Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉತ್ತಮ ಆರೋಗ್ಯಕ್ಕಾಗಿ ಶಿಸ್ತಿನ ಜೀವನಕ್ರಮ ಅಗತ್ಯ : ಎಂ.ಸಿ.ರಘುಚಂದನ್ ಅಭಿಪ್ರಾಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನವೆಂಬರ್. 09 : ಇಂದಿನ ದಿನಮಾನದಲ್ಲಿ ಮನುಷ್ಯ ತನ್ನ ಜೀವನ ಶೈಲಿ ಬದಲಾಯಿಸಿಕೊಳ್ಳದಿದ್ದರೆ ಭವಿಷ್ಯದ ಬದುಕು ತುಂಬಾ ಕಠೋರವಾಗಿರುತ್ತದೆ ಎನ್ನುವ ಸಂಗತಿಯನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ದೇವರಾಜು ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾ ಅಧಿಕಾರಿ ಎಂ.ಸಿ.ರಘುಚಂದನ್ ಅಭಿಪ್ರಾಯ ಪಟ್ಟರು.

ನಗರದ ಚಳ್ಳಕೆರೆ ಟೋಲ್‍ಗೇಟ್ ಬಳಿ ಇರುವ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಪ್ರಕೃತಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಜೀವನ ಶೈಲಿಯಿಂದಾಗಿ ಸದಾ ಒಂದಲ್ಲ ಒಂದು ಸಮಸ್ಯೆಯನ್ನು ಎದರಿಸುವಂತಾಗಿದೆ. ಆರೋಗ್ಯ ಸಮಸ್ಯೆ ಎಲ್ಲರನ್ನೂ ಇಂದು ಹೆಚ್ಚಾಗಿ ಕಾಡುತ್ತಿದೆ. ಮನುಷ್ಯ ಉತ್ತಮ ಆರೋಗ್ಯ ಹೊಂದಬೇಕಾದರೆ ಮೊದಲು ತನ್ನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಶಿಸ್ತಿನ ಜೀವನ ನಡೆಸಬೇಕು. ಇಲ್ಲವಾದರೆ ಬದುಕಿನಲ್ಲಿ ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದರು.

ಆರೋಗ್ಯದ ಮೇಲೆ ಗಾಢವಾದ ಪರಿಣಾಮ ಬೀರುವ ಯಾವುದೇ ಕೆಟ್ಟ ಆಲೋಚನೆಗಳು ನಮ್ಮ ಬಳಿ ಸುಳಿಯಬಾರದು. ಸಾಧ್ಯವಾದಷ್ಟು ಉತ್ತಮರ ಸಂಗಡ ಮಾಡಬೇಕು. ಕೆಟ್ಟ ಆಲೋಚನೆ, ಕೆಟ್ಟ ಅಭ್ಯಾಸಗಳು ಮತ್ತು ಮಾದಕ ವಸ್ತುಗಳ ಸೇವನೆ ನಮ್ಮ ಬದುಕನ್ನು ಹಾಳು ಮಾಡುತ್ತದೆ. ಈ ಕಾರಣದಿಂದಾಗಿ ಯುವಕರಾದ ನಾವು ನಮ್ಮ ಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ಆರೋಗ್ಯವಂತರಾಗಿ ಬದುಕಬೇಕು ಎಂದರೆ ನಮ್ಮ ಆಹಾರ ಪದ್ದತಿಯೂ ಬದಲಾಗಬೇಕು ಎಂದು ಅವರು ನುಡಿದರು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಶುದ್ಧವಾಗಬೇಕು. ನಮ್ಮ ದೃಷ್ಠಿಕೋನವೂ ಸರಿಯಾಗಿರಬೇಕು. ನಾವು ಬದುಕುತ್ತಿರುವ ಪರಿಸರ, ಸಮಾಜವನ್ನು ನಾವು ಸೂಕ್ಷ್ಮವಾಗಿ ಗ್ರಹಿಸಿಕೊಂಡು ಜೀವನ ನಡೆಸಬೇಕಿದೆ. ಇದು ಸಾಧ್ಯವಾಗಬೇಕು ಎನ್ನುವುದಾದರೆ ಆರ್ಯುವೇದ ಪದ್ದತಿಯನ್ನು ನಾವು ಅನುಸರಿಸಬೇಕಾಗಿದೆ ಎಂದು ರಘುಚಂದನ್ ಹೇಳಿದರು.

ನನಗೆ ನಮ್ಮ ತಂದೆಯವರು ಒಂದು ಶಿಸ್ತು ಕಲಿಸಿಕೊಟ್ಟಿದ್ದಾರೆ. ಸ್ವತಃ ಅವರೇ ಶಿಸ್ತಿನ ಬದುಕು ನಡೆಸಿ ನಮಗೆ ದಾರಿ ತೋರಿದ್ದಾರೆ. ಅವರ ದಾರಿಯಲ್ಲಿ ಮುನ್ನಡೆಯಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕಿ ಡಾ.ಪೃಥ್ವಿ ಎಸ್.ಕೆ. ಮಾತನಾಡಿ, ಆರ್ಯುವೇದ ಎನ್ನುವುದು ಇಂದಿನದಲ್ಲ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಮೊದಲು ಮನುಷ್ಯ ಆರ್ಯುವೇದವನ್ನೇ ಅನುಸರಿಸುತ್ತಿದ್ದ. ಕಾಲ ಬದಲಾದಂತೆ ಈ ಪದ್ದತಿಯೂ ಬದಲಾಗುತ್ತಿದೆ ಎಂದರು.

