Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಂಟಲು ನೋವು / ಥ್ರೋಟ್ ಇನ್ಫೆಕ್ಷನ್ ಆಗಿದ್ಯಾ..? ಹಾಗಾದ್ರೆ ಇಲ್ಲಿದೆ‌ ಮನೆ ಮದ್ದು

---Advertisement---

ಸಾಕಷ್ಟು ಜನರಿಗೆ ಎಲ್ಲಿಯಾದರೂ ನೀರು ಕುಡಿದರೆ ಅಥವಾ ಏನಾದರೂ ತಿಂದರೆ ಬಹಳ ಬೇಗನೆ ಗಂಟಲು ನೋವು ಶುರುವಾಗುತ್ತೆ. ಗಂಟಲು ನೋವು ಬಂದರೆ ಕೇಳ್ಬೇಕಾ ನೀರನ್ನು ಕುಡಿಯೋದಿರಲಿ, ಊಟ ತಿನ್ನೋದಿರಲಿ ಎಂಜಲನ್ನು ನುಂಗುವುದಕ್ಕೂ ಅಸಾಧ್ಯ ಅನ್ನಿಸ್ತಾ ಇರುತ್ತೆ. ನಿಮಗೂ ಥ್ರೋಟ್ ಇನ್ಫೆಕ್ಷನ್ ಏನಾದ್ರೂ ಆಗಿದ್ರೆ ಈ ಮನೆ ಮದ್ದನ್ನ ಫಾಲೋ ಮಾಡಿ.

* ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಸ್ಪೂನ್ ಜೇನು ತುಪ್ಪವನ್ನ ಸೇವಿಸಿ. ರಾತ್ರಿ ಮಲಗೋದಕ್ಕೆ ಮುನ್ನವೂ ಒಂದು ಸ್ಪೂನ್ ಸೇವಿಸಿ. ಈ ಜೇನು ತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಅಲರ್ಜಿಕ್ ಅಂಶವನ್ನ ಹೊಂದಿದೆ. ಹೀಗಾಗಿ ನಿಮ್ಮ ಗಂಟಲಿನ ಆರೋಗ್ಯವನ್ನು ಕಾಪಾಡುತ್ತದೆ.

* ಒಂದು ವೇಳೆ ನಿಮಗೆ ಗಂಟಲು ನೋವಿದ್ದರೆ ಇಡೀ ದಿನ ಉಗುರು ಬೆಚ್ಚಗಿನ ನೀರನ್ನ ಕುಡಿಯಿರಿ. ಬಿಸಿ ಗಂಟಲಿಗೆ ತಾಕುವುದರಿಂದಾನೂ ಗಂಟಲು ನೋವು ಹೋಗುತ್ತದೆ. ಹಾಗೇ ತಂಪಾದ ಪದಾರ್ಥಗಳಿಂದ ದೂರವಿರಿ. ಒಂದು ವೇಳೆ ಗಂಟಲು ನೋವಿದ್ದರು ತಂಪು ಪದಾರ್ಥಗಳನ್ನ ತಿಂದರೆ ಇನ್ನು ಹೆಚ್ಚು ನೋವಾಗುತ್ತದೆ. ಗಂಟಲು ಕೆರೆತವೂ ಶುರುವಾಗುವ ಸಾಧ್ಯತೆ ಇರುತ್ತದೆ.

* ಹೆಚ್ಚು ಗಂಟಲು ನೋವಿದ್ದರೆ ಬಿಸಿ ನೀರಿಗೆ ಉಪ್ಪು ಹಾಗೂ ಅರಿಶಿನ ಹಾಕಿ, ಮುಕ್ಕಳಿಸಿ ಉಗಿಯಿರಿ. ದಿನಕ್ಕೆ ಮೂರ್ನಾಲ್ಕು ಬಾರಿ ಈ ರೀತಿ ಮಾಡೋದ್ರಿಂದ ಬೇಗ ಗಂಟಲು ನೋವು ವಾಸಿಯಾಗಿತ್ತೆ. ಮರೆಯಬೇಡು ಯಾವುದೇ ಕಾರಣಕ್ಕೂ ಬಾಳೆಹಣ್ಣು, ಟೀ, ಕಾಫಿ, ಐಸ್ ಕ್ರೀಂನಂಥಹ ಪದಾರ್ಥಗಳನ್ನ ಆ ಸಮಯದಲ್ಲಿ ಸೇವಿಸಲೇಬೇಡಿ. ಸೇವಿಸಿದರೆ ಮತ್ತಷ್ಟು ಗಂಟಲು ಕೆಡುತ್ತದೆ. ಹೀಗಾಗಿ ಬಿಸಿ ನೀರನ್ನು ಕುಡಿಯಿರಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment