Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಕಲಿ ನಂದಿನಿ ತುಪ್ಪ : ಕಿಡಿಗೇಡಿಗಳ ಪ್ಲ್ಯಾನ್ ತಪ್ಪಿಸಲು ಕೆಎಂಎಫ್ ಸ್ಕ್ಯಾನ್ ಕೋಡ್ ಐಡಿಯಾ

---Advertisement---

ಬೆಂಗಳೂರು: ನಮ್ಮ ರಾಜ್ಯದ ನಂದಿನಿ ತುಪ್ಪಕ್ಕೆ ಬಾರೀ ಡಿಮ್ಯಾಂಡ್ ಇದೆ. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಸಾದ ತಯಾರು ಮಾಡುವುದಕ್ಕೂ ನಮ್ಮದೇ ನಂದಿನಿ ತುಪ್ಪ ಬಳಕೆ ಮಾಡ್ತಾರೆ. ಯಾಕಂದ್ರೆ ಅಷ್ಟು ಪ್ಯೂರ್ ಆಗಿರುತ್ತದೆ. ಇನ್ನು ರಾಜ್ಯದ ಪ್ರತಿಯೊಂದು ಮನೆಯಲ್ಲೂ ನಂದಿನಿಯ ಪ್ರಾಡಕ್ಟ್ ಅನ್ನೇ ಬಳಕೆ ಮಾಡ್ತಾರೆ. ನಂದಿನಿ ತುಪ್ಪ, ನಂದಿನಿ ಹಾಲು, ಮೊಸರು ಹೀಗೆ. ಆದರೆ ಕಿಡಿಗೇಡಿಗಳ ಕಣ್ಣು ಈಗ ನಂದಿನಿಯ ಮೇಲೂ ಬಿದ್ದಿದೆ.

ಕಿಡಿಗೇಡಿಗಳು ಹಣ ಮಾಡುವುದಕ್ಕೆ ಯಾವುದ್ಯಾವುದೋ ಮಾರ್ಗಗಳನ್ನ ಹಿಡಿಯುತ್ತಾ ಇರುತ್ತಾರೆ. ದೊಡ್ಡ ಬ್ರಾಂಡ್ ಗಳನ್ನು ನಕಲಿ ಮಾಡಿ, ಅದೇ ಬ್ರ್ಯಾಂಡ್ ಏನೋ ಅನ್ನಿಸಬೇಕು ಆ ರೀತಿ ಮಾರಾಟ ಮಾಡುತ್ತಾರೆ. ಈಗ ಆ ರೀತಿಯ ನಕಲಿ ಆಟ ನಂದಿನಿ ಮೇಲೂ ಶುರುವಾಗಿದೆ. ಸೇಮ್ ಟು ಸೇಮ್ ನಂದಿನಿಯದ್ದೇ ತುಪ್ಪ ಎನ್ನಬೇಕು. ಆ ರೀತಿ ನಕಲಿ ಮಾಡಿ ಮಾರಾಟ ಮಾಡ್ತಾ ಇದ್ದಾರೆ. ಈಗಾಗಲೇ ಆ ರೀತಿ ನಕಲಿ ಮಾಡುತ್ತಿದ್ದ ಕೆಲವರನ್ನ ಬಂಧಿಸಲಾಗಿದೆ.

ಆದ್ರೆ ಈ ಕಿಡಿಗೇಡಿಗಳಿಂದ ಬ್ರ್ಯಾಂಡ್ ಗೆ ತೊಂದರೆಯಾಗದಂತೆ ಕಾಪಾಡಿಕೊಳ್ಳುವುದಕ್ಕೆ ಹೊಸ ಪ್ಲ್ಯಾನ್ ಅನ್ನು ಕೆಎಂಎಫ್ ರೂಪಿಸಿದೆ. ತನ್ನ ಪ್ರತಿಯೊಂದು ಬ್ರ್ಯಾಂಡ್ ಮೇಲೆ ಕ್ಯೂಆರ್ ಕೋಡ್ ಅನ್ನು ಮುದ್ರಿಸುವುದು. ಅದನ್ನ ಸ್ಕ್ಯಾನ್ ಮಾಡಿದರೆ ಎಲ್ಲಿಂದ ಮ್ಯಾನಿಫ್ಯ್ರಾಕ್ಚರ್ ಆಯ್ತು ಸೇರಿದಂತೆ ಎಲ್ಲಾ ಮಾಹಿತಿಯೂ ಅದರಲ್ಲಿಯೇ ಸಿಗುತ್ತದೆ. ಈ ಮೂಲಕ ಒರಿಜಿನಲ್ ಪ್ರಾಡಕ್ಟ್ ಯಾವ್ದು, ನಕಲಿ ಪ್ರಾಡಕ್ಟ್ ಯಾವುದು ಎಂಬುದನ್ನು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ ಎಂಬುದು ಕೆಎಂಎಫ್ ಐಡಿಯಾ. ಆ ಬಳಿಕ ಈ ಕಿಡಿಗೇಡಿಗಳು ನಂದಿನಿ ತಂಟೆಗೆ ಬರದೆ ಸುಮ್ಮನಾಗ್ತಾರಾ ಎಂಬುದನ್ನ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now