Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಗರೀಕರಿಗೆ ಬಂದೂಕು ತರಬೇತಿ ನೀಡುವುದು ಪೊಲೀಸ್ ಇಲಾಖೆ ಜವಾಬ್ದಾರಿ : ಎಸ್.ಪಿ.ಧರ್ಮೇಂದ್ರಕುಮಾರ್ ಮೀನಾ

---Advertisement---

 

ವರದಿ ಮತ್ತು ಫೋಟೋ ಕೃಪೆ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 7899864552

ಸುದ್ದಿಒನ್, ಚಿತ್ರದುರ್ಗ, ನವೆಂಬರ್.07 : ನಾಗರೀಕರಿಗೆ ಬಂದೂಕು ತರಬೇತಿ ನೀಡಿ ಸರ್ಟಿಫಿಕೇಟ್ ಕೊಡುವುದು ಪೊಲೀಸ್ ಇಲಾಖೆ ಜವಾಬ್ದಾರಿ. ಇದರಿಂದ ನಾಗರೀಕರು ಹಾಗೂ ಇಲಾಖೆ ನಡುವೆ ಸ್ನೇಹ ಸಂಬಂಧ ಬೆಸೆಯುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಹೇಳಿದರು.

ದಾವಣಗೆರೆ ರಸ್ತೆ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರೈಫಲ್ ಕ್ಲಬ್‍ಗೆ ಸೋಮವಾರ ಭೇಟಿ ನೀಡಿ ಚರ್ಚಿಸಿ ನಂತರ ಮಾತನಾಡಿದ ಅವರು ಪೊಲೀಸ್ ಫ್ರೆಂಡ್ಲಿಗೆ ಸಿ.ಆರ್.ಟಿ.ಸಿ. ಅನುಕೂಲವಾಗುತ್ತದೆ. ಬಂದೂಕು ತರಬೇತಿ ಶಿಬಿರವನ್ನು ವ್ಯಸ್ಥಿತಗಾಗಿ ಮುನ್ನಡೆಸಿಕೊಂಡು ಹೋಗಬೇಕು. ಪೊಲೀಸ್ ರೇಂಜ್ ಕೂಡ ಮಾಡಬಹುದು. ನನ್ನಿಂದ ಏನು ಸಹಾಯ ಬೇಕೋ ಅದನ್ನು ಪಡೆದುಕೊಳ್ಳಿ. ಆದರೆ ಕಾನೂನಾತ್ಮಕವಾಗಿ ಎಲ್ಲವೂ ಸರಿಯಿರಬೇಕು ಎಂದು ರೈಫಲ್ ಕ್ಲಬ್‍ನವರಿಗೆ ತಿಳಿಸಿದರು.

ಹೋಂಗಾರ್ಡ್ ಕಮಾಂಡೆಂಟ್ ಸಂಧ್ಯಾ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಪೊಲೀಸ್ ಇಲಾಖೆ ಜೊತೆ ಸೇರಿಕೊಂಡು ಹೋಂಗಾರ್ಡ್‍ನಿಂದಲು ಸಾಕಷ್ಟು ತರಬೇತಿಗಳನ್ನು ಕೊಡುತ್ತೇವೆ. ಬಂದೂಕು ತರಬೇತಿಯಿಂದ ಸಿಗುವ ಸರ್ಟಿಫಿಕೇಟ್‍ನಿಂದ ಬಂದೂಕು ಪರವಾನಗಿ ಪಡೆಯಲು ಸುಲಭವಾಗುತ್ತದೆ. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಇಲಾಖೆಯೊಂದಿಗೆ ಕೈಜೋಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ನ್ಯಾಯವಾದಿ ಫಾತ್ಯರಾಜನ್ ಮಾತನಾಡಿ ಪ್ರತಿ ವರ್ಷವೂ ಸಿ.ಆರ್.ಟಿ.ಸಿ.ಯಿಂದ ನಾಗರೀಕರಿಗೆ ಬಂದೂಕು ತರಬೇತಿಯನ್ನು ನೀಡಲಾಗುತ್ತಿದೆ. ರಕ್ಷಣಾಧಿಕಾರಿಗಳಾಗಿ ತಾವುಗಳು ಕೊಡುವ ಎಲ್ಲಾ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾನೂನು ಅಡಿಯಲ್ಲಿ ರೈಫಲ್ ಕ್ಲಬ್ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.

ರೈಫಲ್ ಕ್ಲಬ್ ಅಧ್ಯಕ್ಷ ಎಂ.ಕೆ.ಅನಂತರೆಡ್ಡಿ, ಕಾರ್ಯದರ್ಶಿ ಫೈಜುಲ್ಲಾ, ಖಜಾಂಚಿ ವೈ.ಬಿ.ಮಹೇಂದ್ರನಾಥ್, ಅರುಣ್, ಎಂ.ಸಿ.ಶಂಕರ್, ಗಾಯತ್ರಿ ಶಿವರಾಂ, ಸುರೇಶ್, ಮಹಮದ್ ಆಲಿ ಈ ಸಂದರ್ಭದಲ್ಲಿದ್ದರು.

ಫೈಲ್ವಾನ್ ಸದ್ದಾಂಹುಸೇನ್, ಮೃತ್ಯುಂಜಯ, ಸ್ಪೂರ್ತಿ ಇವರುಗಳನ್ನು ಸನ್ಮಾನಿಸಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment