Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಎಲ್ಲದ್ದಕ್ಕೂ ಶಿಕ್ಷಣವೇ ಮೂಲ ಕಾರಣ : ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ವಿಧಾನ ಮಂಡಲ, ಸಂಸತ್, ಶಾಸನ ಹೇಗೆ ರಚನೆಯಾಗುತ್ತದೆ ಎನ್ನುವುದನ್ನು ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ತಿಳಿಸಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ 2022-23 ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಅಣಕು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ನವಭಾರತ ಸೃಷ್ಟಿಯಾಗಬೇಕಾಗಿರುವುದರಿಂದ ನಮ್ಮ ರಾಜ್ಯ ದೇಶದಲ್ಲಿ ವಿಧಾನಸಭೆ, ಸಂಸತ್ ಹೇಗೆ ನಡೆಯುತ್ತದೆ. ಎಲ್ಲಿಂದ ಆರಂಭವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಎಲ್ಲದ್ದಕ್ಕೂ ಶಿಕ್ಷಣವೇ ಮೂಲ ಕಾರಣ ಎನ್ನುವುದನ್ನು ಮಕ್ಕಳು ತಿಳಿದುಕೊಂಡಿರಬೇಕು. ಆಡಳಿತ ಪಕ್ಷ, ವಿರೋಧ ಪಕ್ಷದವರ ಜವಾಬ್ದಾರಿ ಏನು ಎನ್ನುವುದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಶಾಲಾ ಹಂತದಲ್ಲಿ ಯುವ ಸಂಸತ್ ಸ್ಪರ್ಧೆ ನಡೆದ ನಂತರ ತಾಲ್ಲೂಕು ಮಟ್ಟದಲ್ಲಿಯೂ ಇಂತಹ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಎಲ್ಲರೂ ನೆನೆಯಬೇಕು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿ ಜಾಗೃತಿ ಮೂಡಿಸುವುದಕ್ಕಾಗಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಿದೆ. ಹದಿನೆಂಟರಿಂದ ಇಪ್ಪತ್ತು ವರ್ಷ ವಯೋಮಾನದ ಮತದಾರರು ದೇಶದಲ್ಲಿ 60 ಕೋಟಿಯಷ್ಠಿದ್ದಾರೆ.

ಯುವಕ/ಯುವತಿಯರು ಮತದಾನದ ಹಕ್ಕು ಪಡೆದಿರುವುದರಿಂದ ಉತ್ತಮವಾದ ಪ್ರಜೆಗಳನ್ನು ರೂಪಿಸುವ ಕಾರ್ಯಕ್ರಮ ಇದಾಗಿದೆ. ಶಿಕ್ಷಣ, ಆರೋಗ್ಯ ದೇಶಕ್ಕೆ ಬೆನ್ನೆಲುಬು. ಯಾವ ದೇಶ ಶಿಕ್ಷಣದಲ್ಲಿ ಮುಂದಿರುತ್ತದೋ ಅಲ್ಲಿ ಪ್ರಜಾಪ್ರಭುತ್ವ ಬಲವಾಗಿರುತ್ತದೆ. ಪ್ರಯತ್ನ ಶ್ರದ್ದೆಯಿಂದ ಕನಸು ನನಸಾಗಬೇಕು. ಕರಾವಳಿ, ಉತ್ತರ ಕರ್ನಾಟಕದ ಮಕ್ಕಳಿಗಿಂತ ನಮ್ಮ ಜಿಲ್ಲೆಯ ಮಕ್ಕಳು ಹೆಚ್ಚು ಪ್ರತಿಭಾವಂತರು ಎನ್ನುವುದರಲ್ಲಿ ಅನುಮಾನವಿಲ್ಲ.