ಆರ್ಯುವೇದ ಚಿಕಿತ್ಸಾ ಪದ್ದತಿ ಪುರಾತನ ಕಾಲದಿಂದಲೂ ಬಂದಿದೆ. ನಮ್ಮ ಪೂರ್ವಿಕರು ಸಹ ಅದನ್ನು ಅನುಸರಿಸಿದ್ದಾರೆ. ಉತ್ತಮ ಆರೊಗ್ಯಕ್ಕಾಗಿ ಈ ಪದ್ದತಿಯನ್ನು ನಾವು ಅನುಸರಿಸಬೇಕಾದ ಅನಿವಾರ್ಯತೆ ಈಗ ಹೆಚ್ಚಿದೆ. ನಮ್ಮ ದೈನಂದಿನ ಚಟುವಟಿಕೆಯಲ್ಲಿ ನಾವು ಬದಲಾವಣೆ ತಂದುಕೊಳ್ಳಬೇಕಿದೆ. ಆಹಾರ ಪದ್ದತಿ, ಜೀವನ ಶೈಲಿಯಲ್ಲಿಯೂ ನಾವು ಕೆಲವು  ಬದಲಾವಣೆಯನ್ನು ಮಾಡಿಕೊಳ್ಳದಿದ್ದರೆ ತುಂಬಾ ಅಪಾಯ ಎದುರಿಸಬೇಕಾಗಿ ಬರುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಪ್ರಕೃತಿ ಆರ್ಯುವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ನವಾಜ್ ಅಹಮದ್ ಮಾತನಾಡಿ, ಆರ್ಯುವೇದವನ್ನು ಈಗ ಇಡೀ ದೇಶದಲ್ಲಿ ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರನ್ನೂ ಇದು ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶವೂ ಆಗಿದೆ ಎಂದರು.

ಆರ್ಯುವೇದದ ಮಹತ್ವ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದೊಂದು ಆಂದೋಲನವಾಗಬೇಕು ಎನ್ನುವ ಹಿನ್ನಲೆಯಲ್ಲಿ ಸರ್ಕಾರ ಮಹತ್ವ ಕೊಟ್ಟಿದೆ.ಜನರ ಸಹಭಾಗಿತ್ವವೂ ಇದಕ್ಕೆ ಮುಖ್ಯವಾಗಿದೆ ಎಂದರು.೦0

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಚಂದ್ರಕಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಸ್ಥೆಯ ವಿವಿಧ ವಿಭಾಗಗಳ ಪ್ರಾಂಶುಪಾಲರಾದ ಕೋಟ್ರೇಶ್,ಜಿ.ಇ.ಬೈರಸಿದ್ದಪ್ಪ, ಡಾ.ಶಿವಕುಮಾರ್, ಮಹಂತೇಶ್, ಮುಖ್ಯಶಿಕ್ಷಕ ಪಾಪಣ್ಣ, ಎಸ್‍ಎಲ್‍ವಿ ಪಿಯು ಪ್ರಾಂಶುಪಾಲ ಕೋಟ್ರೇಶ್, ತಿಪ್ಪೇಸ್ವಾಮಿ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು : ಕೋರ್ ಕಮಿಟಿಯಲ್ಲಿ ತೀರ್ಮಾನ

ಹುಬ್ಬಳ್ಳಿ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಜಿ.ಟಿ ದೇವೇಗೌಡರ ನೇತೃತ್ವದ ಕೋರ್ ಕಮಿಟಿಯಲ್ಲಿ ಈ ಸಂಬಂಧ ನಿರ್ಧಾರವಾಗಿದ್ದು, ಅಮಾನತು ಮಾಡಲಾಗಿದೆ. ಈ ಸಂಬಂಧ

ಬಿಜೆಪಿ ನಾಯಕನಿಗೆ ಮಾತ್ರ ಪೆನ್ ಡ್ರೈವ್ ಕೊಟ್ಟಿದ್ದೆ : ಶಾಕಿಂಗ್ ವಿಡಿಯೋ ಬಿಟ್ಟ ಡ್ರೈವರ್ ಕಾರ್ತಿಕ್

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನೇ ದಿನೇ ಹಲವು ವಿಚಾರಗಳು ಹೊರಗೆ ಬರುತ್ತಿವೆ. ನಿನ್ನೆಯಷ್ಟೇ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ, ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿ, ಕಾರ್ತಿಕ್ ಬಳಿ ಪೆನ್ ಡ್ರೈವ್

error: Content is protected !!