ಬೆಂಗಳೂರು; ಓದುವ ವಿಚಾರದಲ್ಲಿ ಹೆಣ್ಣು ಮಕ್ಕಳುಬಸದಾ ಮುಂದಿರ್ತಾರೆ. ಪ್ರತಿ ಸಲ ಫಲಿತಾಂಶ ಬಂದಾಗಲೂ ಅದು ಎಲ್ಲರಿಗೂ ಅರ್ಥವಾಗಿರುತ್ತದೆ. ಸದಾ ಓದು ಓದು ಅಂತ ಇರುವ ಹೆಣ್ಣು ಮಕ್ಕಳಿಗೆ ಇದೀಗ ಶಿಕ್ಷಣ ಇಲಾಖೆಯೂ ಗುಡ್ ನ್ಯೂಸ್ ನೀಡಿದೆ. ಎಲ್ಲಾ ಶಾಲೆಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಶೇಕಡಾ50 ರಷ್ಟು ಸೀಟನ್ನು ಮೀಸಲಿಡುವುದಕ್ಕೆ ನಿರ್ಧಾರ ಮಾಡಿದೆ. ಈ ನಿರ್ಧಾರ CBSE, ICSE ಸಿಲಬಸ್ ಅನ್ನ ಫಾಲೋ ಮಾಡುವ ಶಾಲೆಗಳಿಗೂ ಅನ್ವಯವಾಗಲಿದೆ.
ಪ್ರತಿ ತರಗತಿಯಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇಕಡ 50 ರಷ್ಟು ಹೆಣ್ಣುಮಕ್ಕಳಿಗೆ ಮೀಸಲಿಡಬೇಕು. ನಿರೀಕ್ಷಿತ ಅರ್ಜಿಗಳು ಲಭ್ಯವಿಲ್ಲದೆ ಇದ್ದಾಗ ಉಳಿದ ಸೀಟನ್ನು ಬಾಲಕರಿಗೆ ನೀಡಬೇಕು. ಭಾಷಾ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆಯನ್ನು ಹೊರತುಪಡಿಸಿ ಅನುದಾನ ರಹಿತ ಹಾಗೂ ಅನುದಾನ ಖಾಸಗಿ ಶಾಲೆಗಳಲ್ಲಿ ಬಾಲಕಿಯರಿಗೆ ಸೀಟನ್ನು ಮೀಸಲಿಡಬೇಕೆಂದು ತಿಳಿಸಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪಾಲನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಚೆನ್ನಾಗಿ ಓದಬೇಕು ಎಂದು ಕನಸು ಕಂಡಿರುವ ಹೆಣ್ಣು ಮಕ್ಕಳಿಗೆ ಒಳ್ಳೆಯ ಅವಕಾಶ ನೀಡಿದಂತೆ ಆಗಲಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಎಲ್ಲಾ ಶಾಲೆಯಲ್ಲಿಯೂ ಸೀಟು ಸಿಗಲಿದೆ. ಶಾಲೆಯಲ್ಲಿ ಸೀಟು ಸಿಗಲಿಲ್ಲ ಎಂಬ ನೊಇವನ್ನು ಮಾಡಿಕೊಳ್ಳುವಂತ ಸನ್ನಿವೇಶವೇ ಇರುವುದಿಲ್ಲ. ಶಿಕ್ಷಣ ಇಲಾಖೆಯಿಂದ ಈ ರೀತಿಯಾದ ಮಹತ್ವದ ಆದೇಶವನ್ನು ಹೊರಡಿಸಿರುವುದು ಹಡಣ್ಣು ಮಕ್ಕಳಿಗೆ ಖುಷಿಯನ್ನ ನೀಡಿದೆ. ಇನ್ಮುಂದೆ ಶಾಲೆಯಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಸೀಟನ್ನ ಮೀಸಲು ಇಡಲಾಗುತ್ತದೆ. ಇಲಾಖೆ ಈ ರೀತಿಯ ಆದೇಶವನ್ನು ನೀಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















