Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಗ್ ಬಾಸ್ ಖ್ಯಾತಿಯ ರಜತ್, ವಿನಯ್ ಮೇಲೆ ಎಫ್ಐಆರ್ ದಾಖಲು ; ಕಾರಣವೇನು..?

---Advertisement---

ಸೋಷಿಯಲ್ ಮೀಡಿಯಾ ದೊಡ್ಡಮಟ್ಟಕ್ಕೆ ರೀಚ್ ಆಗುವುದಕ್ಕೆ ಶುರುವಾದ ಮೇಲಂತು ವೀವ್ಸ್ ಗಾಗಿ ಜನ ಏನೇನೋ ಮಾಡುವುದಕ್ಕೆ ಶುರು ಮಾಡಿದ್ದಾರೆ. ಜಸ್ಟ್ ಮನರಂಜನೆಗಾಗಿ ಕೆಲವೊಂದು ಸಲ ಕಾನೂನನ್ನು ಮೀರುತ್ತಾರೆ. ನೋಡುಗರಿಗೂ ತಪ್ಪು ಸಂದೇಶವನ್ನ ನೀಡುತ್ತಾರೆ. ಇದೀಗ ಅಂಥದ್ದೇ ಕಾರಣಕ್ಕೆ ವಿನಯ್ ಗೌಡ ಹಾಗೂ ರಜತ್ ಕಿಶನ್ ವಿರುದ್ಧ ದೂರು ದಾಖಲಾಗಿದೆ.

 

ಇತ್ತೀಚೆಗೆ ವಿನಯ್ ಗೌಡ ಹಾಗೂ ರಜತ್ ಕಿಶನ್ ಸ್ಟೈಲ್ ಆಗಿ ವಿಡಿಯೋವೊಂದನ್ನ ಮಾಡಿದ್ದರು. ಇಬ್ಬರು ಒಳ್ಳೆ ಗತ್ತಿನಲ್ಲಿ ಬಂದು ವಿಡಿಯೋಗೆ ಪೋಸ್ ನೀಡಿದ್ದರು. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ, ಕೈಯಲ್ಲಿಂದು ಲಾಂಗ್ ಹಿಡಿದು ಬೀಸುತ್ತಾ ವಿಡಿಯೋ ಮಾಡಿದ್ದರು. ಇದರಲ್ಲಿ ನಟ ದರ್ಶನ್ ಅವರ ಮೆಜೆಸ್ಟಿಕ್ ಹಾಡಿಗೆ ಸ್ಲೋ ಮೋಷನ್ ನಲ್ಲಿ ವಿಡಿಯೋ ಮಾಡಿದ್ದರು. ಈ ವಿಡಿಯೋ ನೋಡಿದವರಿಗೆ ಭಯದ ವಾತಾವರಣವೇ ಮೂಡಿತ್ತು. ಹೀಗಾಗಿ ಒದರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಬಸವೇಶ್ವರ ನಗರ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಸದ್ಯದಲ್ಲಿಯೇ ತನಿಖೆಗೆ ಆರೋಪಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸಲಿದ್ದಾರೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಸೆಲೆಬ್ರೆಟಿಯಾಗಿ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಫಾಲೋವರ್ಸ್ ನ ಇಟ್ಟುಕೊಂಡು ಈ ರೀತಿಯಾದ ರೀಲ್ಸ್ ಮಾಡೋದು ಎಷ್ಟು ಸರಿ‌. ಪ್ರಚೋದನೆ ಕೊಟ್ಟಂತೆ ಆಗುವುದಿಲ್ಲವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಪೊಲೀಸರು ಅವರಿಬ್ಬರ ಮೇಲೂ ಕೇಸ್ ದಾಖಲಿಸಿದ್ದಾರೆ. ಕೇಸ್ ರಿಜಿಸ್ಟರ್ ಆಗುತ್ತಿದ್ದಂತೆ ರಜತ್ ವಿಡಿಯೋ ಡಿಲೀಟ್ ಮಾಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment