Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ್ರೆ ಬರಗಾಲ : ಮಾಜಿ ಶಾಸಕ ಸುರೇಶ್ ಬಾಬು

Facebook
Twitter
Telegram
WhatsApp

 

ಕುರುಗೋಡು. (ಜೂ.16) : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ್ರೆ ಸಾಕು ಬರಗಾಲ ಸೃಷ್ಟಿಯಾಗುತ್ತದೆ ಎಂದು ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ಸರಕಾರದ ವಿರುದ್ಧ ವ್ಯಂಗ್ಯವಾಡಿದರು.

ಪಟ್ಟಣದ ಶ್ರೀ ದೊಡ್ಡಬಸವೇಶ್ವರ ನಿಲಯದಲ್ಲಿ ಹಮ್ಮಿಕೊಂಡಿದ್ದ ಆತ್ಮಾವಲೋಕನ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದದೆ, ಶಕ್ತಿಯುತವಾಗಿ ಇರಿ ಇವತ್ತು ನಾನು ಸೋತಿರಬಹುದು, ಅಧಿಕಾರ ಇಲ್ಲದಿರಬಹುದು, ನಿತ್ಯ ನಿಮ್ಮ ಸಂಪರ್ಕ ದಲ್ಲಿ ಇರುತ್ತೇನೆ ಜನರಿಗೆ ಯಾವುದೇ ಅನ್ಯಾಯ ಆಗುವುದಕ್ಕೆ ಬಿಡದೆ ಹೋರಾಟ ಮುಂದುವರಿಸುತ್ತೇನೆ ಎಂದು ಕಾರ್ಯಕರ್ತರಿಗೆ ಶಕ್ತಿ ತುಂಬಿದರು.

ಕ್ಷೇತ್ರದ ಶಾಸಕರು ಕಾಲುವೆ ಮೇಲೆ ಯಾವ ರೈತರು ಹೋಗಬಾರದು ಎರಡು ಬೆಳೆಗೆ ನೀರು ಕೊಡಿಸುತ್ತೇನೆ ಎಂದು ಹೇಳಿ ಗೆದ್ದ ತಿಂಗಳಲ್ಲಿ ತುಂಗಭದ್ರಾ ಜಲಾಶಯದಲ್ಲಿ ನೀರು ಇಲ್ಲದೆ ಬರಿದಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಪಕ್ಷದ ಕರಪತ್ರ ಹಿಡಿದುಕೊಂಡು ರಾಜಕಾರಣ ಮಾಡಿಲ್ಲ ಬದಲಾಗಿ ಗ್ಯಾರಂಟಿ ಕಾರ್ಡ್ ಗಳನ್ನು ಹಿಡಿದು ಜನರ ದಾರಿ ತಪ್ಪಿಸಿ ಮತಗಳನ್ನನು ಸೆಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿ ಅವರ 5 ಗ್ಯಾರಂಟಿ ಯೋಜನೆ ಗಳಲ್ಲಿ ಶಾಸಕ ಗಣೇಶ್ ಅವರು ಕ್ಷೇತ್ರದ ಮಹಿಳೆಯರಿಗೆ 500 ಕ್ಕೆ ಗ್ಯಾಸ್ ಸಿಗಲಿದೆ ಎಂದು ನಮೂದಿಸಿ ಕ್ಷೇತ್ರದ ಮಹಿಳೆಯರಿಗೆ ಅನ್ಯಾಯ ಎಸಗಿದ್ದಾರೆ ಆದ್ದರಿಂದ ಕೂಡಲೇ ಅವರು ಕ್ಷೇತ್ರದ ಮಹಿಳೆಯರಿಗೆ 500 ಕ್ಕೆ ಗ್ಯಾಸ ಸಿಗುವ ಯೋಜನೆ ಜಾರಿಗೆ ತರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದರು.

ಶಾಸಕ ಗಣೇಶ್ ಅವರು ಜಾಗ ಇಲ್ಲದವರಿಗೆ ಜಾಗ ಕೊಡುಸುತ್ತೇವೆ ಹಾಗೆ ಮನೆ ಇಲ್ಲದವರಿಗೆ ಮನೆ ಮಾಡಿ ಕೊಡುತ್ತೇವೆ ಅಂತ ಸುಳ್ಳು ಭರವಸೆ ಗಳನ್ನು ನೀಡಿ ಜನರಿಗೆ ಮೋಸ ಮಾಡಿದ್ದಾರೆ ಅಂತಹ ಜನರನ್ನು ಗುರುತಿಸಿ ಅವರಿಗೆ ಜಾಗ ಮತ್ತು ಮನೆ ಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ತಿಳಿಸಿದರು.

200 ಯೂನಿಟ್ ವಿದ್ಯುತ್ ಉಚಿತ ಅಂತ ಹೇಳಿದವರು ಬಿಲ್ ಕಟ್ಟುವಂತೆ ಗ್ರಾಹಕರ ಮನೆಗೆ ಹೋಗುತ್ತಿದ್ದಾರೆ. ಇದು ಯಾವ ನ್ಯಾಯ. ಅಲ್ಲದೆ ಡಬಲ್ ಪಟ್ಟು ಬಿಲ್ ಬರುತ್ತಿದ್ದು, ಇದಕ್ಕೆ ಸಾರ್ವಜನಿಕರು ಬೇಸತ್ತು ಹೋಗಿದ್ದು, ಯಾವ 200 ಯೂನಿಟ್ ವಿದ್ಯುತ್ ಉಚಿತ ಬೇಡಾ ಮೊದಲ ನಂತೆ ಇರಲಿ ಎಂಬ ಮಟ್ಟಕ್ಕೆ ಜನರು ಬಂದಿರುವುದು ದುರದೃಷ್ಟ ಎಂದರು.

ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಮಾಡಿದ್ದಾರೆ. ಆದ್ರೆ ಗಂಡು ಮಕ್ಕಳು ವೋಟ್ ಹಾಕಿಲ್ವಾ ಅವರಿಗೆ ಕೂಡ ಉಚಿತ ಬಸ್ ನೀಡಬಹುದಿತ್ತು ಎಂದು ಪ್ರಶ್ನಿಸಿದರು.

ಈ ಯೋಜನೆ ಯಿಂದ ಖಾಸಗಿ ಬಸ್, ಟ್ಯಾಕ್ಷಿ, ಪ್ಯಾಸೆಂಜರ್ ಆಟೋ ಮಾಲೀಕರು ಬಹಳ ವರ್ಷ ಗಳಿಂದ ಇದೆ ವೃತ್ತಿ ಯನ್ನು ನಂಬಿದವರಿಗೆ ಜೀವನ ನಡೆಸುವುದು ತುಂಬಾ ಕಷ್ಟಕರ ವಾಗಿದೆ ಅಲ್ಲದೆ ರಸ್ತೆ ಬದಿಯಲ್ಲಿ ಮಹಿಳೆ ಯರು ನಿಂತು ಬಸ್ ಗೆ ಕೈ ಮಾಡಿದ್ರೆ ನಿಲ್ಲಿಸದೆ ಹಾಗೆ ಹೋಗುತ್ತಿವೆ ಇಂತಹ ಬೇಕಾಬಿಟ್ಟಿ ಯೋಜನೆ ಗಳನ್ನು ಜಾರಿಗೆ ತರುವುದಾದರು ಯಾಕೆ ಎಂದು ಸರಕಾರದ ವಿರುದ್ಧ ಗುಡುಗಿದರು.

ಇನ್ನೂ ಪ್ರತಿ ಕುಟುಂಬದ ಸದಸ್ಯನಿಗೆ 10 ಕೆಜಿ ಅಕ್ಕಿ ಉಚಿತ ಅಂತ ಹೇಳಿದ್ದಾರೆ. ಈಗಾಗಲೇ ಕೇಂದ್ರ ಸರಕಾರ 5 ಕೆಜಿ ಅಕ್ಕಿ ಉಚಿತ ವಾಗಿ ನೀಡುತ್ತಿದೆ, ಆದರ ಜೊತೆಗೆ ಇವರು 10 ಕೆಜಿ ಸೇರಿ ಒಟ್ಟು 15 ಕೆಜಿ ಅಕ್ಕಿ ವಿತರಣೆ ಮಾಡಬೇಕು ಎಂದರು.

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ದಿನ ದಿನಕ್ಕೆ ವಿಳಂಬ ವಾಗುತ್ತಿದ್ದು, ಬೇಕಂತ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು.

ಪದವಿ ದರರಿಗೆ 3000 ಅಂತ ಹೇಳಿ ಇವಾಗ 2023 ರಲ್ಲಿ ಮುಗಿಸಿದವರಿಗೆ ಅಂತ ಇಲ್ಲ ಸಲ್ಲದ ಷರತ್ತು ಗಳನ್ನು ಹೊಡ್ದಿದ್ದಾರೆ ಇದೆ ಷರತ್ತು ಗಳು ಪ್ರಾರಂಭ ದಲ್ಲಿ ಏಳಬೇಕಿತ್ತು ರಂದು ಬೇಸಾರ ವ್ಯಕ್ತಪಡಿಸಿದರು.

ಈ ಹಿಂದೆ ಬಿಜೆಪಿ ಸರಕಾರ ಜನರಿಗೆ ನೀಡುತಿದ್ದ ಅನುದಾನ ಯೋಜನೆಗಳನ್ನು ಕಡಿತಗೊಳ್ಳಿಸುತ್ತಿದ್ದಾರೆ ಕಾಂಗ್ರೆಸ್ ನವರಿಗೆ ಅಭಿವೃದ್ಧಿ ಪರ ಚಿಂತನೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ರಾಮಲಿಂಗಪ್ಪ, ತಿಮ್ಮಾರೆಡ್ಡಿ, ಕ್ಷೇತ್ರದ ಅಧ್ಯಕ್ಷ ಅಳಳ್ಳಿ ವೀರೇಶ್, ಜಿ. ಸುಧಾಕರ್, ನರಸಪ್ಪ, ಸುನಿಲ್, ಡಿಸ್ ರಾಜು, ಕೋಮಾರಿ ನಾಯ್ಕ್, ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಹಾಗೂ ರೇವಣ್ಣರಿಗೆ ನೋಟೀಸ್ ನೀಡಿದ ಎಸ್ಐಟಿ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ವಿಡಿಯೋದಲ್ಲಿ ಗುರುತು ಸಿಕ್ಕವರನ್ನು ಕರೆಸಿ , ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರ ಕೆಸೆರೆಚಾಟದ ನಡುವೆ ತನಿಖೆ ತೀವ್ರಗೊಂಡಿದೆ. ಎಡಿಜಿಪಿ ಬಿಜಯ್

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

error: Content is protected !!