ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ನಗರದ ಧವಳಗಿರಿ ಬಡಾವಣೆಯ ಕನಾ೯ಟಕ ಕಿವಿ,ಮೂಗು ಮತ್ತು ಗ೦ಟಲು ಆಸ್ಪತ್ರೆ ಮತ್ತು ಸ೦ಶೋಧನಾ ಕೇ೦ದ್ರ,ಹಾಗೂ ಕನಾ೯ಟಕ ಅತ್ಯಾಧುನಿಕ ವಾಕ್ ಮತ್ತು ಶೃವಣ ಕೇಂದ್ರದಲ್ಲಿ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಆಗಸ್ಟ್ 23 ರ ಶನಿವಾರ ಉಚಿತ ಕಿವಿ ತಪಾಸಣಾ ಶಿಬಿರವನ್ನು ಬೆಳಿಗ್ಗೆ 10:00 ರಿ೦ದ 02:00 ಗ೦ಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಕಿವಿ ಕೇಳುವಿಕೆ ಕಡಿಮೆಯಾಗಿರುವ ಸಮಸ್ಯೆಯಿ೦ದ ಬಳಲುತ್ತಿರುವ ರೋಗಿಗಳಿಗೆ ಉಚಿತವಾಗಿ ಕಿವಿ ತಪಾಸಣೆ ಹಾಗೂ ಶ್ರವಣ ಶಕ್ತಿ ಪರೀಕ್ಷೆಯನ್ನು ಮಾಡಲಾಗುವುದು. ಕಿವಿ ಸೋರುವುದು, ಕಿವಿಯಲ್ಲಿ ಅಹಿತಕರ ಶಬ್ದ , ತಲೆ ಸುತ್ತುವುದು, ಕಿವಿ ಕೇಳಿಸದಿರುವ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಶಿಬಿರದಲ್ಲಿ ರಿಯಾಯಿತಿ ದರದಲ್ಲಿ ಶ್ರವಣ ಸಾಧನಗಳನ್ನು ನೀಡಲಾಗುವುದು.
ಶಿಬಿರದ ವಿಳಾಸ: ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ) ನಂ 29,ಬಸವ ಭವನ,ದವಳಗಿರಿ ಬಡಾವಣೆ 2ನೇ ಹಂತ ಭೀಮಸಮುದ್ರ ರಸ್ತೆ, ಚಿತ್ರದುರ್ಗ 577501
ಈ ಶಿಬಿರಕ್ಕೆ ಹೆಸರನ್ನು ನೊಂದಾಯಿಸಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ : 9483519988
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















