ಬೆಂಗಳೂರು: ರೈತರಿಗೆ ಪ್ರೋತ್ಸಾಹಧನ ಸಿಕ್ತಾ ಇದ್ರೆ ಹಸು ಸಾಕೋದಕ್ಕೆ ಇನ್ನಷ್ಟು ಅನುಕೂಲವಾಗುತ್ತದೆ. ಇದೀಗ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಲೀಟರ್ ಹಾಲಿಗೆ 1 ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಿದ್ರೆ, ಸರ್ಕಾರದಿಂದಾನೂ 5 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದು ರೈತರಿಗೆ ಯುಗಾದಿ ಹಬ್ಬದ ಉಡುಗೊರೆಯಾಗಿ ಸಿಕ್ತಾ ಇದೆ.
ಫೆಬ್ರವರಿ 1 ರಿಂದ ಮಾರ್ಚ್ 31ರವರೆಗೂ ಹಾಲು ಹಾಕಿರುವಂತಹ ರೈತರಿಗೆ ಈ ಪ್ರೋತ್ಸಾಹ ಧನ ಸಿಗಲಿದೆ. ಈ ಸಂಬಂಧ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ತಾರತಮ್ಯವಿಲ್ಲದೆ ಬಮೂಲ್ ನಿಂದ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರವೂ ಐದು ರೂಪಾಯಿ ಪ್ರೋತ್ಸಾಹ ಧನ ಕೊಡುತ್ತಿದೆ. ರೈತರಿಂದ 59,39,78,492 ಲೀಟರ್ ಹಾಲು ಖರೀದಿಸಿದ್ದೇವೆ. ಈ ಬಾರಿ 500 ಕೋಟಿ ಹೆಚ್ಚುವರಿ ಟರ್ನ್ ಓವರ್ ಮಾಡುವ ಗುರಿ ಇದೆ. ಕಾರ್ಮಿಕರಿಗೆ ಸುಮಾರು 6 ಕೋಟಿ ರೂಪಾಯಿ ಡಿಎ ಕೊಡಬೇಕು. ನಾವೂ ಸುಮಾರು 60 ಕೋಟಿ ರೂಪಾಯಿ ಲಾಭ ಗಳಿಸುವ ಮಟ್ಟಿಗೆ ಬಂದಿದ್ದೇವೆ.
ಹೀಗಾಗಿ ಸಿಬ್ಬಂದಿಗೆ ಬಾಕಿ ಹಣ ಕೊಡಲು ತೀರ್ಮಾನಿಸಲಾಯಿತು. ಗುತ್ತಿಗೆದಾರರಿಗೆ ಐದು ಸಾವಿರ ಬೋನಸ್ ಕೊಡುತ್ತೇವೆ. ಗುಣಮಟ್ಟದ ಹಾಲು ಕೊಡುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಮಾರುಕಟ್ಟೆ ಸೋರಿಕೆ ತಡೆದಿದ್ದೇವೆ. ತುಪ್ಪದ ಬೆಲೆ ಜಾಸ್ತಿ ಮಾಡಿದ್ದೇವೆ. ಚೀಸ್ ಜಾಸ್ತಿ ಮಾರಾಟವಾಗ್ತಿದೆ. ಗುಣಮಟ್ಟ ಇದೆ. ಡೆಲ್ಲಿ ಮದರ್ ಡೈರಿಗೆ ಎರಡು ಲಕ್ಷ ಕೊಡುತ್ತಿದ್ದೇವೆ. ದುಂದು ವೆಚ್ಚ ಕಡಿಮೆ ಮಾಡಿದ್ದೇವೆ. ಸಿಬ್ಬಂದಿ ಮತ್ತು ಮಾರುಕಟ್ಟೆ ಸುಧಾರಾಣೆ ಮಾಡಲಾಗಿದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











