Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : 70 ವರ್ಷವಾದವರಿಗೆ ಇನ್ಮುಂದೆ ಭಯಬೇಡ..!

---Advertisement---

ಬೆಂಗಳೂರು: ಇತ್ತೀಚಿನ ಒತ್ತಡ, ಜೀವನ ಶೈಲಿಯಿಂದ ಆರೋಗ್ಯ ಸುಧಾರಿಸಿಕೊಳ್ಳುವುದು ಸುಲಭವಲ್ಲ. ಎಷ್ಟೋ ಜನರಿಗೆ ಆರೋಗ್ಯ ಸಮಸ್ಯೆ ಚಿಕ್ಕವಯಸ್ಸಿನಲ್ಲಿಯೇ ಶುರುವಾಗುತ್ತಿದೆ. ಚಿಕ್ಕವಯಸ್ಸಲ್ಲಿರುವವರು ಹೆಲ್ತ್ ಇನ್ಶುರೆನ್ಸ್ ಮಾಡಿಸಿಕೊಂಡು ಆಸ್ಪತ್ರೆಯ ಖರ್ಚುಗಳನ್ನೆಲ್ಲ ಹೇಗೋ ಬ್ಯಾಲೆನ್ಸ್ ಮಾಡ್ತಾರೆ. ಆದ್ರೆ 70 ವರ್ಷ ವಯಸ್ಸಾದವರಿಗೆ ಹೆಲ್ತ್ ಇನ್ಶುರೆನ್ಸ್ ಮಾಡಿಕೊಡುವುದಿಲ್ಲ. ಆದರೆ ಕೇಂದ್ರ ಸರ್ಕಾರ ಅಂಥವರಿಗೆ ಗುಡ್ ನ್ಯೂಸ್ ನೀಡಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 70 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ವಿಮೆ ಉಚಿತವಾಗಿ ನೀಡಲಾಗುತ್ತಿದೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ. ಹೊಸ ನಿಯಮದ ಅನ್ವಯವಾಗುವಂತೆ ದೇಶದಲ್ಲಿ ಹಿರಿಯ ನಾಗರಿಕರಿಗೆ 5 ಲಕ್ಷದವರೆಗೂಉಚಿತ ಆರೋಗ್ಯ ಸೇವೆ ನೀಡಲಾಗುತ್ತದೆ. 70 ವರ್ಷ ಮೇಲ್ಪಟ್ಟ ಪ್ರತೊಯೊಬ್ಬರಿಗೂ ಈ ಯೋಜನೆ ಫಲಾನುಭವಿಗಳಾಗಲು ಅವಕಾಶ ನೀಡಲಾಗಿದೆ. ಇನ್ಮುಂದೆ ಹಿರಿಯ ನಾಗರಿಕರ ಆದಾಯ ಎಷ್ಟೇ ಇದ್ದರೂ ಈ ಯೋಜನೆಗೆ ಅವರು ಕೂಡ ಪಳಾನುಭವಿಗಳಾಗಿರುತ್ತಾರೆ.

ಈ ಯೋಜನೆಯನ್ನು ಪಡೆಯಬೇಕು ಅಂದ್ರೆ ಫಲಾನುಭವುಗಳು ಆಯುಷ್ಮಾನ್ ಕಾರ್ಡ್ ಹೊಂದಿರಲೇಬೇಕಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಇಡೀ ದೇಶದಾದ್ಯಂತ ಆಯುಷ್ಮಾನ್ ಭಾರತ್ ಯೋಜನೆಯಿಂದ ಸದ್ಯ ನಾಲ್ಕೂವರೆ ಕೋಟಿ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿವೆ. ಈ ಯೋಜನೆಯಲ್ಲಿ ಇನ್ಮುಂದೆ ಯಾವುದೇ ಆದಾಯ, ಸಾಮಾಜಿಕ ಸ್ಥಾನದ ಬೇಧವಿಲ್ಲದೆ ಎಲ್ಲಾ 70 ವರ್ಷ ಮೇಲ್ಪಟ್ಟ ನಾಗರಿಕರು ಆರೋಗ್ಯ ವಿಮಾ ಯೋಜನೆ ಯೋಜನೆಗೆ ಅರ್ಹರಾಗಿರುತ್ತಾರೆ ಎಂದಿದ್ದಾರೆ. ಆಯುಷ್ಮಾನ್ ಯೋಜನೆಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿಶಿಷ್ಟ ಗುರುತಿನ ಕಾರ್ಡ್ ನೀಡಲಾಗುತ್ತಿದೆ. ಆ ಕಾರ್ಡ್ ಬಳಸಿ ನಾಗರಿಕರು ವರ್ಷಕ್ಕೆ ಐದು ಲಕ್ಷದವರೆಗೂ ಆರೋಗ್ಯ ವಿಮೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment