Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

E20 ಪೆಟ್ರೋಲ್ ಬಳಕೆಯ ವದಂತಿಗಳಿಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

---Advertisement---

ದೆಹಲಿ.ಜುಲೈ.04: ದೇಶದಲ್ಲಿ ಇಂಧನ ಆಮದನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇತ್ತೀಚೆಗೆ 20% ಎಥನಾಲ್ ಮಿಶ್ರಿತ ‘E20 ಪೆಟ್ರೋಲ್’ ಅನ್ನು ಪರಿಚಯಿಸಿದೆ. ಶೀಘ್ರದಲ್ಲೇ E85 ಇಂಧನವನ್ನೂ ತರುವುದಾಗಿ ಘೋಷಿಸಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತದೆ, ಇಂಜಿನ್ ಹಾಳಾಗುತ್ತದೆ ಎಂಬಿತ್ಯಾದಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಈ ವದಂತಿಗಳನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಸಾರ್ವಜನಿಕರ ಜಾಗೃತಿಗಾಗಿ ಅಧಿಕೃತ ವಿವರಣೆಯನ್ನು ನೀಡಿದೆ.

ಕೇಂದ್ರ ಸರ್ಕಾರ ನೀಡಿರುವ ಪ್ರಮುಖ ಸ್ಪಷ್ಟನೆಗಳು

ನೀರಿನ ಬಳಕೆ ಕುರಿತ ಸುಳ್ಳು ಸುದ್ದಿ:
ಒಂದು ಲೀಟರ್ ಎಥನಾಲ್ ತಯಾರಿಸಲು 10,000 ಲೀಟರ್ ನೀರು ಬೇಕಾಗುತ್ತದೆ ಎಂಬ ಪ್ರಚಾರ ಸಂಪೂರ್ಣ ಸುಳ್ಳು. ವಾಸ್ತವವಾಗಿ, ಒಂದು ಲೀಟರ್ ಎಥನಾಲ್ ಉತ್ಪಾದನೆಗೆ ಕೇವಲ 3 ರಿಂದ 5 ಲೀಟರ್ ಸಂಸ್ಕರಿಸಿದ ನೀರು ಮಾತ್ರ ಬಳಕೆಯಾಗುತ್ತದೆ.

ಆಹಾರ ಭದ್ರತೆಗೆ ಧಕ್ಕೆಯಿಲ್ಲ:
ಎಥನಾಲ್ ತಯಾರಿಕೆಯಿಂದ ಆಹಾರ ಧಾನ್ಯಗಳ ಕೊರತೆಯಾಗುವುದಿಲ್ಲ. ದೇಶದ ಆಹಾರದ ಅಗತ್ಯತೆಗಳು ಪೂರೈಕೆಯಾದ ನಂತರ ಉಳಿಯುವ ಹೆಚ್ಚುವರಿ ಅಕ್ಕಿಯನ್ನು ಮಾತ್ರ ಇದಕ್ಕೆ ಬಳಸಲಾಗುತ್ತಿದೆ. ಪ್ರಸ್ತುತ ಎಥನಾಲ್ ತಯಾರಿಕೆಯಲ್ಲಿ ಮೆಕ್ಕೆಜೋಳದ ಪಾಲು 40% ಕ್ಕಿಂತ ಹೆಚ್ಚಿದ್ದು, ಇದಕ್ಕೆ ನೀರಿನ ಬಳಕೆಯೂ ತೀರಾ ಕಡಿಮೆ.

ಇದು ಹೊಸ ಪ್ರಯೋಗವಲ್ಲ:
E20 ಪೆಟ್ರೋಲ್ ಭಾರತದಲ್ಲಿ ಮಾಡುತ್ತಿರುವ ಹೊಸ ಪ್ರಯೋಗವಲ್ಲ. ಅಮೆರಿಕ, ಬ್ರೆಜಿಲ್, ಕೆನಡಾ, ಥೈಲ್ಯಾಂಡ್, ಜಪಾನ್ ಮತ್ತು ಯುರೋಪ್ ದೇಶಗಳಲ್ಲಿ ದಶಕಗಳಿಂದಲೂ ಎಥನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ.

ಮೈಲೇಜ್ ಮತ್ತು ಪರ್ಫಾರ್ಮೆನ್ಸ್:
E20 ಇಂಧನದಿಂದ ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ ಎಂಬ ವಾದ ತಪ್ಪು. ‘ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ (ARAI) ಕಾರು ಮತ್ತು ಬೈಕ್ಗಳ ಮೇಲೆ ನಡೆಸಿರುವ ಪರೀಕ್ಷೆಗಳ ಪ್ರಕಾರ, ಮೈಲೇಜ್ನಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ, ಅತ್ಯಂತ ನಗಣ್ಯ ವ್ಯತ್ಯಾಸವಿರಬಹುದು ಅಷ್ಟೆ.