ನಿಮ್ಮಲ್ಲಿರುವ ಜ್ಞಾನ, ಬುದ್ದಿವಂತಿಕೆಯನ್ನು ಹತ್ತನೆ ತರಗತಿ ಪರೀಕ್ಷೆಯಲ್ಲಿ ತೋರಿಸಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆ ಬದುಕುವ ಕೌಶಲ್ಯವನ್ನು ಮಕ್ಕಳಿಗೆ ಕಲಿಸುವ ಜವಾಬ್ದಾರಿ ಶಿಕ್ಷಕರುಗಳು ಹಾಗೂ ಇಲಾಖೆ ಮೇಲಿದೆ. ಬಲಿಷ್ಠ ಭಾರತ ನಿರ್ಮಾಣ ಮಕ್ಕಳ ಕೈಯಲ್ಲಿರುವುದರಿಂದ ಸಂಸ್ಕೃತಿ, ಸಂಸ್ಕಾರವನ್ನು ಚಿಕ್ಕಂದಿನಿಂದಲೇ ಕಲಿಸಬೇಕೆಂದು ಶಿಕ್ಷಕರುಗಳಲ್ಲಿ ಮನವಿ ಮಾಡಿದರು.

ಪ್ರತಿದಿನ ಸವಾಲು ಎದುರಿಸುವ ಇಲಾಖೆ ನಮ್ಮದು. ಜಿಲ್ಲೆಯಲ್ಲಿ ಎರಡು ಲಕ್ಷದ ಅರವತ್ತು ಸಾವಿರ ಮಕ್ಕಳಿದ್ದಾರೆ. ಸೃಜನಶೀಲತೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಹೆಣ್ಣು ಮಕ್ಕಳು ತನ್ನನ್ನು ತಾನು ರಕ್ಷಿಸಿಕೊಳ್ಳಲು ಕರಾಟೆಯನ್ನು ಕಲಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ನಾನು ಕೈಮರವಾಗಿ ಕೆಲಸ ಮಾಡುತ್ತೇನೆ. ಅದಕ್ಕೆ ಜೋತುಬೀಳಬೇಡಿ. ದಾರಿ ತೋರಿಸುವುದಷ್ಟೇ ಶಿಕ್ಷಕರು, ಶಿಕ್ಷಣ ಇಲಾಖೆ ಕೆಲಸ. ಗುರಿ ತಲುಪುವುದು ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.

ಯುವ ಸಂಸತ್ ಸ್ಪರ್ಧೆಯ ನೋಡಲ್ ಅಧಿಕಾರಿ ಹಾಗೂ ವಿಷಯ ಪರಿವೀಕ್ಷಕ ಚಂದ್ರಣ್ಣ, ವಿಷಯ ಪರಿವೀಕ್ಷಕರುಗಳಾದ ಸವಿತಾ, ಬಸವರಾಜ್ ಓಲೇಕಾರ್, ತೀರ್ಪುಗಾರರಾದ ಮಂಜುನಾಥ್ ಟಿ. ಬುಡೇನ್‍ಸಾಬ್, ಸುಧೀರ್‍ಕುಮಾರ್ ಸೋಲಂಕಿ ವೇದಿಕೆಯಲ್ಲಿದ್ದರು.
ಶಿಕ್ಷಕ-ಶಿಕ್ಷಕಿಯರು ಸ್ಪರ್ಧೆಯಲ್ಲಿ ಹಾಜರಿದ್ದರು.

ಮುಖ್ಯಮಂತ್ರಿ, ಗೃಹಮಂತ್ರಿ, ಶಿಕ್ಷಣ ಮಂತ್ರಿ, ಆರೋಗ್ಯ ಮಂತ್ರಿ, ಸಮಾಜ ಕಲ್ಯಾಣ ಮಂತ್ರಿ, ವಿರೋಧ ಪಕ್ಷದ ನಾಯಕರು, ಹಾಗೂ ಶಾಸಕರುಗಳ ರೀತಿ ವಿದ್ಯಾರ್ಥಿಗಳು ಅಣಕು ಸ್ಪರ್ಧೆಯಲ್ಲಿ ತೊಡಗಿ ಎಲ್ಲರ ಗಮನ ಸೆಳೆದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

  ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ

error: Content is protected !!