ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ ಕಥೆಯನ್ನು ಹೊಂದಿದೆ. ಇದೀಗ ಸಿನಿಮಾ ಎಫೆಕ್ಟ್ ಸಂಭಾಜೀ ಕಥೆಯನ್ನ ಪಠ್ಯ ಪುಸ್ತಕದಲ್ಲಿ ಸೇರಿಸಲು ಒತ್ತಾಯ ಕೇಳಿ ಬರುತ್ತಿದೆ. ಶಾಲೆಯ ಮಕ್ಕಳು ಪಠ್ಯ ಪುಸ್ತಕದಲ್ಲಿ ಅನೇಕ ಇತಿಹಾಸಕಾರರ ಬಗ್ಗೆ ಓದಿ ತಿಳಿದುಕೊಂಡಿದ್ದಾರೆ. ಆದರೆ ಛತ್ರಪತಿ ಮಹಾರಾಜರ ಕಥೆಯನ್ನು ಇತಿಹಾಸದಲ್ಲಿ ಅಷ್ಟಾಗಿ ಸೇರಿಸಿಲ್ಲ. ಛಾವ ಸಿನಿಮಾ ನೋಡಿದ ಮೇಲೆ ಸಂಭಾಜಿ ಬಗ್ಗೆ ತಿಳಿಯುವಂತಾಗಿದೆ.
ಭಾರತದಲ್ಲಿ ಆಳ್ವಿಕೆ ನಡೆದಿದೆ. ಮೊಘಲ್ ರಾಜರ ಬಗ್ಗೆ ಹಲವು ವಿಷಯವನ್ನು ಶಾಲಾ ಪಠ್ಯದಲ್ಲಿ ಸೇರಿಸಲಾಗಿದೆ. ಬಾಬರ್, ಅಕ್ಬರ್, ಜಹಂಗೀರ್, ಔರಂಗಜೇಬ್ ಸೇರಿದಂತೆ ಹಲವರು ಬಗ್ಗೆ ಶಾಲಾ ಮಕ್ಕಳು ಓದುತ್ತಾರೆ. ಆದರೆ ಸಂಭಾಜಿ ಬಗ್ಗೆ ಪಠ್ಯದಲ್ಲಿ ಸೇರಿಸದೇ ಇರುವುದು ಸರಿಯಲ್ಲ ಎಂಬ ಚರ್ಚೆ ಶುರುವಾಗಿದೆ. ಮಕ್ಕಳಿಗೆ ನಮ್ಮ ನೆಲದ ರಾಜರ ಬಗ್ಗೆ ತಿಳಿಸಿಕೊಡಬೇಕಿದೆ ಎಂದು ಅನೇಕರು ಚರ್ಚೆ ಶುರು ಮಾಡಿದ್ದಾರೆ.
ಛಾವಾ ಸಿನಿಮಾದಲ್ಲಿ ದೇಶಭಕ್ತಿ, ಧರ್ಮಪ್ರಜ್ಞೆ ಎಲ್ಲವನ್ನು ಸಾರಿದೆ. ಹೀಗಾಗಿ ಈ ಸಿನಿಮಾದಲ್ಲಿ ಕಂಡ ದೇಶಭಕ್ತಿ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು. ಸಾಂಭಾಜಿ ಮಹಾರಾಜರ ಹೋರಾಟ ಮಕ್ಕಳಿಗೂ ತಿಳಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸದ್ಯ ಛಾವಾ ಸಿನಿಮಾ ಎಲ್ಲೆಡೆ ರಿಲೀಸ್ ಆಗಿ, ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಕೇವಲ 10 ದಿನಕ್ಕೆ 334.51 ಕೋಟಿ ಹಣವನ್ನ ಕಲೆಕ್ಷನ್ ಮಾಡಿದೆ. ಇನ್ನು ಭರ್ಜರಿಯಾಗಿ ಪ್ರದರ್ಶನವನ್ನ ಕಾಣ್ತಿದೆ. ರಶ್ಮಿಕಾ ಮಂದಣ್ಣ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