ಇಂಜಿನ್ ಸುರಕ್ಷತೆ:
ಈ ಪೆಟ್ರೋಲ್ನಿಂದ ಇಂಜಿನ್ ಹಾಳಾಗುವುದಿಲ್ಲ. ಆದರೆ, ತೀರಾ ಹಳೆಯ ವಾಹನಗಳಲ್ಲಿರುವ ಕೆಲವು ರಬ್ಬರ್ ಭಾಗಗಳು ಸ್ವಲ್ಪ ಬೇಗನೆ ಸವೆಯುವ ಸಾಧ್ಯತೆಯಿರುತ್ತದೆ, ಅವುಗಳನ್ನು ಬದಲಾಯಿಸಿಕೊಂಡರೆ ಸಾಕು. ಇನ್ನು ಹೊಸದಾಗಿ ಬರುತ್ತಿರುವ ವಾಹನಗಳಿಗೆ (E20 Compliant) ಯಾವುದೇ ತೊಂದರೆಯಾಗುವುದಿಲ್ಲ.ಕಂಪನಿಗಳು ಅನುಮೋದಿಸಿದ ವಾಹನಗಳಿಗೆ ಇನ್ಶೂರೆನ್ಸ್ ಮತ್ತು ವಾರಂಟಿ ಎಂದಿನಂತೆ ಮುಂದುವರಿಯುತ್ತದೆ. E20 ಇಂಧನ ಬಳಸಿದ್ದಕ್ಕೆ ವಾರಂಟಿ ರದ್ದಾಗುತ್ತದೆ ಎಂಬ ವದಂತಿಗಳು ಸುಳ್ಳು.

ಇಂಧನ ಟ್ಯಾಂಕ್ ಗೆ ಇರುವೆ, ನೊಣಗಳು ಬರುವುದಿಲ್ಲ:
ಎಥನಾಲ್ ಅನ್ನು ಕಬ್ಬಿನಿಂದ ತಯಾರಿಸುವುದರಿಂದ ಟ್ಯಾಂಕ್ ಗೆ ಇರುವೆಗಳು ಬರುತ್ತವೆ ಎಂಬುದು ಮೂರ್ಖತನದ ಪ್ರಚಾರ. ಎಥನಾಲ್ ಅನ್ನು ‘ಡಿಸ್ಟಿಲೇಶನ್’ (ಬಟ್ಟಿ ಇಳಿಸುವಿಕೆ) ಪ್ರಕ್ರಿಯೆಯ ಮೂಲಕ ತಯಾರಿಸುವುದರಿಂದ ಅದರಲ್ಲಿ ಸಕ್ಕರೆಯ ಅಂಶವೇ ಇರುವುದಿಲ್ಲ.

ಸರ್ಕಾರ ಇದನ್ನು ಕೋರ್ಟ್ನಲ್ಲಿ ‘ಕೇವಲ ಒಂದು ಪ್ರಯೋಗ’ ಎಂದು ಹೇಳಿದೆ ಎಂಬ ಸುದ್ದಿ ಸುಳ್ಳು. ಸುಪ್ರೀಂ ಕೋರ್ಟ್ನಲ್ಲಿ ನಡೆದ ಪ್ರಕರಣವು ಎಥನಾಲ್ ಖರೀದಿ ಒಪ್ಪಂದಗಳಿಗೆ ಸಂಬಂಧಿಸಿದ್ದಾಗಿದೆಯೇ ಹೊರತು ಇಂಧನದ ಗುಣಮಟ್ಟದ ಕುರಿತಾಗಿ ಅಲ್ಲ.

ಟ್ಯಾಂಕ್ ಗಳಲ್ಲಿ ನೀರು ಸೇರುವಿಕೆ:
E20 ಪೆಟ್ರೋಲ್ನಿಂದಾಗಿ ವಾಹನಗಳ ಟ್ಯಾಂಕ್ನಲ್ಲಿ ನೀರು ಉತ್ಪತ್ತಿಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಆಧುನಿಕ ವಾಹನಗಳಲ್ಲಿ ಹಾಗೂ ಪೆಟ್ರೋಲ್ ಬಂಕ್ಗಳಲ್ಲಿ ನೀರು ಸೇರದಂತೆ ಎಲ್ಲಾ ರೀತಿಯ ಅತ್ಯಾಧುನಿಕ ಭದ್ರತಾ ಪ್ರೋಟೋಕಾಲ್ ಗಳನ್ನು ಅನುಸರಿಸಲಾಗುತ್ತದೆ.

ಕಬ್ಬಿನ ರಸವನ್ನು ನೇರವಾಗಿ ಬೆರೆಸುವುದಿಲ್ಲ
ಪೆಟ್ರೋಲ್ ಗೆ ನೇರವಾಗಿ ಕಬ್ಬಿನ ರಸವನ್ನು ಮಿಶ್ರಣ ಮಾಡಲಾಗುತ್ತಿದೆ ಎಂಬ ವೈರಲ್ ವೀಡಿಯೊಗಳು ಸಂಪೂರ್ಣ ನಕಲಿ. ಎಥನಾಲ್ ಎಂಬುದು ಕೈಗಾರಿಕಾ ಹುದುಗುವಿಕೆ (Fermentation) ಮತ್ತು ನಿರ್ಜಲೀಕರಣ (Dehydration) ಪ್ರಕ್ರಿಯೆಗಳ ಮೂಲಕ ತಯಾರಾಗುವ ಒಂದು ರೀತಿಯ ಆಲ್ಕೋಹಾಲ್ ಆಗಿದೆ. ಇದನ್ನು ವೈಜ್ಞಾನಿಕವಾಗಿ ಪ್ರತ್ಯೇಕವಾಗಿ ಸಿದ್ಧಪಡಿಸಲಾಗುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now