ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಓನ್, ಚಳ್ಳಕೆರೆ, ಜೂನ್. 29 : ತಾಲ್ಲೂಕಿನ ತಳುಕು ಸಮೀಪವಿರುವ ಎತ್ತಪ್ಪನ ಬೆಟ್ಟವು ಸಾಂಸ್ಕೃತಿಕ ವೀರ ಎತ್ತಪ್ಪನಿಗೆ ಸಮರ್ಪಿತವಾದ ಪವಿತ್ರ ಧಾರ್ಮಿಕ ತಾಣವಾಗಿದೆ. ಕಾಡಗೊಲ್ಲ ಸಮುದಾಯದವರು ಇಲ್ಲಿ ವಿಶೇಷ ಸಂಪ್ರದಾಯಗಳನ್ನು ಆಚರಿಸುತ್ತಾರೆ. ಭಕ್ತರು ಬರಿಗಾಲಿನಲ್ಲಿ ಬೆಟ್ಟವನ್ನು ಹತ್ತಿ ದೇವರ ದರ್ಶನ ಪಡೆಯುವ ಪದ್ಧತಿ ಪುರಾತನ ಕಾಲದಿಂದಲೂ ನಡೆದುಕೊಂಡ ಪದ್ದತಿ ಇದೆ.
ಕಾಲ ಮತ್ತು ನಾಗಾಲೋಟದ ಆಧುನಿಕತೆಯ ಒತ್ತಡವನ್ನು ತಾಳಿಕೊಂಡು ಉಳಿದು ಬಂದಿರುವ ಕೆಲವೇ ಬುಡಕಟ್ಟುಗಳಲ್ಲಿ ಕಾಡಗೊಲ್ಲ ಸಮುದಾಯವೂ ಒಂದು. ಬಹುಸಂಖ್ಯಾತರ ಧಾರ್ಮಿಕ ಮತ್ತು ಸಾಮಾಜಿಕ ದಮನಗಳಿಗೆ ತುತ್ತಾಗದೆ, ತಮ್ಮ ಪ್ರಾಚೀನ ನಂಬಿಕೆ, ಜೀವನಶೈಲಿ ಮತ್ತು ಆಚರಣೆಗಳು ಬಿಟ್ಟುಕೊಡದೇ ಹೆಚ್ಚಿನ ಸಂಸ್ಕೃತಿಯೊಂದಿಗೆ ಬೆಸೆದುಕೊಂಡು ಕಾಡುಗೊಲ್ಲರು ಬದುಕುತ್ತಿದ್ದಾರೆ. ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ, ಸಾಂಸ್ಕಂತಿಕ ನಾಯಕ, ಪವಾಡ ಪುರುಷ ಎನಿಸಿಕೊಂಡಿರುವ ಎತ್ತಪ್ಪನ
ಬರಿಗಾಲಲ್ಲಿ ಬೆಟ್ಟ ಹತ್ತುವ ಭಕ್ತರು ತಳುಕಿನ ಗುಡ್ಡಕ್ಕೆ ಬರುವ ಭಕ್ತರು ತಮ್ಮ ಗ್ರಾಮಗಳಿಂದ 40-50 ಕಿಮೀ ದೂರದಿಂದ ಬರಿಗಾಲಿನಲ್ಲಿ ನಡೆದುಕೊಂಡು ಬರುವ ಸಂಪ್ರದಾಯವಿದೆ, ಹೀಗಾಗಿ ಸಮುದಾಯದ ಜನರು ಕೂಡ ಬರಿಗಾಲಿನಲ್ಲಿ ಬಂದು ತಮ್ಮ ಆರಾಧ್ಯ ದೈವವನ್ನು ಕಣ್ತುಂಬಿಕೊಂಡು ಪೂಜೆ ಮಾಡುತ್ತಾರೆ.’ಕಾಡುಗೊಲ್ಲರ ಕುಲಕಸುಬಾದ ಜಾನುವಾರು ಜೀವನ ಸಾಗಿಸುತ್ತಿರುವ ಸಮುದಾಯಕ್ಕೆ ಜಾನುವಾರುಗಳಿಗೆ ಯಾವುದೇ ರೋಗರುಜಿನಬಾರದಿರಲಿ ಹಾಗೂ ಮಳೆ ಬಂದು ಜಾನುವಾರುಗಳಿಗೆ ಉತ್ತಮ ಮೇವು ಸಿಗಲಿ. ಗ್ರಾಮಗಳಲ್ಲಿ ಯಾವುದೇ ಗಲಾಟೆ ಗದ್ದಲಗಳು ಆಗದಿರಲಿ ಎಂಬ ಉದ್ದೇಶದಿಂದ.