ದೆಹಲಿ.ಜೂನ್.29 : ಸೋಮವಾರದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಬರೋಬ್ಬರಿ ಒಂದು ಸಾವಿರ ರೂಪಾಯಿಯಷ್ಟು ಇಳಿಕೆಯಾಗಿ ಗ್ರಾಹಕರಿಗೆ ನಿರಾಳತೆ ತಂದಿದೆ.
ಶುದ್ಧ ಚಿನ್ನ ಎಂದೇ ಕರೆಯಲಾಗುವ 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರದಲ್ಲಿ 93 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 14,302 ರೂಪಾಯಿ ಮುಟ್ಟಿದೆ. ಅದೇ ರೀತಿ, 10 ಗ್ರಾಂ ಅಪರಂಜಿ ಚಿನ್ನದ ದರ 930 ರೂಪಾಯಿಗಳಷ್ಟು ಅಗ್ಗವಾಗುವ ಮೂಲಕ 1,43,020 ರೂಪಾಯಿಗೆ ತಲುಪಿದೆ.
ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲೂ ಗಮನಾರ್ಹ ಇಳಿಕೆ ದಾಖಲಾಗಿದೆ. 1 ಗ್ರಾಂ ಚಿನ್ನದ ಮೇಲೆ 85 ರೂಪಾಯಿ ಕಡಿಮೆಯಾಗಿ 13,110 ರೂಪಾಯಿಗೆ ಮಾರಾಟವಾಗುತ್ತಿದ್ದರೆ, 10 ಗ್ರಾಂ ಆಭರಣ ಚಿನ್ನದ ಬೆಲೆ 850 ರೂಪಾಯಿ ಇಳಿಕೆಯೊಂದಿಗೆ 1,31,100 ರೂಪಾಯಿ ದಾಖಲಾಗಿದೆ.
ಬಂಗಾರದ ದರದಲ್ಲಿ ತಲ್ಲಣ ಉಂಟಾಗಿದ್ದರೂ, ಬೆಳ್ಳಿ ದರ ಮಾತ್ರ ಯಾವುದೇ ಏರಿಳಿತ ಕಾಣದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಮಾರುಕಟ್ಟೆಯಲ್ಲಿ ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆ 240 ರೂಪಾಯಿ ಹಾಗೂ ಒಂದು ಕೆಜಿ ಬೆಳ್ಳಿಯ ದರ 2,40,000 ರೂಪಾಯಿಗೆ ಮಾರಾಟವಾಗುವ ಮೂಲಕ ತಟಸ್ಥವಾಗಿದೆ.









