Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇಂದ್ರ ಸರ್ಕಾರದಿಂದ ರಾಗಿ, ತೊಗರಿ, ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್

---Advertisement---

ನವದೆಹಲಿ: ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ ನೀಡಲಾಗಿದೆ. ರಾಗಿ ಬೆಳೆಗಾರರು, ತೊಗರಿ ಬೆಳೆಗಾರರಿಗೆ, ಜೋಳ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ನೀಡಲಾಗಿದೆ. ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. ಖಾರೀಫ್ ಹಂಗಾಮಿ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳವಾಗಲಿದೆ.

ಖಾರೀಫ್ ಹಂಗಾಮಿನ ಸುಮಾರು 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲು ಕ್ಯಾಬಿನೆಟ್ ತೀರ್ಮಾನ ಮಾಡಲಾಗಿದೆ. ಇಕ ಮೂಲಕ ರೈತರ ಬೆಳೆಯ ಖರ್ಚಿನ ಮೇಲೆ ಶೇಕಡ 50 ರಷ್ಟು ಲಾಭ ಬರುವಂತೆ ಎಂಎಸ್ಪಿ ನಿಗದಿ ಮಾಡಿದ್ದು, 2.07 ಲಕ್ಷ ಕೋಟಿ ರೂಪಾಯಿ ರೈತರ ಬೆಳೆಗಳನ್ನು ಖರೀದಿ ಮಾಡಲಾಗುತ್ತಿದೆ. ಖಾರೀಫ್ ಬೆಳೆಗಳು ಭಾರತದಲ್ಲಿ ಮಾನ್ಸೂನ್ ಬೆಳೆಗಳಾಗಿವೆ. ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್, ಅಕ್ಟೋಬರ್ ಮಳೆಗಾಲದಲ್ಲಿ ಬೆಳೆಯುವ ಬೆಳೆಗಳಿಗೆ ಖಾರೀಫ್ ಎನ್ನಲಾಗುತ್ತದೆ‌.

ಹಾಗಾದ್ರೆ ಯಾವ ಬೆಳೆಗೆ ಎಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋದಾದ್ರೆ, ಭತ್ತ MSP ಕ್ವಿಂಟಾಲ್ ಗೆ 2,369 ರೂಪಾಯಿ ಏರಿಕೆಯಾಗಿದೆ. ರಾಗಿ ಕ್ವಿಂಟಾಲ್ವಗೆ 4,886 ರೂಪಾಯಿಗೆ ಏರಿಕೆ, ಜೋಳ ಕ್ವಿಂಟಾಲ್ ಗೆ 2,400 ರೂಪಾಯಿ ಏರಿಕೆ, ತೊಗರಿಬೇಳೆ ಕ್ವಿಂಟಾಲ್ ಗೆ 8,000 ಏರಿಕೆ, ಮೀಡಿಯಂ ಹತ್ತಿ ಕ್ವಿಂಟಾಲ್ ಗೆ 7,710 ರೂಪಾಯಿ ಏರಿಕೆ, ಲಾಂಗ್ ಹತ್ತಿ ಕ್ವಿಂಟಾಲ್ ಗೆ 8110 ರೂಪಾಯಿ ಏರಿಕೆ. ಹೆಸರು ಬೇಳೆ – MSP ಕ್ವಿಂಟಾಲ್‌ಗೆ 7,800 ರೂ.ಗೆ ಏರಿಕೆ. ಹೆಸರು ಕಾಳು – MSP ಕ್ವಿಂಟಾಲ್‌ಗೆ 8,768 ರೂ.ಗೆ ಏರಿಕೆಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...