ಕಡಿದಾದ ಗುಡ್ಡವನ್ನು ಮಕ್ಕಳು, ಮಹಿಳೆಯರು, ವೃದ್ಧರು ಸಹ ಬರಿಗಾಲಿನಲ್ಲಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದಿದ್ದು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಪ್ರತಿ ಸೋಮವಾರ ಒಂದೊಂದು ಗ್ರಾಮಗಳಿಂದ ಈ ಎತ್ತಪ್ಪನ ಬೆಟ್ಟಕ್ಕೆ ಬರುವ ಪದ್ದತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ ಇಂದು ಸೋಮುವಾರ ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಪನಹಳ್ಳಿಯ ಗೊಲ್ಲರಹಟ್ಟಿಯ ಕಾಡುಗೊಲ್ಲರು ಬೆಳಗಿನ ಜಾವ ನಾಲ್ಕು ಗಂಟೆ ಸಮಯಕ್ಕೆ ಎದ್ದು ಮೀಸಲು ಅಕ್ಕಿಯಿಂದ ಎಡೆ ಮಾಡಿ ಹಸು ಮೇಕೆ ಹೆಮ್ಮೆಯಿಂದ ಹಾಲು ಕರೆದು ಮೀಸಲಿನ ಹಾಲಿನಿಂದ ಮೊಸರು. ಮೀಸಲು ಅಕ್ಕಿಯಿಂದ ಮಾಡಿದಂತಹ ಎಡೆಯನ್ನ ಬಿದುರಿನ ಪುಟ್ಟಿ (ಬಾನಾಡಿ ಪುಟ್ಟಿಯಲ್ಲಿ ತುಂಬಿಕೊಂಡು ಬೆತ್ತ (ಬಿದುರಿನ ಕೋಲು) ಮಿಸಲು ಹಾಲು,ಮೊಸರು .ತುಪ್ಪ ಮತ್ತು ಸಾಮಾಗ್ರಿ ತಲೆ ಮೇಲೆ ಹೊತ್ತುಕೊಂಡು ಪಾದರಕ್ಷೆ ಬಳಸದೆ ಗ್ರಾಮದ ಪೂಜಾರಿ, ಹಿರಿಯರು ,ಯುವಕರು ಮಹಿಳೆಯರು ಮಕ್ಕಳು ಬರಿಗಾಲಿನಲ್ಲಿ ಸುಮಾರ 30 ಕಿಲೋಮೀಟರ್ ನಡೆದುಕೊಂಡು ಬಂದು ಕಡಿದಾದ ದಾರಿಯಲ್ಲಿ
ಎತ್ತಪ್ಪನ ಬೆಟ್ಟ ಹತ್ತಿ ವೀರ ಎತ್ತಪ್ಪನಿಗೆ ನೀರಿನ ಅಭಿಷೇಕ, ಹಾಲಿನ ಅಭಿಷೇಕ ,ತುಪ್ಪ ಅಭಿಷೇಕ ಮಾಡಿ ತಂದಿದ್ದ ಎದೆ ಬುತ್ತಿ ಇಟ್ಟು ಉತ್ತಮ ಮಳೆಯಾಗಲಿ ಎಂದು ವಿಶೇಷ
ಪೂಜೆ ಸಲ್ಲಿಸುತ್ತಾರೆ.
ನಂತರ ಗ್ರಾಮದಿಂದ ತೆಗೆಕೊಂಡು ಹೋದ ಮಿಸಲು ಅಕ್ಕಿಯ ಎಡ ಬುತ್ತಿಯನ್ನ ನೈವೇದ್ಯ ಮಾಡಿ ಉಳಿದ ಬುತ್ತಿಯನ್ನ ಕಲ್ಲಿನ ಮೇಲೆ ಹಾಕಿಕೊಂಡು ಬಂದ ಭಕ್ಕರು ಸೇವಿಸಿ.ನಂತರ ಬೆಟ್ಟವನ್ನು ಇಳಿದು ನಡೆದುಕೊಂಡು ಗ್ರಾಮವನ್ನು ಸೇರುತ್ತಾರೆ . ಸಂದರ್ಭದಲ್ಲಿ ಹೊಟ್ಟೆನಹಳ್ಳಿ ಗ್ರಾಮದ ಪೂಜಾರಿ ಘಟಪ್ಪ,ಹರೀಶ,ಪ್ರಭಾಸ, ಸಿದ್ದೇಶ, ರಾವುಲ್, ಸಿರಿಣ್ಣ, ಚೈತನ್ಯ, ಲಕ್ಷಿದೇವಿ, ಆನಂದಪ್ಪ, ಅಭಿಷೇಕ, ರವಿತೇಜ್ ತೇಜಸ್, ಶಿವಣ್ಣ ಸೇರಿಂದತೆ ಕೋಟೆಪ್ಪನಳ್ಳಿಯ ಗೊಲ್ಲರಹಟ್ಟಿಯ ಕಾಡುಗೋಳ ಸಮುದಾಯದ ಯುವಕರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












