ಬೆಂಗಳೂರು.ಜುಲೈ.20: ರಾಜ್ಯ ಸರ್ಕಾರದ ನೌಕರರು ಮತ್ತು ಅಧಿಕಾರಿಗಳ ಮಾಸಿಕ ವೇತನವನ್ನು ಯಾವುದೇ ವಿಳಂಬವಿಲ್ಲದೆ ನಿಗದಿತ ಸಮಯದೊಳಗೆ ಪಾವತಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ‘ಕೇಂದ್ರೀಕೃತ ವೇತನ ಪಾವತಿ’ ವ್ಯವಸ್ಥೆಯನ್ನು ಇದೀಗ ಜುಲೈ-2026ರ ಮಾಹೆಯಿಂದ ಎರಡನೇ ಹಂತದಲ್ಲಿ ವಿಸ್ತರಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಸರ್ಕಾರದ ಖಜಾನೆ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.
ವೇತನ ಮತ್ತು ಲೆಕ್ಕಪತ್ರ ಅಧಿಕಾರಿ (PAO) ಮಾದರಿಯಲ್ಲಿ ಕೇಂದ್ರೀಕೃತವಾಗಿ ವೇತನ ವಿತರಿಸಲು ಈಗಾಗಲೇ “ರಾಜ್ಯ ಕೇಂದ್ರೀಯ ಪಾವತಿ ಖಜಾನೆ”ಯನ್ನು ಸೃಜಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಕಳೆದ ಜೂನ್-2026ರ ಮಾಹೆಯಲ್ಲಿ ಪ್ರಾಯೋಗಿಕವಾಗಿ ಖಜಾನೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆಗಳ ಅಧಿಕಾರಿ ಮತ್ತು ನೌಕರರ ವೇತನವನ್ನು ಈ ಹೊಸ ವ್ಯವಸ್ಥೆಯಡಿ ಯಶಸ್ವಿಯಾಗಿ ತರಲಾಗಿದ್ದು, ನಿಗದಿತ ಸಮಯದೊಳಗೆ ವೇತನ ಪಾವತಿ ಪ್ರಕ್ರಿಯೆಯನ್ನು ಸುಸೂತ್ರವಾಗಿ ಪೂರ್ಣಗೊಳಿಸಲಾಗಿದೆ.
ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಧಾರದಂತೆ, ಜುಲೈ-2026ರ ಮಾಹೆಯಿಂದ ದ್ವಿತೀಯ ಹಂತದಲ್ಲಿ ಈ ಕೆಳಗಿನ ಮೂರು ಪ್ರಮುಖ ಇಲಾಖೆಗಳ ಅಧಿಕಾರಿ ಹಾಗೂ ನೌಕರರ ಮಾಸಿಕ ವೇತನವನ್ನು ‘ರಾಜ್ಯ ಕೇಂದ್ರೀಯ ಪಾವತಿ ಖಜಾನೆ’ ಮೂಲಕವೇ ಪಾವತಿಸಲು ನಿರ್ಧರಿಸಲಾಗಿದೆ.
ಅಬಕಾರಿ ಇಲಾಖೆ
ಸಾರಿಗೆ ಇಲಾಖೆ
ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ
ಈ ಮೂರು ಇಲಾಖೆಗಳ ಮಾಸಿಕ ವೇತನ ಪಾವತಿಯನ್ನು ಹೊಸ ವ್ಯವಸ್ಥೆಯ ಮೂಲಕವೇ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಖಜಾನೆ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಇಲಾಖಾವಾರು ಜಾರಿಗೆ ತರುವ ದಿನಾಂಕ, ಕಾರ್ಯವಿಧಾನ ಹಾಗೂ ಹೆಚ್.ಆರ್.ಎಮ್.ಎಸ್-2 ಮತ್ತು ಖಜಾನೆ-2 ರಲ್ಲಿ ಅನುಸರಿಸಬೇಕಾದ ವೇಳಾಪಟ್ಟಿಯ ವಿಸ್ತೃತ ಮಾರ್ಗಸೂಚಿಯನ್ನು ಆಯುಕ್ತರು ಪ್ರಕಟಿಸಲಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










