Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಾಣಕ್ಯನೀತಿ :ಇಂತಹ ಮಗ ಮನೆಯಲ್ಲಿದ್ದರೆ ಇಡೀ ಕುಟುಂಬವೇ ನಾಶ!

---Advertisement---

ಆಚಾರ್ಯ ಚಾಣಕ್ಯರ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರು ಅಪ್ರತಿಮ ಬುದ್ಧಿವಂತರು ಮತ್ತು ಶ್ರೇಷ್ಠ ರಾಜತಾಂತ್ರಿಕರು. ಚಾಣಕ್ಯರು ತಮ್ಮ ‘ನೀತಿ ಶಾಸ್ತ್ರ’ದಲ್ಲಿ ಮಾನವ ಜೀವನಕ್ಕೆ ಉಪಯುಕ್ತವಾದ ಅನೇಕ ಪ್ರಮುಖ ವಿಷಯಗಳನ್ನು ತಿಳಿಸಿದ್ದಾರೆ. ಇಂದಿಗೂ ಕೂಡ ಅವರು ಹೇಳಿದ ಮಾತುಗಳನ್ನು ತಿಳಿದುಕೊಳ್ಳಲು ಜನರು ಅಪಾರ ಆಸಕ್ತಿ ತೋರಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಯಾವ ರೀತಿಯ ಗುಣವಿರುವ ಮಗ ಇಡೀ ಕುಟುಂಬಕ್ಕೆ ಕಂಟಕವಾಗುತ್ತಾನೆ ಎಂಬುದರ ವಿವರ ಇಲ್ಲಿದೆ.

ಹೆತ್ತವರ ಮಾತು ಕೇಳದ, ದುಷ್ಟರ ಸಹವಾಸ ಮಾಡುವ ಮಗ

ಚಾಣಕ್ಯರ ಪ್ರಕಾರ, ತಂದೆ-ತಾಯಿಯ ಮಾತುಗಳನ್ನು ಗೌರವಿಸದೆ ನಿರ್ಲಕ್ಷಿಸುವ ಮತ್ತು ಕುಟುಂಬಕ್ಕೆ ಬೆಲೆ ಕೊಡದೆ ಕೆಟ್ಟ ಸ್ನೇಹಿತರ ಸಹವಾಸ ಮಾಡುವ ಮಗ ಇಡೀ ಕುಟುಂಬಕ್ಕೆ ಕಪ್ಪು ಚುಕ್ಕೆಯಾಗುತ್ತಾನೆ. ಇಂತಹ ಮಗ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ, ಕುಟುಂಬದ ಗೌರವಕ್ಕೂ ಧಕ್ಕೆ ತರುತ್ತಾನೆ. ಹಾಗಾಗಿ ಮಕ್ಕಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ಬಾಲ್ಯದಲ್ಲೇ ಅವರನ್ನು ತಿದ್ದಿ ಮುನ್ನಡೆಸಬೇಕು.

ಸಮಾಜದಲ್ಲಿ ಕುಟುಂಬದ ಗೌರವಕ್ಕೆ ಧಕ್ಕೆ
ಕೆಟ್ಟ ನಡತೆಯುಳ್ಳ ಮಗನಿಂದಾಗಿ ಸಮಾಜದಲ್ಲಿ ಇಡೀ ಕುಟುಂಬ ತಲೆತಗ್ಗಿಸಬೇಕಾದ ಪರಿಸ್ಥಿತಿ ಬರುತ್ತದೆ. ಅಂತಹ ಮಗನ ವರ್ತನೆಯಿಂದಾಗಿ ಪೋಷಕರು ಇತರರಿಂದ ನಿಂದನೆಗಳನ್ನು ಕೇಳಬೇಕಾಗುತ್ತದೆ. ಇಡೀ ಕುಟುಂಬವೇ ಮಾನಸಿಕವಾಗಿ ನೋಂದು, ಸಮಾಜದ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಪೋಷಕರು ಯಾವಾಗಲೂ ಮಕ್ಕಳ ನಡವಳಿಕೆಯ ಮೇಲೆ ನಿಗಾ ಇಡುವುದು ಮುಖ್ಯ.

ವಂಶಕ್ಕೆ ತೇಜೋವಧೆ ತರುವ ಗುಣಗಳು
ಕೆಲವು ಮಕ್ಕಳು ಮಾಡಬೇಡ ಎಂದ ಕೆಲಸಗಳನ್ನೇ ಹಠ ಮಾಡಿ ಮಾಡುತ್ತಾರೆ. ಅಷ್ಟೇ ಅಲ್ಲದೆ, ಮನೆಗೆ ಜಗಳಗಳನ್ನು ತಂದಿಡುತ್ತಾರೆ. ಇಂತಹ ಮಕ್ಕಳನ್ನು ಬಾಲ್ಯದಲ್ಲೇ ಹದ್ದುಬಸ್ತಿನಲ್ಲಿಡದಿದ್ದರೆ, ದೊಡ್ಡವರಾದ ಮೇಲೆ ಅವರು ಯಾರ ಮಾತನ್ನೂ ಕೇಳುವುದಿಲ್ಲ. ಕೆಟ್ಟ ಗುಣಗಳನ್ನು ಹೊಂದಿರುವ ಮಗನಿಂದಾಗಿ ಇಡೀ ವಂಶಕ್ಕೇ ಕೀರ್ತಿ ಮಾಸಿಹೋಗುತ್ತದೆ ಎಂದು ಚಾಣಕ್ಯರು ತೀವ್ರವಾಗಿ ಎಚ್ಚರಿಸಿದ್ದಾರೆ.

ಬಾಲ್ಯದಲ್ಲೇ ಕಲಿಸಿ ಸಂಸ್ಕಾರ
ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಶಿಕ್ಷಣ ಮತ್ತು ಉತ್ತಮ ಸಂಸ್ಕಾರವನ್ನು ನೀಡಬೇಕು. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಪೋಷಕರು ಮನವರಿಕೆ ಮಾಡಿಕೊಡಬೇಕು. ಅವರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ.

Join WhatsApp

Join Now

Join Telegram

Join Now