ಹಿಂದೂ ಧರ್ಮ ಉಳಿದಿದೆ. 1528 ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೆಡವಲಾಯಿತು. ನಮ್ಮದು ಸೋಲಿನ ಇತಿಹಾಸವಲ್ಲ. ಪರಾಕ್ರಮದ ಇತಿಹಾಸ ಎನ್ನುವುದನ್ನು ಹಿಂದೂ ಸಮಾಜಕ್ಕೆ ತಿಳಿಸುವುದಕ್ಕಾಗಿ ದೇಶಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ಸಂಚರಿಸುತ್ತಿದೆ. ಅ.10 ರಂದು ರಾಜ್ಯದ ಉಡುಪಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ ಸಮಾಜದಲ್ಲಿ ಜಾತಿ ಜಾತಿಗಳ ನಡುವೆಯಿರುವ ವರ್ಗ ತಾರತಮ್ಯವನ್ನು ನಿವಾರಿಸಿ ಸಾಮರಸ್ಯ ಮೂಡಿಸುವ ಕೆಲಸವಾಗಬೇಕಿದೆ. ದಲಿತರಷ್ಠೆ ಮತಾಂತರವಾಗುತ್ತಿಲ್ಲ. ಎಲ್ಲಾ ಜಾತಿಯಲ್ಲೂ ಮತಾಂತರವಾಗುತ್ತಿದೆ. ದಲಿತರು ದೇವಾಲಯಗಳಲ್ಲಿ ಪ್ರವೇಶಿಸುವಂತಿಲ್ಲ. ಜಾತಿ ತಾರತಮ್ಯ ತೊಲಗಬೇಕು. ಆಗ ಮಾತ್ರ ಮತಾಂತರ ನಿಯಂತ್ರಣಗೊಂಡು ಸನಾತನ ಧರ್ಮ ಗಟ್ಟಿಯಾಗಲಿದೆ ಎಂದು ಹೇಳಿದರು.

ವಿಶ್ವಹಿಂದೂ ಪರಿಷತ್ ಅರವತ್ತು ವರ್ಷಗಳಿಂದ ಅನೇಕ ಏಳುಬೀಳುಗಳನ್ನು ಎದುರಿಸಿ ಧರ್ಮದ ಉಳಿವಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಸಾಮರಸ್ಯ ಸಹಬಾಳ್ವೆಗೆ ಒತ್ತು ಕೊಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಬಜರಂಗದಳ ಪ್ರಾಂತ್ಯ ಸಂಯೋಜಕ ಸುನೀಲ್ ಕೆ.ಆರ್. ಮಾತನಾಡುತ್ತ ವಿಶ್ವಹಿಂದೂ ಪರಿಷತ್ ಬಜರಂಗದಳ ಹಿಂದೂಗಳನ್ನು ಸ್ವಾಭಿಮಾನಿಗಳನ್ನಾಗಿ ಮಾಡುವ ಕೆಲಸ ಹಿಂದಿನಿಂದಲೂ ಮಾಡುತ್ತಿದೆ. ತ್ಯಾಗದ ಪರಂಪರೆ ನಮ್ಮದು ಎನ್ನುವುದನ್ನು ಇಂದಿನ ಪೀಳಿಗೆಗೆ ತಿಳಿಸಬೇಕಿದೆ. ಅನ್ಯಧರ್ಮೀಯರಿಂದ ಹಿಂದೂ ಧರ್ಮದ ಮೇಲೆ ಅನೇಕ ಆಕ್ರಮಣಗಳಾಗಿವೆ. ಇಸ್ಲಾಂ, ಕ್ರೈಸ್ತರ ದಾಳಿಯನ್ನು ಶೌರ್ಯ, ತ್ಯಾಗದ ಮೂಲಕ ನಮ್ಮ ಹಿರಿಯರು ಎದುರಿಸಿದ್ದಾರೆ. ಹಿಂದೂ ಸಮಾಜದ ಯುವಕರನ್ನು ಬಡಿದೆಬ್ಬಿಸುವುದಕ್ಕಾಗಿ ಶೌರ್ಯ ಜಾಗರಣ ರಥಯಾತ್ರೆ ದೇಶಾದ್ಯಂತ ಆರಂಭಗೊಂಡಿದೆ ಎಂದು ನುಡಿದರು.

ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ಕೇಂದ್ರೀಯ ಜಂಟಿ ಕಾರ್ಯದರ್ಶಿ ಸ್ಥಾಣು ಮಾಲಯನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕ ಪಟ್ಟಾಭಿರಾಮ, ಶೌರ್ಯ ಜಾಗರಣ ರಥಯಾತ್ರೆ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಎಂ.ಸುರೇಶ್, ಕರ್ನಾಟಕ ದಕ್ಷಿಣ ಶೌರ್ಯ ಜಾಗರಣ ರಥಯಾತ್ರೆ ಪ್ರಾಂತ ಸಮಿತಿ ಸದಸ್ಯ ಟಿ.ಬದರಿನಾಥ್ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಹಾಗೂ ರೇವಣ್ಣರಿಗೆ ನೋಟೀಸ್ ನೀಡಿದ ಎಸ್ಐಟಿ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ವಿಡಿಯೋದಲ್ಲಿ ಗುರುತು ಸಿಕ್ಕವರನ್ನು ಕರೆಸಿ , ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರ ಕೆಸೆರೆಚಾಟದ ನಡುವೆ ತನಿಖೆ ತೀವ್ರಗೊಂಡಿದೆ. ಎಡಿಜಿಪಿ ಬಿಜಯ್

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

error: Content is protected !!