Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಧ್ಯರಾತ್ರಿ ಮುಕ್ತಾಯವಾದ ಇಡಿ ದಾಳಿ : ಶಾಸಕ ವೀರೇಂದ್ರ ಪಪ್ಪಿ ಅವರ ಸಹೋದರ ಹೇಳಿದ್ದೇನು..?

---Advertisement---

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 : ನಿನ್ನೆ ಇದ್ದಕ್ಕಿದ್ದ ಹಾಗೇ ಇಡಿ ಅಧಿಕಾರಿಗಳು ಚಿತ್ರದುರ್ಗ ಶಾಸಕರಿಗೆ ಶಾಕ್ ನೀಡಿದ್ದರು. ಬೆಳಗ್ಗಿನ ಜಾವ ಅಂದ್ರೆ 5.30ಕ್ಕೆಲ್ಲ ವೀರೇಂದ್ರ ಪಪ್ಪಿ ಅವರ ಚಳ್ಳಕೆರೆ ಮನೆಗೆ ಹೋಗಿ ಎಲ್ಲಾ ತಪಾಸಣೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆನ್ಲೈನ್ ಆ್ಯಪ್ ಗಳಿಗೆ ವೀರೇಂದ್ರ ಪಪ್ಪಿ ಅವರು ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಇಡಿ ದಾಳಿ ನಡೆಸಿದೆ ಎನ್ನಲಾಗಿದೆ.

ಮಧ್ಯರಾತ್ರಿ ದಾಳಿ ಅಂತ್ಯವಾದ ಬಳಿಕ ವೀರೇಂದ್ರ ಪಪ್ಪಿ ಸಹೋದರ ನಾಗರಾಜ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಏನಿದೆಯೋ ಅದರ ಪ್ರಕಾರ ನಾವು ಉತ್ತರ ಕೊಡ್ತೀವಿ ಎಂದಿದ್ದಾರೆ. ತಮ್ಮ ವೀರೇಂದ್ರ ಪಪ್ಪಿ ಅವರನ್ನ ವಶಕ್ಕೆ ಪಡೆದಿದ್ದಾರಾ ಅಂದ್ರೆ ಇನ್ನು ಇಲ್ಲ ಬೆಂಗಳೂರಿನಲ್ಲಿಯೇ ಇದ್ದಾರೆ ಎಂಬ ಉತ್ತರ ನೀಡಿದ್ದಾರೆ. ಉದ್ದೇಶ ಏನಿಲ್ಲ. ನಾರ್ಮಲ್ ಆಗಿಯೇ ದಾಳಿ ನಡೆಸಿದ್ದಾರೆ. ಯಾವುದಕ್ಕೂ ನೋಟೀಸ್ ಕೊಟ್ಟಿಲ್ಲ. ನೋಟೀಸ್ ಕೊಟ್ಟ ಮೇಲೆ ಉತ್ತರ ಕೊಡ್ತೀವಿ ಎಂದಿದ್ದಾರೆ.

ನಮ್ಮ ಪ್ರಾಪರ್ಟಿಯದ್ದು ಏನೆಲ್ಲಾ ದಾಖಲೆಗಳಿದ್ದವೋ ಅದನ್ನೆಲ್ಲಾ ತೆಗೆದುಕೊಂಡು ಹೋಗಿದ್ದಾರೆ. ಅವೆಲ್ಲಾ ಲೀಗಲ್ ಆಗಿಯೇ ಇವೆ. ಇನ್ ಕಂ ಟ್ಯಾಕ್ಸ್ ಐಟಿಆರ್ ಎಲ್ಲಾ ಕೇಳಿದ್ದಾರೆ. ಅದೆಲ್ಲವನ್ನು ಸಹ ನೀಡಿದ್ದೇವೆ. ಇದಾದ ಮೇಲೆ ಏನೇ ಪ್ರಶ್ನೆಗಳನ್ನ ಕೇಳಿದರು ಎಲ್ಲದಕ್ಕೂ ನಾವೂ ಉತ್ತರ ಕೊಡ್ತೇವೆ. ಇಂಥ ದಿನ ಬರಬೇಕು ಅಂತಾನು ಹೇಳಿಲ್ಲ. ಬೆಂಗಳೂರಿನ ವಿಚಾರ ಏನು ಗೊತ್ತಿಲ್ಲ. ಪಪ್ಪಿಯನ್ನು ವಿಚಾರಣೆ ನಡೆಸಿದ್ದಾರೆ ಅಷ್ಟೆ. ಅವರು ಯಾವಾಗ ಕರೆದರು ಹೋಗ್ತೀವಿ. ಎಲ್ಲವನ್ನು ಕಾನೂನಾತ್ಮಕವಾಗಿಯೇ ಉತ್ತರ ನೀಡ್ತೀವಿ ಅಂತ ವೀರೇಂದ್ರ ಪಪ್ಪಿ ಅವರ ಅಣ್ಣ ನಾಗರಾಜ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment